How to Delink an Aadhaar Card From a PAN Card: ಆಧಾರ್ ಪ್ಯಾನ್ ಲಿಂಕ್ ಮಾಡಲು 2023ರ ಜೂನ್ 30 ರವರೆಗೆ ಗಡುವನ್ನು ವಿಸ್ತರಿಸಲಾಗಿದೆ. ಪ್ಯಾನ್‌ನೊಂದಿಗೆ ಇನ್ನೂ ಆಧಾರ್ ಲಿಂಕ್ ಮಾಡದಿರುವವರು ಮುಂದಾಗಬಹುದಾದ ಸಮಸ್ಯೆಗಳನ್ನು ತಪ್ಪಿಸಲು ನಿಗದಿತ ಗಡುವಿನೊಳಗೆ ತಪ್ಪದೇ ಆಧಾರ್-ಪ್ಯಾನ್ ಲಿಂಕ್ ಮಾಡುವಂತೆ ಸಲಹೆ ನೀಡಲಾಗಿದೆ. ಆದಾಗ್ಯೂ, ಕೆಲವರು ತರಾತುರಿಯಲ್ಲಿ ಆಧಾರ್-ಪ್ಯಾನ್ ಲಿಂಕ್ ಮಾಡಲು ಹೋಗಿ ಆಧಾರ್ ಕಾರ್ಡ್‌ನೊಂದಿಗೆ ತಪ್ಪಾದ ಪ್ಯಾನ್ ಅನ್ನು ಲಿಂಕ್ ಮಾಡಿ ಸಮಸ್ಯೆ ಎದುರಿಸುತ್ತಾರೆ.
ಈ ಕುರಿತಂತೆ ಕೆಲವರು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಮ್ಮ ಆಧಾರ್ ಈಗಾಗಲೇ ತಪ್ಪಾದ ಪ್ಯಾನ್ ಸಂಖ್ಯೆಯೊಂದಿಗೆ ಲಿಂಕ್ ಆಗಿದೆ. ಹಾಗಾಗಿ ಸರಿಯಾದ ಪ್ಯಾನ್ ಸಂಖ್ಯೆಯೊಂದಿಗೆ ಆಧಾರ್ ಲಿಂಕ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ. ನೀವೂ ಕೂಡ ಅಂತಹವರಲ್ಲಿ ಒಬ್ಬರಾಗಿದ್ದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಆಧಾರ್ ತಪ್ಪಾದ ಪ್ಯಾನ್ ಕಾರ್ಡ್‌ಗೆ ಲಿಂಕ್ ಆಗಿದ್ದರೆ ಅದನ್ನು ಸುಲಭವಾಗಿ ಡಿ-.ಲಿಂಕ್ ಮಾಡಬಹುದು.
ಇದನ್ನೂ ಓದಿ- Post Office Rule: ಏಪ್ರಿಲ್ 01ರಿಂದ ಬದಲಾಗಲಿದೆ ಅಂಚೆ ಕಚೇರಿಯ ಈ ಯೋಜನೆಗಳ ನಿಯಮ
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 139AA ಪ್ರಕಾರ, ಶಾಶ್ವತ ಖಾತೆ ಸಂಖ್ಯೆ (PAN) ಅನ್ನು ನಿಗದಿಪಡಿಸಿದ ಮತ್ತು ಆಧಾರ್ ಸಂಖ್ಯೆಯನ್ನು ಪಡೆಯಲು ಅರ್ಹರಾಗಿರುವ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಆಧಾರ್ ಅನ್ನು PAN ನೊಂದಿಗೆ ಲಿಂಕ್ ಮಾಡಬೇಕಾಗುತ್ತದೆ. 1ನೇ ಜುಲೈ 2017 ರಂದು ಅಥವಾ ಅದಕ್ಕೂ ಮೊದಲು ಪ್ಯಾನ್ ಪಡೆದಿರುವ ಪ್ರತಿಯೊಬ್ಬರಿಗೂ ಸಹ ಈ ನಿಯಮ ಅನ್ವಯಿಸುತ್ತದೆ.
