ನವದೆಹಲಿ : Ration Card Latest News: ಕರೋನಾ ಅವಧಿಯಲ್ಲಿ ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆಯನ್ನು (PMGKY ) ಜಾರಿಗೆ ತಂದಿತ್ತು. ಇದರ ಅಡಿಯಲ್ಲಿ, 80 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಸಾಮಾನ್ಯ ಕೋಟಾದಲ್ಲಿ ಲಭ್ಯವಿರುವ ಆಹಾರ ಧಾನ್ಯಗಳ ಜೊತೆಗೆ ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಹೆಚ್ಚುವರಿ ಆಹಾರ ಧಾನ್ಯಗಳನ್ನು (Free Ration) ನೀಡಲಾಗುತ್ತಿದೆ.


COMMERCIAL BREAK
SCROLL TO CONTINUE READING

ಸರ್ಕಾರದ ಪ್ರಕಾರ, 600 ಲಕ್ಷ ಟನ್ ಆಹಾರ ಧಾನ್ಯಗಳನ್ನು ಈ ಯೋಜನೆಯಡಿ ಉಚಿತ ವಿತರಣೆಗಾಗಿ ಹಂಚಿಕೆ ಮಾಡಲಾಗಿದೆ. ಕೊರೊನಾ (coronavirus) ಹಾವಳಿಯನ್ನು ಗಮನದಲ್ಲಿಟ್ಟುಕೊಂಡು, ಮುಂದಿನ 4 ತಿಂಗಳು ಅಂದರೆ, ನವೆಂಬರ್ ವರೆಗೆ ಬಡವರಿಗೆ ಉಚಿತ ಪಡಿತರ (Free Ration) ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಈ ಘೋಷಣೆಯ ಅಡಿಯಲ್ಲಿ, ಈಗ 5 ಕೆಜಿ ಆಹಾರ ಧಾನ್ಯಗಳನ್ನು ಬಡವರಿಗೆ ಪಡಿತರದಲ್ಲಿ ಉಚಿತವಾಗಿ ನೀಡಲಾಗುತ್ತಿದೆ. 


ಇದನ್ನೂ ಓದಿ : ಆಧಾರ್ ಕಾರ್ಡ್ ಮಾಡುವ ನಿಯಮಗಳಲ್ಲಿ ಬದಲಾವಣೆ ! ಯುಐಡಿಎಐ ಮಾಹಿತಿ, ಈ ಎಲ್ಲಾ ವಿಷಯಗಳ ಮೇಲೆ ಬೀಳಲಿದೆ ನೇರ ಪರಿಣಾಮ


ಪಡಿತರ ಚೀಟಿಯ ಹಲವು ಪ್ರಯೋಜನಗಳು :
ಪಡಿತರ ಚೀಟಿಯಿಂದ (ration card) ಇನ್ನೂ ಅನೇಕ ಪ್ರಯೋಜನಗಳಿವೆ.  ಶ್ರೀಮಂತರು, ಬಡವರು ಎಲ್ಲರಿಗೂ ಪಡಿತರ ಚೀಟಿ ಮುಖ್ಯವಾದ ದಾಖಲೆಯಾಗಿದೆ. ಈಗ ಇದನ್ನು ಗುರುತಿನ ಚೀಟಿಯಾಗಿ ಕೂಡ ಬಳಸಲಾಗುತ್ತದೆ. ಮತ್ತು ಬಿಕ್ಕಟ್ಟಿನ ಸಮಯದಲ್ಲಿ, ಸರ್ಕಾರವು (Government) ದೇಶದ ಬಡ ಜನರಿಗೆ ಉಚಿತ ಪಡಿತರ ಸೌಲಭ್ಯಗಳನ್ನು ನೀಡಿತ್ತು.


4 ತಿಂಗಳ ಉಚಿತ ಪಡಿತರ :
ನವೆಂಬರ್ ವರೆಗೆ ಬಡವರಿಗೆ ಉಚಿತ ಪಡಿತರ ನೀಡುವುದಾಗಿ ಸರ್ಕಾರ ಘೋಷಿಸಿದೆ. ಈ ಯೋಜನೆಯ ಮೂಲಕ, ದೇಶದ ಸುಮಾರು 80 ಕೋಟಿ ಜನರಿಗೆ ಉಚಿತ ಪಡಿತರ ಸೌಲಭ್ಯವನ್ನು ನೀಡಲಾಗುವುದು. ಇದರ ಅಡಿಯಲ್ಲಿ ಬಡವರಿಗೆ 5 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದೆ .


