Google Payನಿಂದ ಹಣ ವರ್ಗಾವಣೆಗೆ ಶುಲ್ಕ ವಿಧಿಸಲಾಗುತ್ತದೆಯೇ? ಇದು ಎಷ್ಟು ಸತ್ಯ..!

ಗೂಗಲ್ ಪೇ ಬಳಕೆದಾರರು 2021 ರಿಂದ ಹಣ ವರ್ಗಾವಣೆಯ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂಬ ಸುದ್ದಿ ಇತ್ತೀಚಿನ ದಿನಗಳಲ್ಲಿ ಹರಿದಾಡುತ್ತಿದೆ.

Last Updated : Nov 26, 2020, 08:08 AM IST
  • ಗೂಗಲ್ ಪೇನಲ್ಲಿ ಹಣ ವರ್ಗಾವಣೆಗಾಗಿ ಗ್ರಾಹಕರು 2021 ರಿಂದ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
  • ಇತ್ತೀಚಿನ ದಿನಗಳಲ್ಲಿ 2021 ರಿಂದ ಗೂಗಲ್ ಪೇನಲ್ಲಿ ಹಣ ವರ್ಗಾವಣೆಗೆ ಶುಲ್ಕವನ್ನು ಪಾವತಿಸಬೇಕಾಗಿದೆ ಎಂಬ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿದೆ.
Google Payನಿಂದ ಹಣ ವರ್ಗಾವಣೆಗೆ ಶುಲ್ಕ ವಿಧಿಸಲಾಗುತ್ತದೆಯೇ? ಇದು ಎಷ್ಟು ಸತ್ಯ..! title=

ನವದೆಹಲಿ: ಗೂಗಲ್ ಪೇ ಬಳಸುವ ಬಳಕೆದಾರರಲ್ಲಿ ಇತ್ತೀಚಿನ ದಿನಗಳಲ್ಲಿ 2021 ರಿಂದ ಹಣ ವರ್ಗಾವಣೆಗೆ ಶುಲ್ಕವನ್ನು ಪಾವತಿಸಬೇಕಾಗಿದೆ ಎಂಬ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಸುದ್ದಿಯಂತೂ ನಿಜ. ಆದರೆ ನೀವು ಶುಲ್ಕ ಪಾವತಿಸಬೇಕಾಗಿಲ್ಲ.

ಹೌದು ಗೂಗಲ್ ಪೇನಲ್ಲಿ ಹಣ ವರ್ಗಾವಣೆಗಾಗಿ ಗ್ರಾಹಕರು 2021 ರಿಂದ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದರೆ ಅಮೆರಿಕದ ಬಳಕೆದಾರರಿಗೆ ಮಾತ್ರ ಈ ನಿಯಮ ಅನ್ವಯಿಸುತ್ತದೆ. ಭಾರತದ ಬಳಕೆದಾರರಿಗೆ ಅಲ್ಲ. ಭಾರತದಲ್ಲಿ ಬಳಕೆದಾರರು ಹಣ ವರ್ಗಾವಣೆಗೆ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ, ಇದು ಯುಎಸ್ ಪ್ಲಾಟ್‌ಫಾರ್ಮ್‌ನಲ್ಲಿ ಹಣ ವರ್ಗಾವಣೆಗೆ ಮಾತ್ರ ಎಂದು ಗೂಗಲ್ (Google) ಕೆಲವು ದಿನಗಳ ಹಿಂದೆ ನೀಡಿದ ವರದಿಯಲ್ಲಿ ಸ್ಪಷ್ಟಪಡಿಸಿದೆ.

Google Pay ನ ವೆಬ್ ಪುಟವನ್ನು ಮುಚ್ಚಲಾಗುವುದು:
ಕಳೆದ ವಾರವಷ್ಟೇ ಗೂಗಲ್ 2021 ರಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ನಲ್ಲಿ ಗೂಗಲ್ನೊಂದಿಗೆ ಮರುವಿನ್ಯಾಸಗೊಳಿಸಲಾದ ಗೂಗಲ್ ಪೇ (Google Pay) ಅಪ್ಲಿಕೇಶನ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ, ಹೀಗಾಗಿ ಬಳಕೆದಾರರು ಇನ್ನು ಮುಂದೆ ವೆಬ್ ಬ್ರೌಸರ್ನಲ್ಲಿ ಸೇವೆಯನ್ನು ಬಳಸಲು ಸಾಧ್ಯವಾಗುವುದಿಲ್ಲ.

