DA Hike Update: ಸರ್ಕಾರಿ ನೌಕರಿಗೊಂದು ಮಹತ್ವದ ಅಪ್ಡೇಟ್, ಜನವರಿ 1 ರಿಂದ ಎಷ್ಟು ಡಿಎ ಸಿಗಲಿದೆ ಗೊತ್ತಾ?
7th Pay Commission Update: ನವೆಂಬರ್ ಗೆ ಹೋಲಿಸಿದರೆ ಡಿಸೆಂಬರ್ ಎಐಸಿಪಿಐ ಸೂಚ್ಯಂಕದಲ್ಲಿ ಬದಲಾವಣೆಯಾಗಿದ್ದು, 132.5 ರಿಂದ 132.3ಕ್ಕೆ ಬಂದು ತಲುಪಿದೆ. ಸಪ್ಟೆಂಬರ್ ನಲ್ಲಿ ಈ ಸೂಚ್ಯಂಕ 131.3 ರಷ್ಟಿದ್ದರೆ, ಆಗಸ್ಟ್ ನಲ್ಲಿ ಇದು 129.9 ರಷ್ಟಿತ್ತು.
7th Pay Commission Latest Update: 65 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು ಸುಮಾರು 48 ಲಕ್ಷ ಪಿಂಚಣಿದಾರರ ತುಟ್ಟಿ ಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರ ಕುರಿತು ಮಾರ್ಚ್ ಮೊದಲ ವಾರದಲ್ಲಿ ನಿರ್ಧಾರ ಹೊರಬೀಳಲಿದೆ. ಮಾರ್ಚ್‌ನಲ್ಲಿ ಡಿಎ ಹೆಚ್ಚಳದ ನಿರ್ಧಾರದ ಮೊದಲು, ಕೇಂದ್ರ ನೌಕರರ ಪಾಲಿಗೆ ಮಹತ್ವದ ಅಪ್ಡೇಟ್ ಪ್ರಕಟವಾಗಿದೆ. ಲಕ್ಷಾಂತರ ಕೇಂದ್ರ ನೌಕರರಿಗೆ ಇದರಿಂದ ನ್ರಾಷೆಯಾಗಬಹುದು. ಹೌದು, ನವೆಂಬರ್ ತಿಂಗಳ ಹೋಲಿಕೆಯಲ್ಲಿ ಡಿಸೆಂಬರ್‌ನಲ್ಲಿ ಕಾರ್ಮಿಕ ಸಚಿವಾಲಯ ಬಿಡುಗಡೆ ಮಾಡಿದ ಎಐಸಿಪಿಐ ಸೂಚ್ಯಂಕದ ಅಂಕಿ ಅಂಶಗಳಲ್ಲಿ ಕುಸಿತ ಕಂಡುಬಂದಿದೆ. ಈ ಅಂಕಿ ಅಂಶದ ಕುಸಿತದ ನಂತರ, ಇದೀಗ ಡಿಎ ಹೆಚ್ಚಳವು ನಿರೀಕ್ಷೆಗಿಂತ ಕಡಿಮೆ ಇರುವ ಸಾಧ್ಯತೆ ಇದೆ.
ಎಐಸಿಪಿಐ ಸೂಚ್ಯಂಕವು ನವೆಂಬರ್ ವರೆಗೆ ನಿರಂತರವಾಗಿ ಏರಿಕೆಯಾಗಿತ್ತು
ಜುಲೈನಿಂದ ನವೆಂಬರ್ ವರೆಗೆ, ಎಐಸಿಪಿಐ ಸೂಚ್ಯಂಕವು ನಿರಂತರವಾಗಿ ಏರಿಕೆ ಕಂಡಿತ್ತು. ಆದರೆ ಡಿಸೆಂಬರ್‌ನಲ್ಲಿ ಇದರಲ್ಲಿ ಕುಸಿತ ದಾಖಲಾಗಿದೆ. ಜನವರಿ 1 ರಿಂದ ತುಟ್ಟಿಭತ್ಯೆ ಹೆಚ್ಚಳವನ್ನು ಈ ಸೂಚ್ಯಂಕದ ಆಧಾರದ ಮೇಲೆ ಕಡಿಮೆಯಾಗುವ ಸಾಧ್ಯತೆ ಇದೆ. ಆದರೂ ಕೂಡ, ಅಕ್ಟೋಬರ್ ಮತ್ತು ನವೆಂಬರ್ ಅಂಕಿಅಂಶಗಳು ಒಂದೇ ಸಮನಾಗಿವೆ. ನವೆಂಬರ್‌ಗೆ ಹೋಲಿಸಿದರೆ ಡಿಸೆಂಬರ್ ಅಂಕಿ ಅಂಶವು 132.3 ಅಂಕಗಳಿಗೆ ಕುಸಿದಿದೆ. ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಈ ಅಂಕಿ ಅಂಶವು 132.5 ಪಾಯಿಂಟ್‌ಗಳಷ್ಟಿತ್ತು. ಇದು ಸೆಪ್ಟೆಂಬರ್‌ನಲ್ಲಿ 131.3, ಆಗಸ್ಟ್‌ನಲ್ಲಿ 130.2 ಮತ್ತು ಜುಲೈನಲ್ಲಿ 129.9 ರಷ್ಟಿತ್ತು.
