ನಿಮ್ಮ ವಾಹನಗಳ ನಂಬರ್ ಮತ್ತು ನಂಬರ್ ಪ್ಲೇಟ್ ಹೀಗಿದ್ದರೆ ಬೀಳಲಿದೆ ಭಾರೀ ದಂಡ..!
ಫ್ಯಾನ್ಸಿ ನಂಬರ್ ಪ್ಲೇಟ್ ಹೊಂದಿರುವ ವಾಹನವನ್ನು ಚಲಾಯಿಸುತ್ತಿದ್ದರೆ ದಂಡ ತೆರಬೇಕಾಗಿ ಬರಬಹುದು. ಕೇಂದ್ರ ಮೋಟಾರು ವಾಹನ ನಿಯಮ 1989 ರ ಸೆಕ್ಷನ್ 51 ಮತ್ತು 177 ರ ಪ್ರಕಾರ, ಫ್ಯಾನ್ಸಿ ನಂಬರ್ ಪ್ಲೇಟ್ ಬಳಸಿ ಸಿಕ್ಕಿಬಿದ್ದರೆ, ದಂಡವನ್ನು ಪಾವತಿಸಬೇಕಾಗುತ್ತದೆ.
ಬೆಂಗಳೂರು : ಸಂಚಾರ ಸುಗಮ ಮತ್ತು ಸುರಕ್ಷಿತವಾಗಿರಲು ಸರ್ಕಾರ ಎಲ್ಲಾ ಮೋಟಾರು ವಾಹನಗಳಿಗೂ ನಿಯಮಗಳನ್ನು ಮಾಡಿದೆ. ಆದರೆ ಅನೇಕ ಸವಾರರು ಈ ನಿಯಮಗಳನ್ನು ಉಲ್ಲಂಘಿಸುತ್ತಾರೆ. ಹೀಗಾದಾಗ ಸಂಚಾರಿ ಪೊಲೀಸರು ದಂಡ ವಿಧಿಸುತ್ತಾರೆ. ಇನ್ನು ಕೆಲವು ಸವಾರರು ಕಾರು, ಬೈಕ್ ಅಥವಾ ಸ್ಕೂಟರ್ ಹೀಗೆ ತಮ್ಮ ಬಳಿ ಇರುವ ವಾಹನಗಳ ನಂಬರ್ ಬದಲಾಯಿಸುತ್ತಾರೆ ಅಥವಾ ತಮಗೆ ಬೇಕಾದ ವಿನ್ಯಾಸದಲ್ಲಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುತ್ತಾರೆ. ಹೀಗೆ ಮಾಡಿದರೆ ಭಾರೀ ಬೆಲೆ ತೆರಬೇಕಾಗುತ್ತದೆ. ಈ ರೀತಿಯ ನಂಬರ್ ಸಂಚಾರಿ ಪೊಲೀಸರ ಗಮನಕ್ಕೆ ಭಾರೀ ದಂಡ ಕಟ್ಟಬೇಕಾಗುತ್ತದೆ.
ಫ್ಯಾನ್ಸಿ ನಂಬರ್ ಪ್ಲೇಟ್ ಬಳಸಿದರೆ ಏನಾಗುತ್ತದೆ? :
ಫ್ಯಾನ್ಸಿ ನಂಬರ್ ಪ್ಲೇಟ್ ಹೊಂದಿರುವ ವಾಹನವನ್ನು ಓಡಿಸಿದರೆ, ಅದಕ್ಕೆ ದನದವನ್ನು ಕಟ್ಟಬೇಕಾಗುತ್ತದೆ. ಕೇಂದ್ರ ಮೋಟಾರು ವಾಹನ ನಿಯಮ 1989 ರ ಸೆಕ್ಷನ್ 51 ಮತ್ತು 177 ರ ಪ್ರಕಾರ, ಫ್ಯಾನ್ಸಿ ನಂಬರ್ ಪ್ಲೇಟ್ ಬಳಸಿ ಸಿಕ್ಕಿಬಿದ್ದರೆ, ದಂಡವನ್ನು ಪಾವತಿಸಬೇಕಾಗುತ್ತದೆ. ಸದ್ಯ ದಂಡದ ಮೊತ್ತ ಸಾವಿರ ರೂ. ಆಗಿದೆ. ಆದರೂ ಈ ದಂಡದ ಮೊತ್ತ ಪ್ರದೇಶಕ್ಕನುಗುಣವಾಗಿ ಬದಲಾಗುತ್ತದೆ. ಕೆಲವು ರಾಜ್ಯಗಳಲ್ಲಿ, ಪುನರಾವರ್ತಿತ ಎಚ್ಚರಿಕೆಗಳ ಹೊರತಾಗಿಯೂ, ಯಾರಾದರೂ ತಮ್ಮ ವಾಹನಗಳ ಮೇಲೆ ಫ್ಯಾನ್ಸಿ ನಂಬರ್ ಪ್ಲೇಟ್ ಬಳಸಿ ಸಿಕ್ಕಿಬಿದ್ದರೆ, ಅವರ ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ.