ಇದನ್ನೂ ಓದಿ : Tirumala Tirupati Temple: ತಿರುಪತಿಗೆ ಹೋಗಲು ಯೋಜಿಸುತ್ತಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ


ಪಡಿತರ ಚೀಟಿಯ ಪ್ರಯೋಜನಗಳು :
ಈ ಕಾರ್ಡ್ ಅನ್ನು ವಿಳಾಸದ ಪುರಾವೆಯಾಗಿ ಬಳಸಬಹುದು. ಇದಲ್ಲದೇ, ಇದು ಗುರುತಿನ ಚೀಟಿಯಂತೆ ಕೆಲಸ ಮಾಡುತ್ತದೆ. ಬ್ಯಾಂಕ್, ಲ್ಯಾಂಡ್ ಪೇಪರ್‌ಗಳು, ಗ್ಯಾಸ್ ಸಂಪರ್ಕದಂತಹ (gas connection) ಕೆಲಸಗಳಿಗೆ ಈ ಕಾರ್ಡ್ ಅನ್ನು ಬಳಸಬಹುದು. ಮತದಾರರ ಗುರುತಿನ ಚೀಟಿ (Voter Id), ಸೇರಿದಂತೆ ಇತರ ಅಗತ್ಯ ದಾಖಲೆಗಳನ್ನು ತಯಾರಿಸಲು ಸಹ ಇದನ್ನು ಬಳಸಲಾಗುತ್ತದೆ.


ಅರ್ಹತೆ ಏನು :
ವಾರ್ಷಿಕ ಆದಾಯವು 27 ಸಾವಿರ ರೂಪಾಯಿಗಳಿಗಿಂತ ಕಡಿಮೆಯಿದ್ದರೆ, ಬಡತನ ರೇಖೆ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು. ಅರ್ಹತೆಯ ಆಧಾರದ ಮೇಲೆ, ಎಪಿಎಲ್, ಬಿಪಿಎಲ್ ಕಾರ್ಡ್ (BPL Card)  ಮತ್ತು ಅಂತ್ಯೋದಯ ಪಡಿತರ ಚೀಟಿ ಮಾಡಬಹುದು.


ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ ?
1. ಮೊದಲು ನಿಮ್ಮ ರಾಜ್ಯದ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
2. ಈಗ ಪಡಿತರ ಚೀಟಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ (Online application) ಸಲ್ಲಿಸುವ ಲಿಂಕ್ ಅನ್ನು ಕ್ಲಿಕ್ ಮಾಡಿ.
3. ಈಗ ನಿಮಗೆ ಆಧಾರ್ ಕಾರ್ಡ್ (Aadhaar) , ವೋಟರ್ ಐಡಿ, ಪಾಸ್‌ಪೋರ್ಟ್, ಆರೋಗ್ಯ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಇತ್ಯಾದಿಗಳನ್ನು ಪಡಿತರ ಚೀಟಿ ಮಾಡಲು ಐಡಿ ಪ್ರೂಫ್ ಆಗಿ ನೀಡಬಹುದು.
4. ಅರ್ಜಿಯನ್ನು ಭರ್ತಿ ಮಾಡಿದ ನಂತರ,  5 ರೂ.ಯಿಂದ 45ರೂ.ವರೆಗಿನ ಮೊತ್ತವನ್ನು ಠೇವಣಿ ಮಾಡಿ ಅರ್ಜಿಯನ್ನು ಸಲ್ಲಿಸಿ.
5. ಈಗ ಕ್ಷೇತ್ರ ಪರಿಶೀಲನೆಯ ನಂತರ, ನಿಮ್ಮ ಅರ್ಜಿ ಸರಿಯಾಗಿ ಕಂಡುಬಂದಲ್ಲಿ ನಿಮ್ಮ ಪಡಿತರ ಚೀಟಿಯನ್ನು ಮಾಡಿಸಲಾಗುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