Money Double : ನಿಮ್ಮ ಹಣ ಡಬಲ್ ಆಗಬೇಕೆ? ಹಾಗಿದ್ರೆ Post Office ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ!

ಪೋಸ್ಟ್ ಆಫೀಸ್ ಯೋಜನೆಗಳ ಪ್ರಮುಖ ವಿಷಯವೆಂದರೆ ನಿಮ್ಮ ಹಣ ಇಲ್ಲಿ ಮುಳುಗುವುದಿಲ್ಲ. ಹಾಗಾಗಿ ಇಂದು ನಾವು ನಿಮಗಾಗಿ ಅಂಚೆ ಕಚೇರಿಯ ಎಲ್ಲಾ ಉಳಿತಾಯ ಯೋಜನೆಗಳ ಬಗ್ಗೆ ಮಾಹಿತಿ ತಂದಿದ್ದೇವೆ, ಇದರಲ್ಲಿ ನೀವು ಹಣವನ್ನು ಹೂಡಿಕೆ ಮಾಡಿದರೆ, ಶೀಘ್ರದಲ್ಲೇ ನಿಮ್ಮ ಹಣ ದ್ವಿಗುಣಗೊಳ್ಳುತ್ತದೆ.

Written by - Channabasava A Kashinakunti | Last Updated : Aug 8, 2021, 02:45 PM IST
  • ನೀವು ಹಣವನ್ನು ಹೂಡಿಕೆ ಮಾಡಿದರೆ
  • ಶೀಘ್ರದಲ್ಲೇ ನಿಮ್ಮ ಹಣ ದ್ವಿಗುಣಗೊಳ್ಳುತ್ತದೆ
  • ಅಂಚೆ ಕಚೇರಿಯ ಸುಕನ್ಯಾ ಸಮೃದ್ಧಿ ಖಾತೆ ಯೋಜನೆ
Money Double : ನಿಮ್ಮ ಹಣ ಡಬಲ್ ಆಗಬೇಕೆ? ಹಾಗಿದ್ರೆ Post Office ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ! title=

ನವದೆಹಲಿ : ನೀವು ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಮತ್ತು ನಿಮ್ಮ ಹಣ ಸುರಕ್ಷಿತವಾಗಿರಬೇಕೆಂದು ಬಯಸಿದರೆ, ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ. ಪೋಸ್ಟ್ ಆಫೀಸ್ ಯೋಜನೆಗಳ ಪ್ರಮುಖ ವಿಷಯವೆಂದರೆ ನಿಮ್ಮ ಹಣ ಇಲ್ಲಿ ಮುಳುಗುವುದಿಲ್ಲ. ಹಾಗಾಗಿ ಇಂದು ನಾವು ನಿಮಗಾಗಿ ಅಂಚೆ ಕಚೇರಿಯ ಎಲ್ಲಾ ಉಳಿತಾಯ ಯೋಜನೆಗಳ ಬಗ್ಗೆ ಮಾಹಿತಿ ತಂದಿದ್ದೇವೆ, ಇದರಲ್ಲಿ ನೀವು ಹಣವನ್ನು ಹೂಡಿಕೆ ಮಾಡಿದರೆ, ಶೀಘ್ರದಲ್ಲೇ ನಿಮ್ಮ ಹಣ ದ್ವಿಗುಣಗೊಳ್ಳುತ್ತದೆ.

1. ಪೋಸ್ಟ್ ಆಫೀಸ್ ಸಮಯ ಠೇವಣಿ

1 ವರ್ಷದಿಂದ 3 ವರ್ಷದ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ (TD) ಶೇ.5.5 ರಷ್ಟು ಬಡ್ಡಿ ಸಿಗುತ್ತದೆ. ನೀವು ಇದರಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಹಣವು ಸುಮಾರು 13 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ. ಅಂತೆಯೇ, ನೀವು 5 ವರ್ಷಗಳ ಸಮಯ ಠೇವಣಿಯ ಮೇಲೆ ಶೇ.6.7 ರಷ್ಟು ಬಡ್ಡಿಯನ್ನು ಪಡೆಯುತ್ತಿರಿ. ಈ ಬಡ್ಡಿದರದೊಂದಿಗೆ ಹಣವನ್ನು ಹೂಡಿಕೆ ಮಾಡಿದರೆ, ನಿಮ್ಮ ಹಣವು ಸುಮಾರು 10.75 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.

ಇದನ್ನೂ ಓದಿ : ನಿಮ್ಮ ಹೆಸರಿನಲ್ಲಿ LPG ಕನೆಕ್ಷನ್ ಇದೆಯಾ? ಹಾಗಿದ್ದರೆ ನಿಮಗೂ ಸಿಗಲಿದೆ ಈ ಸೌಲಭ್ಯ

2. ಅಂಚೆ ಕಚೇರಿ ಉಳಿತಾಯ ಬ್ಯಾಂಕ್ ಖಾತೆ

ನಿಮ್ಮ ಹಣವನ್ನು ನೀವು ಪೋಸ್ಟ್ ಆಫೀಸ್ ಉಳಿತಾಯ ಖಾತೆ(Post Office Savings Account)ಯಲ್ಲಿ ಇರಿಸಿದರೆ, ಹಣ ದ್ವಿಗುಣಗೊಳ್ಳಲು ನೀವು ಬಹಳ ಸಮಯ ಕಾಯಬೇಕಾಗಬಹುದು. ಏಕೆಂದರೆ ಅದು ವಾರ್ಷಿಕ ಶೇ. 4.0 ರಷ್ಟು ಬಡ್ಡಿಯನ್ನು ಮಾತ್ರ ನೀಡುತ್ತದೆ, ಅಂದರೆ, ನಿಮ್ಮ ಹಣವು 18 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.

