ನೀವೂ ಉದ್ಯೋಗದಲ್ಲಿದ್ದರೆ, ಸರ್ಕಾರ ನೀಡುತ್ತಿದೆ 7 ಲಕ್ಷ ರೂಪಾಯಿಗಳ ಪ್ರಯೋಜನ, ಇಂದೇ ಈ ಫಾರಂ ಭರ್ತಿ ಮಾಡಿ
ನೀವು EPFO ಚಂದಾದಾರರಾಗಿದ್ದರೆ, ಇದರ ಲಾಭವನ್ನು ಸುಲಭವಾಗಿ ಪಡೆಯಬಹುದು. ಇದಕ್ಕಾಗಿ, ನೀವು ಫಾರಂ ಅನ್ನು ಭರ್ತಿ ಮಾಡಬೇಕು. ಈ ಫಾರಂ ಅನ್ನು ಭರ್ತಿ ಮಾಡಿದ ನಂತರ ಅದರ ಪ್ರಯೋಜನವನ್ನು ಪಡೆಯಬಹುದು.
ನವದೆಹಲಿ : ನೀವೂ ಉದ್ಯೋಗದಲ್ಲಿದ್ದರೆ 7 ಲಕ್ಷ ರೂಪಾಯಿಗಳ ಬಂಪರ್ ಲಾಭ ಪಡೆಯುವ ಅವಕಾಶವಿದೆ. ಉದ್ಯೋಗಿಗಳಿಗೆ EPFO ನಿಂದ ಅನೇಕ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದರ ಅಡಿಯಲ್ಲಿ, ಈಗ EPFO ಸಂಪೂರ್ಣ 7 ಲಕ್ಷ ರೂಪಾಯಿಗಳ ಪ್ರಯೋಜನವನ್ನು ನೀಡುತ್ತಿದೆ. ನೀವು EPFO ಚಂದಾದಾರರಾಗಿದ್ದರೆ, ಇದರ ಲಾಭವನ್ನು ಸುಲಭವಾಗಿ ಪಡೆಯಬಹುದು. ಇದಕ್ಕಾಗಿ, ನೀವು ಫಾರಂ ಅನ್ನು ಭರ್ತಿ ಮಾಡಬೇಕು. ಈ ಫಾರಂ ಅನ್ನು ಭರ್ತಿ ಮಾಡಿದ ನಂತರ ಅದರ ಪ್ರಯೋಜನವನ್ನು ಪಡೆಯಬಹುದು.
ಪಿಂಚಣಿಯ ಹೊರತಾಗಿ, ಜೀವ ವಿಮೆಯ ಪ್ರಯೋಜನವೂ ಸಿಗಲಿದೆ :
ಪಿಎಫ್ (PF) ಮತ್ತು ಪಿಂಚಣಿಯ (Pension) ಹೊರತಾಗಿ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸದಸ್ಯರಿಗೆ ಜೀವ ವಿಮೆಯ ಪ್ರಯೋಜನವನ್ನು ಸಹ ನೀಡುತ್ತದೆ. ಅದರ ಅಡಿಯಲ್ಲಿ 7 ಲಕ್ಷ ರೂ.ಗಳನ್ನು ಪಡೆಯಬಹುದು. ವಿಶೇಷವೆಂದರೆ ಈ ಸೌಲಭ್ಯ ಗ್ರಾಹಕರಿಗೆ ಉಚಿತವಾಗಿ ಸಿಗುತ್ತದೆ.
ಇದನ್ನೂ ಓದಿ : LIC ಈ ಯೋಜನೆಯಲ್ಲಿ ದಿನಕ್ಕೆ ₹8 ಹೂಡಿಕೆ ಮಾಡಿ ₹17 ಲಕ್ಷ ಲಾಭ ಪಡೆಯಿರಿ! ಹೇಗೆ ಇಲ್ಲಿದೆ ನೋಡಿ
ಟ್ವೀಟ್ ಮೂಲಕ ಮಾಹಿತಿ ನೀಡಿದ ಇಪಿಎಫ್‌ಒ :
ಇಪಿಎಫ್‌ಒ (EPFO) ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್ (Tweet) ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. EPF ನ ಎಲ್ಲಾ ಚಂದಾದಾರರು ಉದ್ಯೋಗಿಗಳ ಠೇವಣಿ ಲಿಂಕ್ಡ್ ಇನ್ಶುರೆನ್ಸ್ ಸ್ಕೀಮ್, 1976 (EDLI) ಅಡಿಯಲ್ಲಿ ಬರುತ್ತಾರೆ ಎಂದು EPFO ಟ್ವೀಟ್‌ನಲ್ಲಿ ಬರೆದಿದೆ. EDLI ಯೋಜನೆಯಡಿಯಲ್ಲಿ, ಪ್ರತಿ EPF ಖಾತೆಯಲ್ಲಿ 7 ಲಕ್ಷದವರೆಗೆ ಉಚಿತ ವಿಮಾ ರಕ್ಷಣೆ ಲಭ್ಯವಿದೆ. ಯಾವುದೇ ನಾಮನಿರ್ದೇಶನವಿಲ್ಲದೆ ಸದಸ್ಯರು ಮರಣಹೊಂದಿದರೆ, ಕ್ಲೈಮ್ ಅನ್ನು ಪ್ರಕ್ರಿಯೆಗೊಳಿಸಲು ಕಷ್ಟವಾಗುತ್ತದೆ. ಆನ್‌ಲೈನ್ (Online) ಮಾಧ್ಯಮದ ಮೂಲಕ ನಾಮಿನೇಷನ್ ವಿವರಗಳನ್ನು ಭರ್ತಿ ಮಾಡಬಹುದು.