ಮೊಬೈಲ್ ಅಥವಾ ವೆಬ್ ಪುಟದ ಮೂಲಕ ಹಣವನ್ನು ವರ್ಗಾಯಿಸಲು ಗೂಗಲ್ ಪೇ ಬಳಕೆದಾರರಿಗೆ ಅವಕಾಶ ನೀಡುತ್ತದೆ. ಇತ್ತೀಚೆಗೆ ಕಂಪನಿಯು ತನ್ನ ವೆಬ್ ಅಪ್ಲಿಕೇಶನ್ ಅನ್ನು ಮುಚ್ಚುವುದಾಗಿ ಘೋಷಿಸಿದೆ. ಕಂಪನಿಯ ಪ್ರಕಾರ ಈಗ ಜನರು ಹಣವನ್ನು ಕಳುಹಿಸಲು ಅಥವಾ ಸ್ವೀಕರಿಸಲು pay.google.com ಅನ್ನು ಬಳಸಲು ಸಾಧ್ಯವಾಗುವುದಿಲ್ಲ. ಹಣ ವರ್ಗಾವಣೆಗೆ Google Pay ಅಪ್ಲಿಕೇಶನ್ ಅನ್ನು ಮಾತ್ರ ಬಳಸಬಹುದು. ಅಲ್ಲದೆ ಗೂಗಲ್ ಪೇ ಬೆಂಬಲ ಪುಟವನ್ನು ಮುಂದಿನ ವರ್ಷದ ಜನವರಿಯಿಂದ ಮುಚ್ಚಲಾಗುವುದು ಎಂದು ಗೂಗಲ್ ಸ್ಪಷ್ಟಪಡಿಸಿದೆ.

Google Pay ಇನ್ಮುಂದೆ Tap To Pay ವೈಶಿಷ್ಟ್ಯವನ್ನು ಸಪೋರ್ಟ್ ಮಾಡಲಿದೆ... ಏನಿದು?

ಶುಲ್ಕ 1.5% ವರೆಗೆ ಇರುತ್ತದೆ:
ನಿಮ್ಮ ಬ್ಯಾಂಕ್ ಖಾತೆಯಿಂದ ನೀವು ಹಣವನ್ನು ವರ್ಗಾಯಿಸಿದಾಗ ಹಣ ಸಂದಾಯವಾಗಲು 1-3 ದಿನಗಳನ್ನು ತೆಗೆದುಕೊಳ್ಳುತ್ತದೆ, ಡೆಬಿಟ್ ಕಾರ್ಡ್‌ನೊಂದಿಗೆ ತಕ್ಷಣವೇ ಪಾವತಿ ಮಾಡಲಾಗುತ್ತದೆ ಎಂದು ಕಂಪನಿ ಹೇಳಿದೆ. ಡೆಬಿಟ್ ಕಾರ್ಡ್‌ (Debit Card)ನೊಂದಿಗೆ ಹಣವನ್ನು ವರ್ಗಾಯಿಸಲು ಇದು 1.5% ನಿಂದ  3.1 % ವರೆಗೆ ಶುಲ್ಕ ವಿಧಿಸುತ್ತದೆ ಎಂದು ಹೇಳಲಾಗಿದೆ. ತ್ವರಿತ ಹಣ ವರ್ಗಾವಣೆಗೆ ಗೂಗಲ್ ಪೇ ಸಹ ಶುಲ್ಕ ವಿಧಿಸುತ್ತದೆ ಎಂದು ವರದಿಗಳು ತಿಳಿಸಿವೆ. 

Google Pay ಬಳಕೆದಾರರಿಗೆ ಶಾಕಿಂಗ್ ನ್ಯೂಸ್

ಸೆಪ್ಟೆಂಬರ್ 2019 ರ ಹೊತ್ತಿಗೆ ಗೂಗಲ್ ಪೇ ಭಾರತದಲ್ಲಿ 67 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು ವಾರ್ಷಿಕ ಒಟ್ಟು ಪಾವತಿ ಮೌಲ್ಯ $ 110 ಬಿಲಿಯನ್. ಜೂನ್ 2020 ರಲ್ಲಿ ಗೂಗಲ್ ಪೇ ಫಾರ್ ಬಿಸಿನೆಸ್ 3 ದಶಲಕ್ಷಕ್ಕೂ ಹೆಚ್ಚು ವ್ಯಾಪಾರಿಗಳನ್ನು ಘೋಷಿಸಿತು.

Trending News