3. ಪೋಸ್ಟ್ ಆಫೀಸ್ ರಿಕವರಿ ಡಿಪಾಜಿಟ್ 

ಪ್ರಸ್ತುತ, ನಿಮಗೆ ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ (RD) ಮೇಲೆ 5.8% ಬಡ್ಡಿಯನ್ನು ನೀಡಲಾಗುತ್ತಿದೆ, ಆದ್ದರಿಂದ ಈ ಬಡ್ಡಿದರದಲ್ಲಿ ಹಣವನ್ನು ಹೂಡಿಕೆ ಮಾಡಿದರೆ, ಅದು ಸುಮಾರು 12.41 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.

4. ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (MIS) ಪ್ರಸ್ತುತ 6.6%ಬಡ್ಡಿಯನ್ನು ಪಡೆಯುತ್ತಿದೆ, ಈ ಬಡ್ಡಿದರದಲ್ಲಿ ಹಣವನ್ನು ಹೂಡಿಕೆ ಮಾಡಿದರೆ, ಅದು ಸುಮಾರು 10.91 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.

ಇದನ್ನೂ ಓದಿ : Indian Railways : ರೈಲು ಟಿಕೆಟ್ ಬುಕ್ ಮಾಡುವಾಗ ನೆನಪಿರಲಿ ಈ ಕೋಡ್ ಇಲ್ಲವಾದರೆ ಸಿಗುವುದಿಲ್ಲ ಸೀಟ್

5. ಪೋಸ್ಟ್ ಆಫೀಸ್ ಹಿರಿಯ ನಾಗರಿಕರ ಉಳಿತಾಯ ಯೋಜನೆ

ಪೋಸ್ಟ್ ಆಫೀಸ್ ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಗೆ ಪ್ರಸ್ತುತ 7.4%ಬಡ್ಡಿ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ನಿಮ್ಮ ಹಣ ಸುಮಾರು 9.73 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.

6. ಅಂಚೆ ಕಚೇರಿ PPF

ಅಂಚೆ ಕಚೇರಿಯ 15 ವರ್ಷಗಳ ಸಾರ್ವಜನಿಕ ಭವಿಷ್ಯ ನಿಧಿ (PPF) ಪ್ರಸ್ತುತ 7.1%ಬಡ್ಡಿಯನ್ನು ಪಡೆಯುತ್ತಿದೆ. ಅಂದರೆ, ಈ ದರದಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಲು ಸುಮಾರು 10.14 ವರ್ಷಗಳು ಬೇಕಾಗುತ್ತದೆ.

7. ಅಂಚೆ ಕಚೇರಿ ಸುಕನ್ಯಾ ಸಮೃದ್ಧಿ ಖಾತೆ

ಅಂಚೆ ಕಚೇರಿಯ ಸುಕನ್ಯಾ ಸಮೃದ್ಧಿ ಖಾತೆ ಯೋಜನೆ(Sukanya Samriddhi Yojana)ಯು ಪ್ರಸ್ತುತ 7.6%ನಷ್ಟು ಹೆಚ್ಚಿನ ಬಡ್ಡಿದರವನ್ನು ಪಡೆಯುತ್ತಿದೆ. ಬಾಲಕಿಯರಿಗಾಗಿ ನಡೆಸುತ್ತಿರುವ ಈ ಯೋಜನೆಯಲ್ಲಿ, ಹಣವನ್ನು ದ್ವಿಗುಣಗೊಳಿಸಲು ಸುಮಾರು 9.47 ವರ್ಷಗಳು ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ : Offline NEFT-RTGS: ನೀವು ಮೊಬೈಲ್ ಅಥವಾ ಇಂಟರ್ನೆಟ್ ಇಲ್ಲದೆಯೂ ಕೂಡ ಹಣ ವರ್ಗಾವಣೆ ಮಾಡಬಹುದು

8. ಅಂಚೆ ಕಚೇರಿ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ

ಪ್ರಸ್ತುತ, ಅಂಚೆ ಕಚೇರಿಯ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಕ್ಕೆ (NSC) 6.8% ಬಡ್ಡಿ ನೀಡಲಾಗುತ್ತಿದೆ. ಇದು 5 ವರ್ಷದ ಉಳಿತಾಯ ಯೋಜನೆಯಾಗಿದ್ದು, ಇದರಲ್ಲಿ ಹೂಡಿಕೆ ಮಾಡುವ ಮೂಲಕ ಆದಾಯ ತೆರಿಗೆಯನ್ನು ಕೂಡ ಉಳಿಸಬಹುದು. ಈ ಬಡ್ಡಿದರದಲ್ಲಿ ಹಣವನ್ನು ಹೂಡಿಕೆ ಮಾಡಿದರೆ, ಅದು ಸುಮಾರು 10.59 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News