ಆಧಾರ್-ಪ್ಯಾನ್ ಡಿ-ಲಿಂಕ್ ಮಾಡುವ ಸುಲಭ ವಿಧಾನ:
* ಗಮನಾರ್ಹವಾಗಿ, ಒಂದಕ್ಕಿಂತ ಹೆಚ್ಚು ಪ್ಯಾನ್ ಹೊಂದಿದ್ದರೆ ಯಾವುದೇ ದಂಡವನ್ನು ತಪ್ಪಿಸಲು ನಕಲಿ ಪ್ಯಾನ್‌ನೊಂದಿಗೆ ಆಧಾರ್ ಅನ್ನು ಡಿಲಿಂಕ್ ಮಾಡುವುದು ಮುಖ್ಯ.
* ತೆರಿಗೆ ಸಲ್ಲಿಕೆಯಲ್ಲಿ ಯಾವುದೇ ವ್ಯತ್ಯಾಸವನ್ನು ತಪ್ಪಿಸಲು, ಪ್ಯಾನ್‌ನಿಂದ ಆಧಾರ್ ಅನ್ನು ಡಿ-ಲಿಂಕ್ ಮಾಡುವುದು ಕೂಡ ತುಂಬಾ ಅಗತ್ಯ.
* ಮಾತ್ರವಲ್ಲ, ಯಾವುದೇ ರೀತಿಯ ಕಾನೂನು ತೊಡಕುಗಳನ್ನು ತಪ್ಪಿಸಲು ಸಹ ಪ್ಯಾನ್‌ನಿಂದ ಆಧಾರ್ ಅನ್ನು ಡಿಲಿಂಕ್ ಮಾಡುವುದು ಮುಖ್ಯವಾದ ಕೆಲಸವಾಗಿದೆ. ಆದರೆ, ಇದಕ್ಕಾಗಿ ನೀವು ಸೂಕ್ತ ದಾಖಲೆಗಳನ್ನು ಕೂಡ ಒದಗಿಸಬೇಕಾಗುತ್ತದೆ.
ಆಧಾರ್-ಪ್ಯಾನ್ ಡಿ-ಲಿಂಕ್ ಮಾಡಲು ಈ ದಾಖಲೆಗಳು ಅತ್ಯಗತ್ಯ:
>> ಪ್ಯಾನ್ ಕಾರ್ಡ್‌ನ ಪ್ರತಿ
>> ಆಧಾರ್ ಕಾರ್ಡ್‌ನ ಪ್ರತಿ -
>> ದೂರು ಪತ್ರದ ಪ್ರತಿ
>> ಅಂಚೆ ವಿಳಾಸದ ವಿವರಗಳನ್ನು ನೀಡುವ ದಾಖಲೆ
>> ಇಮೇಲ್ ವಿಳಾಸ
ಇದನ್ನೂ ಓದಿ- ಆತಂಕದ ಬೆನ್ನಲ್ಲೇ ಸಿಹಿ ಸುದ್ದಿ ! UPI ಬಳಕೆದಾರರಿಗೆ ಹೆಚ್ಚುವರಿ ಶುಲ್ಕ ಇಲ್ಲ ಎಂದ ಎನ್‌ಪಿಸಿಐ
ಪ್ಯಾನ್-ಆಧಾರ್ ಅನ್ನು ಡಿಲಿಂಕ್ ಮಾಡುವ ಹಂತ-ಹಂತದ ಪ್ರಕ್ರಿಯೆ:-
ಹಂತ 1: PAN ಸೇವಾ ಪೂರೈಕೆದಾರರಿಂದ PAN ಕಾರ್ಡ್ ಪ್ರಕ್ರಿಯೆ ವಿವರಗಳನ್ನು ಪಡೆಯಿರಿ.
ಹಂತ 2: ಪ್ಯಾನ್ ಕಾರ್ಡ್‌ನ ಆರಂಭಿಕ ಮತ್ತು ನಂತರದ ಹಂಚಿಕೆದಾರರ PAN ಕಾರ್ಡ್ ಗುರುತನ್ನು ವಿನಂತಿಸಿ.
