ಗ್ಯಾಸ್ ಸಿಲಿಂಡರ್ ಸ್ಪೋಟಗಳು ಆಗಾಗ ನಡೆಯುತ್ತಲೇ ಇರುತ್ತವೆ. ಸಾಕಷ್ಟು ಜನರ ಜೀವ ಈ ಸಿಲಿಂಡರ್ ಸ್ಪೋಟಕ್ಕೆ ಬಲಿಯಾಗಿರೋದನ್ನು ನೋಡಿದ್ದೇವೆ. ಇನ್ನಷ್ಟು ಜನರಿಗೆ ಗಂಭೀರ ಸ್ವರೂಪದ ಗಾಯಗಳೂ ಆಗಿವೆ. ಎಲ್‌ಪಿಜಿ(LPG)ಗೆ ಸಂಬಂಧಿಸಿದ ಅವಘಡಗಳು ನಡೆದಾಗ ಈ ಸ್ಪೋಟದಿಂದ ಹಾನಿಯಾದವರಿಗೆ ಇನ್ಷೂರೆನ್ಸ್ ಸೌಲಭ್ಯ ಇದೆ.


COMMERCIAL BREAK
SCROLL TO CONTINUE READING

ಹೌದು, ಪಬ್ಲಿಕ್ ಲಯಬಿಲಿಟಿ ಪಾಲಿಸಿ ಫಾರ್ ಆಯಿಲ್ ಇಂಡಸ್ಟ್ರೀಸ್ ಅಡಿಯಲ್ಲಿ ಸಮಗ್ರ ವಿಮಾ ಪಾಲಿಸಿ ಮಾಡಿದವರಿಗೆ ಇಂತಹ ಅವಘಡಗಳಿಂದ ಹಾನಿಯಾಗಿದ್ದಲ್ಲಿ ವಿಮೆ ಸೌಲಭ್ಯ ಇದೆ.. ಆದರೆ ಇಷ್ಟು ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಹಾಗೂ ಡೀಲರ್‌ಗಳಿಗೆ ಈ ಸೌಲಭ್ಯ ಸಿಗಲಿದೆ ಕಂಪನಿಗಳು ಸರ್ಕಾರಿ ಸ್ವಾಮ್ಯದ ಎಲ್‌ಪಿಜಿಗೆ ಒಳಪಟ್ಟಿರಬೇಕು.


ದೇಶದ ಹೆದ್ದಾರಿಗಳಲ್ಲಿ ಚಲಿಸಲಿವೆ Electric ವಾಹನಗಳು


ಇನ್ನು ಇಂತಹ ಅವಘಡಗಳು ನಡೆದಾಗ ವ್ಯಕ್ತಿ ಮೃತಪಟ್ಟಲ್ಲಿ ವೈಯಕ್ತಿಕ ಅಪಘಾತದ ಒಟ್ಟು ಮೊತ್ತ 6,00,000 ರೂಪಾಯಿ ಇದೆ. ಹಾಗೆಯೇ ಎಲ್‌ಪಿಜಿ(LPG ಸಂಬಂಧಿಸಿದ ಸ್ಫೋಟದಲ್ಲಿ ವ್ಯಕ್ತಿಗೆ ಗಾಯಗಳಾಗಿದ್ದರೆ ಅಂತವರ ವೈದ್ಯಕೀಯ ವೆಚ್ಚ 30 ಲಕ್ಷ ಇರುತ್ತದೆ. ಅದರಲ್ಲಿ ಒಬ್ಬ ವ್ಯಕ್ತಿಗೆ ಗರಿಷ್ಠ 2,00,000 ರೂಪಾಯಿ ಸಿಗುತ್ತದೆ. ಇನ್ನು ಈ ಸ್ಪೋಟದಲ್ಲಿ ಆಸ್ತಿಗೇನಾದರೂ ನಷ್ಟವಾದಲ್ಲಿ ಒಂದು ಅವಘಡಕ್ಕೆ ಗರಿಷ್ಠ 2,00,000 ರುಪಾಯಿ ದೊರೆಯುತ್ತದೆ. ಆದರೆ ಇದು ನೊಂದಾಯಿತ ಗ್ರಾಹಕರ ಆವರಣದಲ್ಲಿ ಆಗಿರಬೇಕು.


Google Payನಿಂದ ಹಣ ವರ್ಗಾವಣೆಗೆ ಶುಲ್ಕ ವಿಧಿಸಲಾಗುತ್ತದೆಯೇ? ಇದು ಎಷ್ಟು ಸತ್ಯ..!