Income Tax Return Scam: ಈ ಡಿಜಿಟಲ್ ಯುಗದಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದೀಗ ಹೊಸ ರೀತಿಯ ವಂಚನೆ ಪ್ರಕರಣಗಳು ಮುನ್ನಲೆಗೆ ಬಂದಿದ್ದು ಇದರಲ್ಲಿ ವಂಚಕರು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರನ್ನು ಹೆಚ್ಚಾಗಿ ಗುರಿಯಾಗಿಸುತ್ತಿದ್ದಾರೆ. ನೀವೂ ಕೂಡ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ವೇಳೆ ಸ್ವಲ್ಪ ಮೈ ಮರೆತರೂ ಕೂಡ ನಿಮ್ಮ ಖಾತೆ ಖಾಲಿಯಾಗಬಹುದು, ಎಚ್ಚರ! ಎಚ್ಚರ!
ಈ ಹೊಸ ಹಗರಣದಲ್ಲಿ ವಂಚಕರು ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸುವ ಪ್ರಕ್ರಿಯೆಯನ್ನೇ ಬಂಡವಾಳವಾಗಿಟ್ಟುಕೊಂಡು ಸ್ಮಿಶಿಂಗ್ ಕ್ಯಾಂಪೇನ್ ಮೂಲಕ ಭಾರತೀಯ ಖಾತೆದಾರರಿಗೆ ಗಾಳ ಹಾಕುತ್ತಾರೆ. ಈ ಉದ್ದೇಶಕ್ಕಾಗಿ ಅವರು, ಜನಪ್ರಿಯ ಭಾರತೀಯ ಬ್ಯಾಂಕ್‌ಗಳ ಹೆಸರಿನಲ್ಲಿ ನಕಲಿ ಪಠ್ಯ ಸಂದೇಸಗಳನ್ನು ಕಳುಹಿಸಿ ಜನರನ್ನು ವಂಚಿಸುತ್ತಾರೆ.
ಇದನ್ನೂ ಓದಿ- SBI ಗ್ರಾಹಕರಿಗೆ ಬಂಪರ್ ! ಸಿಗಲಿದೆ 57,000 ರೂಪಾಯಿ ! ಖಾತೆಗೆ ಜಮೆ ಆಗಲಿದೆ ಹಣ
Sophos ವರದಿಯ ಪ್ರಕಾರ, ಬ್ಯಾಂಕ್ ಹೆಸರಿನಲ್ಲಿ ಕಳುಹಿಸಲಾಗುವ ಈ ನಕಲಿ ಪಠ್ಯ ಸಂದೇಶದಲ್ಲಿ ಖಾತೆದಾರರ ವೈಯಕ್ತಿಕ ಮಾಹಿತಿ, ಪ್ಯಾನ್, ಆಧಾರ್ ಮಾಹಿತಿಯನ್ನು ನವೀಕರಿಸಲು ವಿನಂತಿಸಲಾಗಿರುತ್ತದೆ. ಈ ಪಠ್ಯ ಸಂದೇಶಗಳು Android ಪ್ಯಾಕೇಜ್ (APK) ಡೌನ್‌ಲೋಡ್ ನಂತಹ ಲಿಂಕ್ ಅನ್ನು ಕೂಡ ಒಳಗೊಂಡಿರುತ್ತವೆ.
ಈ APK ಫೈಲ್‌ಗೆ ಲಗತ್ತಿಸಲಾದ ಅಪ್ಲಿಕೇಶನ್‌ನೊಂದಿಗೆ ಅದನ್ನು ಇನ್ಸ್ಟಾಲ್ ಮಾಡಿದಾಗ ಅಪ್ಲಿಕೇಶನ್ ನಿಜವಾದ ಬ್ಯಾಂಕ್ ಅಪ್ಲಿಕೇಶನ್‌ನಂತೆ ಕಾಣುತ್ತದೆ. ಇದರಲ್ಲಿ ಗ್ರಾಹಕರು ವೈಯಕ್ತಿಯ ಐಡಿ, ಪಾಸ್ವರ್ಡ್ ಗಳನ್ನು ನಮೂದಿಸಿದಾಗ ವಂಚನೆಗೆ ಬಲಿಯಾಗುತ್ತಾರೆ. ಕ್ಷಣಾರ್ಧದಲ್ಲಿ ಅಕೌಂಟ್ ಕೂಡ ಖಾಲಿಯಾಗುತ್ತದೆ.