ಹಂತ 3: ಆದಾಯ ತೆರಿಗೆ ಇಲಾಖೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ.
ಹಂತ 4: ಪ್ರಕ್ರಿಯೆಗೊಳಿಸಿದ ನಂತರ, ನಂತರದ ಹಂಚಿಕೆದಾರರು ಹೊಸ PAN ಕಾರ್ಡ್ ಅನ್ನು ಪಡೆಯುತ್ತಾರೆ.
ಎರಡು ಪ್ಯಾನ್ ಕಾರ್ಡ್‌ಗಳನ್ನು ಹೊಂದಿದ್ದು ಆಧಾರ್ ಅನ್ನು ನಿಷ್ಕ್ರಿಯಗೊಳಿಸಿದ ಪ್ಯಾನ್ ಕಾರ್ಡ್‌ಗೆ ಲಿಂಕ್ ಮಾಡಿದ್ದರೆ ಅದನ್ನು ಈ ರೀತಿ ಡಿ-ಲಿಂಕ್ ಮಾಡಿ:
ಹಂತ 1: PAN ಕಾರ್ಡ್ ಸ್ಥಿತಿಯನ್ನು ಪರಿಶೀಲಿಸಲು ಆದಾಯ ತೆರಿಗೆ ಇಲಾಖೆಯ ಮೊಬೈಲ್ ಅಪ್ಲಿಕೇಶನ್‌ನಲ್ಲಿ CBN ಪ್ರಶ್ನೆಯನ್ನು ಬಳಸಿ.
ಹಂತ 2: ಎರಡೂ ಪ್ಯಾನ್ ಕಾರ್ಡ್‌ಗಳು ಸಕ್ರಿಯವಾಗಿದ್ದರೆ, ಅವುಗಳು ಈಗಾಗಲೇ ಡಿ-ಡುಪ್ಲಿಕೇಶನ್‌ನಲ್ಲಿವೆಯೇ ಎಂದು ಪರಿಶೀಲಿಸಿ. ಹೌದು ಎಂದಾದರೆ, ತೆರಿಗೆ ಮೌಲ್ಯಮಾಪನ ಅಧಿಕಾರಿಯನ್ನು ಸಂಪರ್ಕಿಸಿ.
ಹಂತ 3: ಆದಾಯ ತೆರಿಗೆ ಇಲಾಖೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ.
ಪ್ಯಾನ್ ಕಾರ್ಡ್ ಅನ್ನು ಇನ್ನೊಬ್ಬ ವ್ಯಕ್ತಿಯ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾಗಿದ್ದರೆ ಅದನ್ನು ಡಿಲಿಂಕ್ ಮಾಡಲು ಸುಲಭ ಪ್ರಕ್ರಿಯೆ:
ಹಂತ 1: PAN ಸೇವಾ ಪೂರೈಕೆದಾರರಿಂದ PAN ಕಾರ್ಡ್ ಪ್ರಕ್ರಿಯೆ ವಿವರಗಳನ್ನು ಪಡೆಯಿರಿ.
ಹಂತ 2: RCC (ಪ್ರಾದೇಶಿಕ ಕಂಪ್ಯೂಟರ್ ಕೇಂದ್ರ) ಮೂಲಕ ITBA (ಆದಾಯ ತೆರಿಗೆ ವ್ಯವಹಾರ ಅಪ್ಲಿಕೇಶನ್) ನಿಂದ ಆಡಿಟ್ ಲಾಗ್ ಅನ್ನು ಸಂಗ್ರಹಿಸಿ.
ಹಂತ 3: ತಪ್ಪಾದ ಲಿಂಕ್‌ಗೆ ಕಾರಣವನ್ನು ಗುರುತಿಸಿ ಮತ್ತು ಡಿಲಿಂಕ್ ಮಾಡುವುದು ಅಗತ್ಯವಿದೆಯೇ ಎಂದು ಪರಿಶೀಲಿಸಿ.
ಹಂತ 4: ಆದಾಯ ತೆರಿಗೆ ಇಲಾಖೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಅದನ್ನು ಡಿಲಿಂಕ್ ಮಾಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.