ನವದೆಹಲಿ : ಡಿಸೆಂಬರ್ 1 ರಿಂದ ದೇಶದಲ್ಲಿ ಹಲವು ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಡಿಸೆಂಬರ್ 1 ರಿಂದ ಬ್ಯಾಂಕಿಂಗ್, ವಿಮೆ ಮತ್ತು ಅಂತರರಾಷ್ಟ್ರೀಯ ಪ್ರಯಾಣದ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಇದರೊಂದಿಗೆ ಇಪಿಎಫ್ ಖಾತೆದಾರರ ನಿಯಮಗಳಲ್ಲೂ ದೊಡ್ಡ ಬದಲಾವಣೆ ಮಾಡಲಾಗಿದೆ.
ಖಾತೆಯಿಂದ ಹಣ ಹಿಂಪಡೆಯಲು ಸಾಧ್ಯವಿಲ್ಲ
ನೀವು ಇನ್ನೂ ನಿಮ್ಮ ಯೂನಿವರ್ಸಲ್ ಅಕೌಂಟ್ ನಂಬರ್ (UAN) ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡದಿದ್ದರೆ, ನೀವು ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗಬಹುದು.
ಆಧಾರ್ ಲಿಂಕ್ ಮಾಡದ ಕಾರಣ ನಿಮ್ಮ ಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ.
ಇದರ ಹೊರತಾಗಿ, ನಿಮ್ಮ ಉದ್ಯೋಗದಾತ ಕಂಪನಿಯು ತನ್ನ ಕೊಡುಗೆಯನ್ನು ನಿಮ್ಮ ಪಿಎಫ್ ಖಾತೆಗೆ ಜಮಾ ಮಾಡಲು ಸಾಧ್ಯವಾಗುವುದಿಲ್ಲ.
ಅದೇ ಸಮಯದಲ್ಲಿ, ಪಿಎಫ್ ಖಾತೆದಾರರು ಇಪಿಎಫ್ಒ (Employees Deposit Linked Insurance) ಯಿಂದ ರೂ 7 ಲಕ್ಷ ವಿಮೆಯಿಂದ ವಂಚಿತರಾಗಬಹುದು.
ಇದನ್ನೂ ಓದಿ : PM Kisan ಯೋಜನೆಯ 10 ನೇ ಕಂತು: ಪಟ್ಟಿಯಲ್ಲಿ ನಿಮ್ಮ ಹೆಸರು ಹೀಗೆ ಪರಿಶೀಲಿಸಿ
UAN ಅನ್ನು ಆಧಾರ್ ಜೊತೆ ಲಿಂಕ್ ಮಾಡುವುದು ಹೇಗೆ
EPFO ಖಾತೆದಾರರಿಗೆ UAN ನೊಂದಿಗೆ ಆಧಾರ್ ಲಿಂಕ್ ಮಾಡುವ ಸಮಯದ ಮಿತಿಯನ್ನು ವಿಸ್ತರಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ಈ ಕೆಳಗಿನ ವಿಧಾನವನ್ನು ಅನುಸರಿಸುವ ಮೂಲಕ ನೀವು ನಿಮ್ಮ ಆಧಾರ್ ಅನ್ನು UAN ನೊಂದಿಗೆ ಲಿಂಕ್ ಮಾಡಬಹುದು.
ಮೊದಲಿಗೆ ನೀವು https://unifiedportal-mem.epfindia.gov.in/memberinterface/ ಲಿಂಕ್ಗೆ ಭೇಟಿ ನೀಡಬೇಕು.
ಇದರ ನಂತರ ನೀವು UAN ಮತ್ತು ಪಾಸ್ವರ್ಡ್ ಅನ್ನು ನಮೂದಿಸಬೇಕು.
ಇದರ ನಂತರ ನೀವು ಮ್ಯಾನೇಜ್ ವಿಭಾಗದಲ್ಲಿ KYC ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
ಅದರ ನಂತರ ನೀವು ಅಗತ್ಯವಿರುವ ಮಾಹಿತಿಯನ್ನು ಇಲ್ಲಿ ನಮೂದಿಸಬೇಕು.
ಇದರ ನಂತರ, ನೀವು ಆಧಾರ್ ಆಯ್ಕೆಯನ್ನು ಆರಿಸುವ ಮೂಲಕ ನಿಮ್ಮ ಆಧಾರ್ ಸಂಖ್ಯೆ(Aadhar Number)ಯನ್ನು ನಮೂದಿಸಬೇಕು.
ಇದರ ನಂತರ UIDAI ನಿಮ್ಮ ಆಧಾರ್ ಡೇಟಾವನ್ನು ಪರಿಶೀಲಿಸುತ್ತದೆ.
ನಿಮ್ಮ ಡೇಟಾವನ್ನು ಪರಿಶೀಲಿಸಿದ ನಂತರ, ನಿಮ್ಮ ಆಧಾರ್ ಅನ್ನು ನಿಮ್ಮ EPF ಖಾತೆಯೊಂದಿಗೆ ಲಿಂಕ್ ಮಾಡಲಾಗುತ್ತದೆ.
ಇದನ್ನೂ ಓದಿ : Vote without Voter ID: ವೋಟರ್ ಐಡಿ ಇಲ್ಲದಿದ್ದರೂ ಮತ ಚಲಾಯಿಸಬಹುದು, ಸರಿಯಾದ ವಿಧಾನ ತಿಳಿಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.