ಇದನ್ನೂ ಓದಿ-Budget 2023: ಏನಿದು 'ಮಹಿಳಾ ಸನ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆ'? ಇದರಿಂದ ಮಹಿಳೆಯರಿಗೆನು ಲಾಭ?
ಡಿಎ ಶೇ 3ರಷ್ಟು ಹೆಚ್ಚಾಗಬಹುದು
ಜನವರಿ 31 ರಂದು, ಕಾರ್ಮಿಕ ಸಚಿವಾಲಯವು ಡಿಸೆಂಬರ್‌ನ ಎಐಸಿಪಿಐ ಸೂಚ್ಯಂಕದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಕಾರ್ಮಿಕ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶಗಳ ಆಧಾರದ ಮೇಲೆ, ಜನವರಿ 1 ರಿಂದ ಉದ್ಯೋಗಿಗಳ ಡಿಎ ಹೆಚ್ಚಳವು ಶೇಕಡಾ 4 ರ ಬದಲು ಶೇಕಡಾ 3ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ. ಅಂದರೆ, ಈ ಅಂಕಿಗಳಲ್ಲಿ ಇಳಿಕೆಯಾದ ಕಾರಣ ಉದ್ಯೋಗಿಗಳಿಗೆ ನೇರವಾಗಿ ಶೇಕಡಾ ಒಂದರಷ್ಟು ನಷ್ಟವಾಗಬಹುದು. ಈ ಹೆಚ್ಚಳವನ್ನು ಸರ್ಕಾರ ಮಾರ್ಚ್‌ನಲ್ಲಿ ಪ್ರಕಟಿಸಲಿದೆ.
ಇದನ್ನೂ ಓದಿ-PM Kisan: ದೇಶದ ಕೋಟ್ಯಾಂತರ ರೈತರಿಗೆ ಬಿಗ್ ಶಾಕ್ !
ಎಷ್ಟು ಡಿಎ ಹೆಚ್ಚಾಗುತ್ತದೆ
ಜುಲೈ ತಿಂಗಳ ಡಿಎಯನ್ನು ಶೇ 4ರಷ್ಟು ಹೆಚ್ಚಿಸಿದ ನಂತರ ಕೇಂದ್ರ ನೌಕರರ ತುಟ್ಟಿ ಭತ್ಯೆ ಶೇ 38ಕ್ಕೆ ಏರಿಕೆಯಾಗಿದೆ. ಇದೀಗ ಅದರಲ್ಲಿ ಶೇ.3ರಷ್ಟು ಏರಿಕೆಯಾದರೆ ಅದು ಶೇ.41ಕ್ಕೆ ತಲುಪಲಿದೆ. ಏಳನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ನೌಕರರ ಡಿಎ (ಡಿಎ ಹೆಚ್ಚಳ) ವರ್ಷಕ್ಕೆ ಎರಡು ಬಾರಿ ಹೆಚ್ಚಾಗುತ್ತದೆ. ಜನವರಿ 2022 ಮತ್ತು ಜುಲೈ 2022 ರ ಡಿಎ ಘೋಷಿಸಲಾಗಿದೆ. ಇದೀಗ ಜನವರಿ 2023 ರ ಡಿಎ ಘೋಷಣೆ ಬಾಕಿ ಉಳಿದಿದೆ.
ಇದನ್ನೂ ಓದಿ-Income Tax ಗೆ ಸಂಬಂಧಿಸಿದ ಮಹತ್ವದ ಸುದ್ದಿ ಪ್ರಕಟ, ವೇತನ 7 ಲಕ್ಷಕ್ಕಿಂತ ಹೆಚ್ಚಿದ್ದರೂ ತೆರಿಗೆ ಪಾವತಿಸಬೇಕಾಗಿಲ್ಲ
ಈ ದತ್ತಾಂಶ ಯಾರು ಬಿಡುಗಡೆ ಮಾಡುತ್ತಾರೆ?
ಎಐಸಿಪಿಐ ಸೂಚ್ಯಂಕದ ಆಧಾರದ ಮೇಲೆ ತುಟ್ಟಿಭತ್ಯೆಯಲ್ಲಿ ಎಷ್ಟು ಹೆಚ್ಚಳ ಮಾಡಬೇಕು ಎಂದು ನಿರ್ಧರಿಸಲಾಗುತ್ತದೆ. ಪ್ರತಿ ತಿಂಗಳ ಕೊನೆಯ ಕೆಲಸದ ದಿನದಂದು, ಕಾರ್ಮಿಕ ಸಚಿವಾಲಯವು ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) ಅಂಕಿ-ಅಂಶಗಳನ್ನು ಬಿಡುಗಡೆ ಮಾಡುತ್ತದೆ. ಈ ಸೂಚ್ಯಂಕವನ್ನು 88 ಕೇಂದ್ರಗಳಿಗೆ ಮತ್ತು ಇಡೀ ದೇಶಕ್ಕಾಗಿ ಸಿದ್ಧಪಡಿಸಲಾಗುತ್ತದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.