ಪ್ಯಾನ್ ಕಾರ್ಡ್ ಕಳೆದುಹೋಗಿದೆಯೇ ? ಐದೇ ನಿಮಿಷದಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು e-Pan
ನಿಮ್ಮ ಪ್ಯಾನ್ ಕಾರ್ಡ್ ಕಳೆದುಹೋಗಿದ್ದರೆ, ಚಿಂತಿಸಬೇಕಾಗಿಲ್ಲ. ಈಗ ನೀವು ಆದಾಯ ತೆರಿಗೆಯ ಹೊಸ ವೆಬ್‌ಸೈಟ್‌ನಿಂದ ನಿಮ್ಮ ಇ-ಪ್ಯಾನ್ ಕಾರ್ಡ್ (e-Pan Card Download) ಅನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು.
ನವದೆಹಲಿ : ಪ್ರಸ್ತುತ ಪ್ಯಾನ್ ಕಾರ್ಡ್ (PAN Card) ಬಹಳ ಮುಖ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ಕೆಲಸ ಮಾಡಲು ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ. ಬ್ಯಾಂಕಿನಲ್ಲಿ ಖಾತೆ ತೆರೆಯುವುದು, ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ತೆಗೆದುಕೊಳ್ಳುವುದು ಅಥವಾ ಐಟಿಆರ್ (ITR) ಸಲ್ಲಿಸುವುದು ಹೀಗೆ ಯಾವುದೇ ಕೆಲಸಗಳಿಗೂ ಪ್ಯಾನ್ ಕಾರ್ಡ್ ಅಗತ್ಯ ದಾಖಲೆಯಾಗಿದೆ. ಹೀಗಿರುವಾಗ ಒಂದು ವೇಳೆ, ನಿಮ್ಮ ಪ್ಯಾನ್ ಕಾರ್ಡ್ ಕಳೆದುಹೋಗಿದ್ದರೆ, ಚಿಂತಿಸಬೇಕಾಗಿಲ್ಲ. ಈಗ ನೀವು ಆದಾಯ ತೆರಿಗೆಯ ಹೊಸ ವೆಬ್‌ಸೈಟ್‌ನಿಂದ ನಿಮ್ಮ ಇ-ಪ್ಯಾನ್ ಕಾರ್ಡ್ (e-Pan Card Download) ಅನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು.
ಇ-ಪ್ಯಾನ್ ಡೌನ್‌ಲೋಡ್ ಮಾಡುವುದು ಹೇಗೆ ?
ಇದನ್ನೂ ಓದಿ : SBI ALERT! ನಾಳೆ 2 ಗಂಟೆಗಳ ಕಾಲ ಬಂದ್ ಇರಲಿದೆ ಈ Online ಬ್ಯಾಂಕಿಂಗ್ ಸೇವೆಗಳು!
1. ಮೊದಲಿಗೆ ಆದಾಯ ತೆರಿಗೆ ವೆಬ್‌ಸೈಟ್ https://www.incometax.gov.in/iec/foportal ಗೆ ಲಾಗಿನ್ ಮಾಡಿ.
2. ಈಗ 'Instant E PAN' ಮೇಲೆ ಕ್ಲಿಕ್ ಮಾಡಿ.
3. ಮುಂದೆ, 'New E PAN' ಕ್ಲಿಕ್ ಮಾಡಿ.
4. ಈಗ ನೀವು ನಿಮ್ಮ ಪ್ಯಾನ್ ಸಂಖ್ಯೆಯನ್ನು ನಮೂದಿಸಿ.
5. ನಿಮ್ಮ ಪ್ಯಾನ್ ಸಂಖ್ಯೆ ನೆನಪಿಲ್ಲದಿದ್ದರೆ, ನಿಮ್ಮ ಆಧಾರ್ ಸಂಖ್ಯೆಯನ್ನು (Aadhaar) ನಮೂದಿಸಿ.
6. ಇಲ್ಲಿ ಕೊಟ್ಟಿರುವ ನಿಯಮಗಳು ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ 'Accept' ಮೇಲೆ ಕ್ಲಿಕ್ ಮಾಡಿ.
7. ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನ ಹಾಕಿ
8. ಕೊಟ್ಟಿರುವ ವಿವರಗಳನ್ನು ಓದಿದ ನಂತರ Confirm' ಮಾಡಿ
10. ಈಗ ಪಿಡಿಎಫ್ ರೂಪದಲ್ಲಿರುವ ಪ್ಯಾನ್ ಕಾರ್ಡನ್ನು ನಿಮ್ಮ ಮೇಲ್ ಗೆ ಕಳುಹಿಸಲಾಗುತ್ತದೆ.
11. ಇಲ್ಲಿಂದ ನಿಮ್ಮ 'e-Pan' ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಇದನ್ನೂ ಓದಿ : Corona Impact: ನಗದು ಬಳಕೆಯಲ್ಲಿ ವಿಚಿತ್ರ ಬದಲಾವಣೆ!
ಪ್ಯಾನ್-ಆಧಾರ್ ಲಿಂಕ್ ಕಡ್ಡಾಯ :
ಗಮನಿಸಿ, ನಿಮ್ಮ ಪ್ಯಾನ್ ಸಂಖ್ಯೆ (PAN number) ನಿಮಗೆ ನೆನಪಿಲ್ಲದಿದ್ದರೆ ಅಥವಾ ನೀವು ಗೊಂದಲಕ್ಕೊಳಗಾಗಿದ್ದರೆ ನಿಮ್ಮ ಆಧಾರ್ ಕಾರ್ಡ್ ಸಹಾಯದಿಂದ ಇ-ಪ್ಯಾನ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆದರೆ ಇದಕ್ಕಾಗಿ ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ (Aadhaar PAN Link) ಆಗಿರುವುದು ಕಡ್ಡಾಯವಾಗಿದೆ. ನಿಮ್ಮ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದಿದ್ದರೆ ನಿಮಗೆ ಇ-ಪ್ಯಾನ್ ಡೌನ್‌ಲೋಡ್ ಮಾಡಲು ಸಾಧ್ಯವಾಗುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.