ಇದನ್ನೂ ಓದಿ- ವಾಹನ ಸವಾರರಿಗೆ ಬಿಗ್ ರಿಲೀಫ್ ! ಪೆಟ್ರೋಲಿಯಂ ಬೆಲೆ ಬಗ್ಗೆ ಕೇಂದ್ರ ಸಚಿವರೇ ನೀಡಿದ ಮಾಹಿತಿ
ಏನಿದು ಆದಾಯ ತೆರಿಗೆ ರಿಟರ್ನ್ ಸ್ಮಿಶಿಂಗ್ ಹಗರಣ?
ಇದೀಗ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರನ್ನೇ ಗುರಿಯಾಗಿಸಿರುವ ಸ್ಕ್ಯಾಮರ್‌ಗಳು ಐಟಿ ರಿಟರ್ನ್ ಫೈಲಿಂಗ್ ಅವಧಿಯಲ್ಲಿ ನಕಲಿ ಪಠ್ಯ ಸಂದೇಶಗಳನ್ನು ಕಳುಹಿಸುತ್ತಾರೆ. ಇದರಲ್ಲಿ ರಿಸೀವರ್‌ನ ಬ್ಯಾಂಕ್‌ನಿಂದ ಎಂದು ಉಲ್ಲೇಖಿಸಲಾದ ಅಪಾಯಕಾರಿ Android ಪ್ಯಾಕೇಜ್ (APK) ಫೈಲ್ ಅನ್ನು ಡೌನ್‌ಲೋಡ್ ಮಾಡಲು ಲಿಂಕ್ ಕಳುಹಿಸಲಾಗಿರುತ್ತದೆ. ನೀವು ಯೋಚಿಸದೆ ಇದನ್ನು ಡೌನ್‌ಲೋಡ್ ಮಾಡಿದ್ದೆ ಆದರೆ, ಪಕ್ಕಾ ಅಸಲಿ ಬ್ಯಾಂಕ್ ಲಾಗಿನ್ ನಂತೆ ಕಾಣುವ ನಕಲಿ ಬ್ಯಾಂಕ್ ಲಾಗಿನ್ ಪುಟ ಗೋಚರಿಸುತ್ತದೆ. ಇದರಲ್ಲಿ ಯಾವುದೇ ವೈಯಕ್ತಿಯ ಮಾಹಿತಿಯನ್ನು ಭರ್ತಿ ಮಾಡಿದರೆ ನಿಮ್ಮ ಖಾತೆ ಖಾಲಿಯಾಗುವುದು ಖಚಿತ. ಇದನ್ನು ತಪ್ಪಿಸಲು, ಯಾವುದೇ ಬ್ಯಾಂಕ್‌ಗೆ ಸಂಬಂಧಿಸಿದ ಮಾಹಿತಿ, ಇಲ್ಲವೇ ಹಣಕಾಸಿನ ವೈಯಕ್ತಿಕ ಮಾಹಿತಿ ಬಗ್ಗೆ ವಿವರಗಳನ್ನು ಕೇಳುವ ಪಠ್ಯ ಅಥವಾ ಕರೆ ಸಂದೇಶಗಳ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಿ.
ಯಾವುದೇ ಬ್ಯಾಂಕ್, ಈ ರೀತಿಯ ಮಾಹಿತಿಗಳನ್ನು ಕೇಳುವುದಿಲ್ಲ ಮತ್ತು ಯಾವುದೇ ಪಠ್ಯ ಸಂದೇಶದ ಮೂಲಕ ಯಾವ ಲಿಂಕ್ ಅನ್ನು ಸಹ ಡೌನ್‌ಲೋಡ್ ಮಾಡಲು ಕೇಳುವುದಿಲ್ಲ ಎಂಬುದನ್ನೂ ಸದಾ ನೆನಪಿನಲ್ಲಿಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.