ಇ-ನಾಮನಿರ್ದೇಶನವನ್ನು ಹೀಗೆ ಮಾಡಬಹುದು :
1. ನೀವು ಮೊದಲು EPFO ನ ಅಧಿಕೃತ ವೆಬ್‌ಸೈಟ್ https://www.epfindia.gov.in/ ಗೆ ಹೋಗಬೇಕು.
2. ಇಲ್ಲಿ ನೀವು ಮೊದಲು ‘Services’ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
3. ಇದರ ನಂತರ ನೀವು ಇಲ್ಲಿ ‘For Employees’ ' ಕ್ಲಿಕ್ ಮಾಡಬೇಕು.
4. ಈಗ 'ಮೆಂಬರ್ UAN/ಆನ್‌ಲೈನ್ ಸೇವೆ (OCS/OTCP)' ಮೇಲೆ ಕ್ಲಿಕ್ ಮಾಡಿ.
5. ಈಗ UAN ಮತ್ತು ಪಾಸ್‌ವರ್ಡ್ ನಮೂದಿಸುವ ಮೂಲಕ ಲಾಗ್ ಇನ್ ಮಾಡಿ.
6. ಇದರ ನಂತರ 'ಮ್ಯಾನೇಜ್' ಟ್ಯಾಬ್‌ನಲ್ಲಿ 'ಇ-ನಾಮಿನೇಶನ್ ' ಆಯ್ಕೆಮಾಡಿ.
7. ಇದರ ನಂತರ ಪ್ರೊವೈಡ್ ಡೀಟೇಲ್ಸ್ ಟ್ಯಾಬ್ ಕಾಣಿಸುತ್ತದೆ, 'ಸೇವ್ ' ಕ್ಲಿಕ್ ಮಾಡಿ.
8. ಫ್ಯಾಮಿಲಿ ಡಿಕ್ಲರೇಶನ್ ಅಪ್ ಡೇಟ್ ಮಾಡಲು 'ಯೆಸ್ ‘ ಕ್ಲಿಕ್ ಮಾಡಿ.
9. ಆಡ್ ಫ್ಯಾಮಿಲಿ ಡೀಟೇಲ್ಸ್ ಮೇಲೆ ಕ್ಲಿಕ್ ಮಾಡಿ. ಒಂದಕ್ಕಿಂತ ಹೆಚ್ಚು ನಾಮಿನಿಗಳನ್ನು ಕೂಡ ಸೇರಿಸಬಹುದು.
10. ಯಾವ ನಾಮಿನಿಯ ಪಾಲು ಎಷ್ಟು ಎಂಬುದನ್ನು ಪ್ರಕಟಿಸಲು ನಾಮಿನೇಶನ್ ಡೀಟೇಲ್ಸ್ ಮೇಲೆ ಕ್ಲಿಕ್ ಮಾಡಿ. ವಿವರಗಳನ್ನು ನಮೂದಿಸಿದ ನಂತರ 'ಸೇವ್ ಕೊಡಿ.
11. ಇಪಿಎಫ್ ನಾಮನಿರ್ದೇಶನ' ಮೇಲೆ ಕ್ಲಿಕ್ ಮಾಡಿ .
13. OTP ರಚಿಸಲು 'e-Sign' ಮೇಲೆ ಕ್ಲಿಕ್ ಮಾಡಿ. ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.
14. ನಿರ್ದಿಷ್ಟಪಡಿಸಿದ ಜಾಗದಲ್ಲಿ OTP ಅನ್ನು ನಮೂದಿಸಿ ಸಬ್ಮಿಟ್ ಮಾಡಿ.
ಇದನ್ನೂ ಓದಿ : Indian Railways: ಈಗ ಯಾವುದೇ ನಿಲ್ದಾಣದಿಂದ ರೈಲು ಹತ್ತಿದರೂ ಬೀಳಲ್ಲ ದಂಡ! ಇಲ್ಲಿದೆ IRCTC ಹೊಸ ನಿಯಮ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.