ನವದೆಹಲಿ : Budget 2022 : ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Niramala Sitharaman) ತಮ್ಮ ನಾಲ್ಕನೇ ಮತ್ತು ಮೋದಿ ಸರ್ಕಾರದ 10 ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಸಮಯದಲ್ಲಿ, ಅವರು 400 ವಂದೇ ಭಾರತ್ ರೈಲುಗಳು ಮತ್ತು LIC ಯ IPO ಸೇರಿದಂತೆ ಅನೇಕ ದೊಡ್ಡ ಘೋಷಣೆಗಳನ್ನು ಮಾಡಿದ್ದಾರೆ.  


COMMERCIAL BREAK
SCROLL TO CONTINUE READING

ಬಜೆಟ್ ನ  ದೊಡ್ಡ ಘೋಷಣೆಗಳು :
- ಶೀಘ್ರದಲ್ಲೇ ಬರಲಿದೆ LIC ಯ IPO 
- 2022 ರ ಬಜೆಟ್‌ನಲ್ಲಿ ಮುಂದಿನ 25 ವರ್ಷಗಳವರೆಗೆ ಅಡಿಪಾಯ ಹಾಕಲಾಗಿದೆ 
-ಆತ್ಮನಿರ್ಭರ ಭಾರತ (Atmanirbhar Bharat) ಮೂಲಕ  16 ಲಕ್ಷ ಉದ್ಯೋಗ ಸೃಷ್ಟಿ 
-  ಮೇಕ್ ಇನ್ ಇಂಡಿಯಾ (Make in India) ಅಡಿಯಲ್ಲಿ 60 ಲಕ್ಷ ಉದ್ಯೋಗಗಳ  ಸೃಷ್ಟಿ
- 3 ವರ್ಷಗಳಲ್ಲಿ 400 ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ 
-2 ಲಕ್ಷ ಅಂಗನವಾಡಿಗಳ ಅಭಿವೃದ್ಧಿ
- ಪಿಎಂ housing loanಗಾಗಿ 48000 ಕೋಟಿ  ಮೀಸಲು 
-  ಕುಡಿಯುವ ನೀರಿನ ಯೋಜನೆಗೆ  60000 ಕೋಟಿ ರೂ


ಇದನ್ನೂ ಓದಿ : Budget 2022: ಶಿಕ್ಷಣ ಕ್ಷೇತ್ರಕ್ಕೆ ಬಜೆಟ್ ಕೊಡುಗೆ ಏನು?


-  ಪ್ರಧಾನ ಮಂತ್ರಿ ಆವಾಸ್ ಯೋಜನೆ (PM Awas Yojana) ಅಡಿಯಲ್ಲಿ 80 ಲಕ್ಷ  ಹೊಸ ಮನೆಗಳ ನಿರ್ಮಾಣ 
- 'India at 100' ಗಾಗಿ ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆ 
- 2022-23 ರ ವೇಳೆಗೆ ರಾಷ್ಟ್ರೀಯ ಹೆದ್ದಾರಿ ಜಾಲ 25 ಸಾವಿರ ಕಿಮೀ ಆಗಲಿದೆ 
-ಹೆದ್ದಾರಿ ವಿಸ್ತರಣೆಗೆ 20000 ಕೋಟಿ ವೆಚ್ಚ 
-  MSP ಗಾಗಿ ರೈತರಿಗೆ 2.7 ಲಕ್ಷ ಕೋಟಿ 
-  ರೈತ ಡ್ರೋನ್‌ಗಳಿಗೆ ಉತ್ತೇಜನ 
- ಕೆನ್-ಬೆಟ್ವಾ ನದಿ ಜೋಡಣೆಗೆ  1400 ಕೋಟಿ ಮೊತ್ತ  ನಿಗದಿ 
- ರೈತರ ಆದಾಯವನ್ನು ಹೆಚ್ಚಿಸಲು ಪಿಪಿಪಿ ಮೋಡ್‌ನಲ್ಲಿ ಯೋಜನೆ ಪ್ರಾರಂಭ
- ಕನಿಷ್ಠ ಬೆಂಬಲ ಬೆಲೆಯಲ್ಲಿ ಗೋಧಿ ಮತ್ತು ಭತ್ತ ಖರೀದಿಗೆ ಸರ್ಕಾರ 2.37 ಲಕ್ಷ ಕೋಟಿ ರೂ.
- ಪಿಎಂ ಇ ವಿದ್ಯಾ ಯೋಜನೆಯ ಒನ್ ಕ್ಲಾಸ್ ಒನ್ ಟಿವಿ ಚಾನೆಲ್ ಕಾರ್ಯಕ್ರಮವ ನ್ನು 12 ರಿಂದ 200 ಟಿವಿ ಚಾನೆಲ್‌ಗಳಿಗೆ ಹೆಚ್ಚಿಸಲಾಗುವುದು.ಈ ಮೂಲಕ ಎಲ್ಲಾ ರಾಜ್ಯಗಳಲ್ಲಿ  1 ರಿಂದ 12 ನೇ ತರಗತಿಯವರೆಗೆ ಪ್ರಾದೇಶಿಕ ಭಾಷೆಗಳಲ್ಲಿ ಪೂರಕ ಶಿಕ್ಷಣವನ್ನು ಒದಗಿಸಲು ಅನುವು ಮಾಡಿಕೊಡಲಾಗುವುದು 
- ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ 1500 ಕೋಟಿ ಹಂಚಿಕೆ
- ಎಲ್ಲಾ ಅಂಚೆ ಕಚೇರಿಗಳನ್ನು ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕಿಸಲಾಗುವುದು. 1.5 ಲಕ್ಷ  ಅಂಚೆ ಕಚೇರಿಗಳನ್ನು ಆನ್‌ಲೈನ್‌ನಲ್ಲಿ ಸಂಪರ್ಕಿಸಲಾಗುವುದು
- ಎನ್‌ಪಿಎಗಳನ್ನು (NPA) ನಿಭಾಯಿಸಲು ಬ್ಯಾಡ್ ಬ್ಯಾಂಕ್ ಕೆಲಸ
- ಮುಂದಿನ 3 ವರ್ಷಗಳಲ್ಲಿ  100 PM ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳ ನಿರ್ಮಾಣ  


ಇದನ್ನೂ ಓದಿ : Budget 2022: ಕಾವೇರಿ-ಪೆನ್ನಾರ್ ಸೇರಿ 5 ನದಿ ಜೋಡಣೆ ಯೋಜನೆಗಳ ಘೋಷಣೆ


ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ :
ಇದಕ್ಕೂ ಮುನ್ನ ಮಂಗಳವಾರ ಬೆಳಗ್ಗೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಬಜೆಟ್‌ಗೆ (Budget 2022) ಅನುಮೋದನೆ ನೀಡಲಾಯಿತು. ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ರೈಲ್ವೆ, ಸಂಪರ್ಕ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಸಂಪುಟ ಸಭೆಯಲ್ಲಿ ಪಾಲ್ಗೊಂಡಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.