ಇದನ್ನೂ ಓದಿ : ಇನ್ನೂ ಅಗ್ಗವಾಗಲಿದೆ ಅಡುಗೆ ಎಣ್ಣೆ : IMC ಸಭೆಯಲ್ಲಿ ಹೊರ ಬೀಳಲಿದೆ ನಿರ್ಧಾರ
2019 ರಲ್ಲಿ, ಮುಂಬೈ ಟ್ರಾಫಿಕ್ ಪೊಲೀಸರು ಪದೇ ಪದೇ ಫ್ಯಾನ್ಸಿ ನಂಬರ್ ಪ್ಲೇಟ್‌ಗಳನ್ನು ಬಳಸಿ ಸಿಕ್ಕಿಬಿದ್ದವರ ಪರವಾನಗಿಯನ್ನು ಅಮಾನತುಗೊಳಿಸುವಂತೆ ಆರ್‌ಟಿಒಗೆ ಪ್ರಸ್ತಾಪಿಸಿದ್ದರು. ಇದೆ ರೀತಿ ಎಲ್ಲಾ ಕಡೆಗಳಲ್ಲಿಯೂ ದಂಡ ಮತ್ತು ಲಿಖಿತ ಎಚ್ಚರಿಕೆಯ ನಂತರವೂ ಕಾರಿನ ನಂಬರ್ ಪ್ಲೇಟ್ ಅನ್ನು ನಿಗದಿತ ನಮೂನೆಯಲ್ಲಿ ಬದಲಾಯಿಸದಿದ್ದರೆ, ಸಂಚಾರ ಪೊಲೀಸರು ಪರವಾನಗಿಯನ್ನು ಅಮಾನತುಗೊಳಿಸುವಂತೆ ಆರ್‌ಟಿಒಗೆ ಮನವಿ ಮಾಡಬಹುದು.
ಹೀಗೆ ಪರವಾನಗಿಯನ್ನು ಅಮಾನತುಗೊಳಿಸಿದರೆ ವಾಹನ ವಿಮೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ನಿಮ್ಮ ಪರವಾನಗಿಯನ್ನು ಅಮಾನತುಗೊಳಿಸಿದರೆ ವಿಮೆ ಕ್ಲೈಮ್ ಮಾಡಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಒಂದು ವೇಳೆ ನೀವು ಕೂಡಾ ಫ್ಯಾನ್ಸಿ ನಂಬರ್ ಪ್ಲೇಟ್ ಬಳಸುತ್ತಿದ್ದರೆ, ತಕ್ಷಣ ಅದನ್ನು ಬದಲಿಸಿ ಮತ್ತು ಪ್ರಮಾಣಿತ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಿ. ಇಲ್ಲದಿದ್ದರೆ ದಂಡ ಕಟ್ಟಬೇಕಾಗಬಹುದು.
ಇದನ್ನೂ ಓದಿ : Vegetable Price: ಗ್ರಾಹಕರೇ ಗಮನಿಸಿ… ಹೀಗಿದೆ ನೋಡಿ ಇಂದಿನ ತರಕಾರಿ ಬೆಲೆ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.