Income Tax Refund : ಆದಾಯ ತೆರಿಗೆ ಇಲಾಖೆಯು ₹45,89 ಕೋಟಿ ಮರುಪಾವತಿ, 21 ಲಕ್ಷ ತೆರಿಗೆದಾರರಿಗೆ ಲಾಭ, ನಿಮ್ಮ ಸ್ಟೇಟಸ್ ಇಲ್ಲಿ ಪರಿಶೀಲಿಸಿ
ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಟ್ವೀಟ್ ಮಾಡುವ ಮೂಲಕ ಈ ಮಾಹಿತಿ ನೀಡಿದ್ದು. 21.32 ವೈಯಕ್ತಿಕ ಪ್ರಕರಣಗಳಲ್ಲಿ ಐಟಿ ಇಲಾಖೆಯು 13,694 ಕೋಟಿ ರೂ. ಮರುಪಾವತಿಯ ಬಗ್ಗೆ ನಾವು ನಿಮಗಾಗಿ ತಂದಿದ್ದೇವೆ.
ನವದೆಹಲಿ : ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ ಇದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 21.32 ಲಕ್ಷ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆಯು 45,896 ಕೋಟಿ ರೂ. ಮರುಪಾವತಿ ಮಾಡುತ್ತಿದೆ. ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಟ್ವೀಟ್ ಮಾಡುವ ಮೂಲಕ ಈ ಮಾಹಿತಿ ನೀಡಿದ್ದು. 21.32 ವೈಯಕ್ತಿಕ ಪ್ರಕರಣಗಳಲ್ಲಿ ಐಟಿ ಇಲಾಖೆಯು 13,694 ಕೋಟಿ ರೂ. ಮರುಪಾವತಿಯ ಬಗ್ಗೆ ನಾವು ನಿಮಗಾಗಿ ತಂದಿದ್ದೇವೆ. ಸಧ್ಯ 1,19,173 ಕಾರ್ಪೊರೇಟ್ ಪ್ರಕರಣಗಳಲ್ಲಿ 32,203 ಕೋಟಿ ರೂ. ಮರುಪಾವತಿಗೆ ನೀಡಲಾಗಿದೆ. ನಿಮ್ಮ ಮರುಪಾವತಿಯ ಸ್ಟೇಟಸ್ ಈಗಲೇ ಪರಿಶೀಲಿ..
ಮರುಪಾವತಿಗೆ 43,991 ಕೋಟಿ ರೂ. :
ಸಿಬಿಡಿಟಿ(CBDT) ಜುಲೈ 26 ರಂದು ಪ್ರಸಕ್ತ ಹಣಕಾಸು ವರ್ಷದಲ್ಲಿ ಜುಲೈ 26 ರವರೆಗೆ 43,991 ಕೋಟಿ ರೂ. ಮರುಪಾವತಿಗೆ ನೀಡಲಾಗಿದೆ. ಅಲ್ಲದೆ, ಸಿಬಿಡಿಟಿ ಆದಾಯ ತೆರಿಗೆ ಕಾಯ್ದೆ, 1961 ರ ಅಡಿಯಲ್ಲಿ ವಿವಿಧ ನಮೂನೆಗಳ ಎಲೆಕ್ಟ್ರಾನಿಕ್ ಫೈಲಿಂಗ್ ಗಡುವು ವಿಸ್ತರಿಸಿದೆ.
ಇದನ್ನೂ ಓದಿ : Money Double : ನಿಮ್ಮ ಹಣ ಡಬಲ್ ಆಗಬೇಕೆ? ಹಾಗಿದ್ರೆ Post Office ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ!
ಮರುಪಾವತಿಯ ಸ್ಟೇಟಸ್ ಹೀಗೆ ಪರಿಶೀಲಿಸಿ :
ಮರುಪಾವತಿ ಮೊತ್ತವನ್ನು ನೇರವಾಗಿ ತೆರಿಗೆದಾರರ ಖಾತೆಗೆ(Bank Account) ಜಮಾ ಮಾಡಲಾಗುತ್ತಿದೆ. ನಿಮ್ಮ ಖಾತೆಗೆ ಹಣ ಬಂದಿದೆಯೋ ಇಲ್ಲವೋ ಎಂದು ನಿಮ್ಮ ಸ್ಟೇಟಸ್ ನೀವು ಪರಿಶೀಲಿಸಬಹುದು. ಸ್ಟೇಟಸ್ ಅನ್ನು ಪರೀಕ್ಷಿಸಲು, ನೀವು ಆದಾಯ ತೆರಿಗೆ ಇಲಾಖೆಯ ಹೊಸ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಇಲ್ಲಿಗೆ ಹೋಗಿ ಮೊದಲು ಲಾಗ್ ಇನ್ ಮಾಡಿ. ಇಲ್ಲಿ ನೀವು ಲಾಗಿನ್ ಆದ ನಂತರ ಆದಾಯ ತೆರಿಗೆ ಮರುಪಾವತಿ ಸ್ಟೇಟಸ್ ಪರಿಶೀಲಿಸಬಹುದು.
ನಿಮ್ಮ ಹೆಸರಿನಲ್ಲಿ LPG ಕನೆಕ್ಷನ್ ಇದೆಯಾ? ಹಾಗಿದ್ದರೆ ನಿಮಗೂ ಸಿಗಲಿದೆ ಈ ಸೌಲಭ್ಯ
ITR ಅನ್ನು ಪರಿಶೀಲಿಸದಿದ್ದರೆ ನಿಮ್ಮ ಹಣ ಸಿಲಿಕಿಕೊಳ್ಳುತ್ತದೆ :
ನಿಮ್ಮ ಐಟಿಆರ್(ITR) ಅನ್ನು ಪ್ರೊಫೈಲ್‌ನಲ್ಲಿ ಪರಿಶೀಲಿಸದಿದ್ದರೆ, ನಿಮ್ಮ ಆಧಾರ್ ಸಹಾಯದಿಂದ ಮರು ಪರಿಶೀಲನೆಗಾಗಿ ವಿನಂತಿಗೆ ಕಳುಹಿಸಿ ಅಥವಾ ಸಹಿ ಮಾಡಿದ ಐಟಿಆರ್-ವಿ ನಮೂನೆಯನ್ನು ಸ್ಪೀಡ್ ಪೋಸ್ಟ್ ಮೂಲಕ ಆದಾಯ ತೆರಿಗೆ ಸಿಪಿಸಿ ಕಚೇರಿಗೆ ಕಳುಹಿಸಬೇಕೆಂದು ಎಂದು ತೆರಿಗೆದಾರರಿಗೆ ತಿಳಿಸಿದೆ. ನೀವು ಮತ್ತು ಇಲಾಖೆಯು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸದವರೆಗೆ, ಮರುಪಾವತಿಯ ಮೊತ್ತವು ನಿಮ್ಮ ಖಾತೆಯಲ್ಲಿ ಬರುವುದಿಲ್ಲ. ತೆರಿಗೆದಾರರು ಸಿಪಿಸಿ ಅಥವಾ ಮೌಲ್ಯಮಾಪನ ಅಧಿಕಾರಿಗೆ ದೂರು ಸಲ್ಲಿಸುವ ಮೂಲಕ ಇಲಾಖೆಯಿಂದ ವೇಗವಾಗಿ ಐಟಿಆರ್ ಪ್ರಕ್ರಿಯೆಗಾಗಿ ವಿನಂತಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