Edible Oil Price : ಹಣದುಬ್ಬರದ ಬಿಸಿ ನಡುವೆ ಸಾಮಾನ್ಯ ಜನರಿಗೆ ಸ್ವಲ್ಪ ಮಟ್ಟಿನ ಪರಿಹಾರ ಸಿಗಲಿದೆ. ಅಡುಗೆ ಎಣ್ಣೆ ದರ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಸರಕುಗಳ ಬೆಲೆ ಕುರಿತು ಐಎಂಸಿಯ ಮಹತ್ವದ ಸಭೆ ಮಂಗಳವಾರ ಅಂದರೆ ಇಂದು ನಡೆಯಲಿದೆ. ಈ ಸಭೆಯಲ್ಲಿ ಎಣ್ಣೆಕಾಳುಗಳ ಎಂಆರ್‌ಪಿ, ದಾಸ್ತಾನು ಮಿತಿಯನ್ನು ಮರುಪರಿಶೀಲಿಸುವ ಬಗ್ಗೆ ಚರ್ಚೆ ನಡೆಯಲಿದೆ. ಇದಲ್ಲದೆ, ಸ್ಟಾಕ್ ಮಿತಿ ಮತ್ತು ಪಾಮ್ ಆಯಿಲ್ ಬಗ್ಗೆಯೂ ಚರ್ಚಿಸಲಾಗುವುದು.
ಶುಕ್ರವಾರದಂದು ನಡೆದ ಸಭೆಯಲ್ಲಿ ಆಹಾರ ಸಚಿವಾಲಯವು ಸೂರ್ಯಕಾಂತಿ ಮತ್ತು ಸೋಯಾಬೀನ್ ಎಣ್ಣೆಯ ದರದ ಬಗ್ಗೆ ಚರ್ಚೆ ನಡೆಸಿತ್ತು. ಈ ಸಭೆಯಲ್ಲಿ ಅಡುಗೆ ಎಣ್ಣೆಯ ದರವನ್ನು 8-15 ರೂ.ಗಳಷ್ಟು ಕಡಿತಗೊಳಿಸುವಂತೆ ಹೇಳಲಾಗಿತ್ತು. TRQ ಪ್ರಮಾಣ ಮತ್ತು ತಾಳೆ ಎಣ್ಣೆಯ ವ್ಯಾಪಾರದ ಬಗ್ಗೆಯೂ ಚರ್ಚೆ ನಡೆಸಲಾಗಿತ್ತು.
ಇದನ್ನೂ ಓದಿ : Vegetable Price: ಗ್ರಾಹಕರೇ ಗಮನಿಸಿ… ಹೀಗಿದೆ ನೋಡಿ ಇಂದಿನ ತರಕಾರಿ ಬೆಲೆ
ಗೋಧಿ ಆಮದು ಮೇಲಿನ ಸುಂಕವನ್ನು ಕಡಿಮೆ ಮಾಡುವ ಚಿಂತನೆ :
ಹಬ್ಬದ ಸಮಯದಲ್ಲಿ ಸರಕುಗಳ ಬೆಲೆಗಳು ಹೆಚ್ಚಳವಾಗದಂತೆ ನೋಡಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ. ಹೀಗಾಗಬೇಕಾದರೆ ಮಾರುಕಟ್ಟೆಯಲ್ಲಿ ಸಾಕಷ್ಟು ದಾಸ್ತಾನು ಲಭ್ಯವಿರಬೇಕು. ಈ ಸಭೆಯಲ್ಲಿ, ಗೋಧಿ ಆಮದು ಮೇಲಿನ ಸುಂಕವನ್ನು ಕಡಿಮೆ ಮಾಡುವ ಬಗ್ಗೆಯೂ ಚಿಂತನೆ ನಡೆಸಲಾಗುವುದು. ಹೆಚ್ಚುತ್ತಿರುವ ಅಕ್ಕಿ ಬೆಲೆಗಳು ಮತ್ತು ಕಡಿಮೆ ಬಿತ್ತನೆಯ ಅಂದಾಜಿನ ದೃಷ್ಟಿಯಿಂದ ರಫ್ತು ಮೇಲಿನ ನಿಯಂತ್ರಣದ ಬಗ್ಗೆ ಕೂಡಾ ಮಾತುಕತೆ ನಡೆಯಲಿದೆ. ಖಾದ್ಯ ತೈಲ MRP ನಲ್ಲಿ ಮತ್ತಷ್ಟು ಕಡಿತಗೊಳಿಸುವ ಬಗ್ಗೆ ಕೂಡಾ ಚರ್ಚೆ ನಡೆಸುವ ಸಾಧ್ಯತೆ ಇದೆ.
ಇದಕ್ಕೂ ಮುನ್ನ ಆಹಾರ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಖಾದ್ಯ ತೈಲ ಸಂಘಗಳಿಗೆ ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಯಿತು.
ಇದನ್ನೂ ಓದಿ : 7% ಕ್ಕಿಂತ ಕಡಿಮೆಯಾಯಿತು ಹಣದುಬ್ಬರ ! ಎಷ್ಟು ಹೆಚ್ಚಾಗಲಿದೆ ಸರ್ಕಾರಿ ನೌಕರರ ಡಿಎ ? ಇಲ್ಲಿದೆ ಹೊಸ ಅಪ್ಡೇಟ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.