PM Kisan Rules : ರೈತರ ಆದಾಯ ಹೆಚ್ಚಿಸಲು ಕೇಂದ್ರ ಸರ್ಕಾರ ಆರಂಭಿಸಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 11 ಕಂತುಗಳನ್ನು ರೈತರ ಖಾತೆಗೆ ಇದುವರೆಗೆ ವರ್ಗಾಯಿಸಲಾಗಿದೆ. ಇದೀಗ ಅದರ 12ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ ರೈತರು. ಪಿಎಂ ಕಿಸಾನ್‌ನ ಮುಂದಿನ ಕಂತು ಆಗಸ್ಟ್ ಮತ್ತು ನವೆಂಬರ್ ತಿಂಗಳ ನಡುವೆ ರೈತರ ಖಾತೆ ಸೇರಲಿದೆ. ಈ ನಡುವೆ ಸರ್ಕಾರ ಇ-ಕೆವೈಸಿ ಮಾಡಿಸುವ ಕೊನೆಯ ದಿನಾಂಕವನ್ನು ಆಗಸ್ಟ್ 31 ಕ್ಕೆ ವಿಸ್ತರಿಸಿದೆ.


COMMERCIAL BREAK
SCROLL TO CONTINUE READING

ಈ ಯೋಜನೆಯಡಿ ರೈತರ ಖಾತೆಗೆ ಸೇರಲಿದೆ 6 ಸಾವಿರ ರೂ. : 
ಈ ಯೋಜನೆಯಡಿ ರೈತರಿಗೆ ವಾರ್ಷಿಕ 6 ಸಾವಿರ ರೂ. ನೀಡಲಾಗುವುದು. ಈ ಹಣವನ್ನು ರೈತರ ಖಾತೆಗೆ ತಲಾ 2 ಸಾವಿರದಂತೆ ಮೂರು ಕಂತುಗಳಲ್ಲಿ ವರ್ಗಾಯಿಸಲಾಗುತ್ತದೆ. ಸರ್ಕಾರದ ಈ ಯೋಜನೆಗೆ ನೀವು ಸಹ ನೋಂದಾಯಿಸಿದ್ದರೆ, ನಿಮ್ಮ ಕಂತಿನ ಹಣವು ಈ ಕೆಳಗಿನ ಕಾರಣಗಳಿಂದ ಬರದೇ  ಹೋಗಬಹುದು. 


ಇದನ್ನೂ ಓದಿ :  Good News! ಖಾಸಗಿ ನೌಕರರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ, ಮುಂದಿನ ವರ್ಷ ಎಷ್ಟು ಇನ್ಕ್ರಿಮೆಂಟ್ ಸಿಗಲಿದೆ ಗೊತ್ತಾ?


ಅನರ್ಹರಾಗಿದ್ದರೂ ಯೋಜನೆಯ ಲಾಭ ಪಡೆಯುವಂತಿಲ್ಲ : 
ನೀವು 'ಪಿಎಂ ಕಿಸಾನ್ ಯೋಜನೆ'ಗೆ ಸೇರಲು ಅರ್ಹರಲ್ಲದಿದ್ದರೂ  ನೋಂದಾಯಿಸಿಕೊಂಡಿದ್ದರೆ ನಿಮ್ಮ ಖಾತೆಗೆ ಹಣ ಬಾರದೇ ಇರಬಹುದು. ಒಂದು ವೇಳೆ ಹೀಗಾಗಿ ನಿಮ್ಮ ಹೆಸರಿನಲ್ಲಿ ನೋಟಿಸ್ ಜಾರಿ ಮಾಡಿದ್ದರೆ, ಪಿಎಂ ಕಿಸಾನ್ ಹೆಸರಿನಲ್ಲಿ ಇಲ್ಲಿಯವರೆಗೆ ಪಡೆದ ಹಣವನ್ನು ಸರ್ಕಾರಕ್ಕೆ ಹಿಂತಿರುಗಿಸಬೇಕಾಗಬಹುದು.


ಇ-ಕೆವೈಸಿ ಮಾಡಿಸದಿದ್ದಲ್ಲಿ: 
ಯೋಜನೆಯ ಫಲಾನುಭಾವಿಗಲಾಗಳು ಅರ್ಹರಲ್ಲದಿದ್ದರೂ ಅನೇಕ ಮಂದಿ ಪಿಎಂ ಕಿಸಾನ್‌ನ ಲಾಭವನ್ನು ಪಡೆದಿದ್ದಾರೆ.  ಈ ಹಿನ್ನೆಲೆಯಲ್ಲಿ ಇದೀಗ ಇ-ಕೆವೈಸಿ ಮಾದಿಸುವ ಪ್ರಕ್ರಿಯೆ ಸರ್ಕಾರದಿಂದ ಆರಂಭವಾಯಿತು. ಈ ಬಾರಿ ಇ-ಕೆವೈಸಿ ಮಾಡದವರಿಗೆ ಪಿಎಂ ಕಿಸಾನ್ ಕಂತು ಸಿಗುವುದಿಲ್ಲ ಎಂದು ಹೇಳಲಾಗಿದೆ. ಈ ಹಿಂದೆ ಇ-ಕೆವೈಸಿ ಮಾಡಿಸಲು ಜುಲೈ 31 ಕೊನೆಯ ದಿನಾಂಕವಾಗಿತ್ತು. ಆದರೆ ಈಗ ಅದನ್ನು ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ.


ಇದನ್ನೂ ಓದಿ : ಗ್ರಾಹಕರಿಗೆ ಬಿಗ್ ಶಾಕ್!: ಸಾಲದ ಬಡ್ಡಿ ದರ ಹೆಚ್ಚಿಸಿದ ಎಸ್‌ಬಿಐ


ನೋಂದಣಿ ಸಮಯದಲ್ಲಿ ತಪ್ಪು ಮಾಹಿತಿ ನೀಡಿದ್ದರೆ : 
 ನೋಂದಣಿ ಸಮಯದಲ್ಲಿ ನೀಡಿರುವ ಎಲಾ ಮಾಹಿತಿ ಸರಿಯಾಗಿದೆಯೇ ಎನ್ನುವುದನ್ನು ಪರಿಶೀಲಿಸಿಕೊಳ್ಳಿ. ಫಾರ್ಮ್ ತುಂಬುವ ವೇಳೆ ಯಾವುದೇ ರೀತಿಯ ತಪ್ಪಾಗಿರಬಾರದು. ಒಂದು ವೇಳೆ ಆ ರೀತಿ ತಪ್ಪಾಗಿದ್ದರೆ, ನೀವು ಪಡೆಯುವ ಕಂತು ಬಾರದೇ ಹೋಗಬಹುದು. 


ಬ್ಯಾಂಕ್ ಖಾತೆ ಸಂಖ್ಯೆ : 
 ಫಾರ್ಮ್ ತುಂಬುವ ವೇಳೆ ನೀಡಿರುವ ಬ್ಯಾಂಕ್ ಖಾತೆ ಸಂಖ್ಯೆ ಮತ್ತು IFSC ಕೋಡ್ ಇತ್ಯಾದಿಗಳು ನಿಖರವಾಗಿರಬೇಕು. ನಿಮ್ಮ ಖಾತೆ ಸಂಖ್ಯೆ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯು ತಪ್ಪಾಗಿದ್ದರೆ,  ಪಿಎಂ ಕಿಸಾನ್ ಹಣ  ಇಮ್ಮ ಖಾತೆ ಸೇರದೇ ಇರಬಹುದು. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.