Income Tax Rules: ಆದಾಯ ತೆರಿಗೆಗೆ ಸಂಬಂಧಿಸಿದಂತೆ 5 ಪ್ರಮುಖ ಬದಲಾವಣೆ, ತೆರಿಗೆದಾರರಿಗೆ ಗುಡ್ ನ್ಯೂಸ್..!
Income Tax Rules: 2024ರಲ್ಲಿ ಆದಾಯ ಇಲಾಖೆಗೆ ಸಂಬಂಧಿಸಿದಂತೆ 5 ನಿಯಮಗಳು ಬದಲಾಗಿವೆ. 2025ರ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ರಿಟರ್ನ್ಸ್ (ITR) ಫೈಲ್ ಮಾಡುವಾಗ ಇವುಗಳು ಅನ್ವಯವಾಗುತ್ತವೆ.
Income Tax Rules: 2024ರಲ್ಲಿ ಆದಾಯ ಇಲಾಖೆಗೆ ಸಂಬಂಧಿಸಿದಂತೆ 5 ನಿಯಮಗಳು ಬದಲಾಗಿವೆ. 2024ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದದ್ದರಿಂದ ಜುಲೈನಲ್ಲಿ ಮಧ್ಯಂತರ ಬಜೆಟ್ ಮಂಡಿಸಿದ್ದರಿಂದ ಈ ಬದಲಾವಣೆಗಳನ್ನು ಮಾಡಲಾಗಿತ್ತು. 2025ರ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ರಿಟರ್ನ್ಸ್ (ITR) ಫೈಲ್ ಮಾಡುವಾಗ ಇವುಗಳು ಅನ್ವಯವಾಗುತ್ತವೆ.
1- ಆದಾಯ ತೆರಿಗೆಗೆ ಹೊಸ ಸ್ಲ್ಯಾಬ್‌ಗಳು:
ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಕೆಲವು ಬದಲಾವಣೆಗಳನ್ನು ತರಲಾಗಿದೆ. ಹೊಸ ಸ್ಲ್ಯಾಬ್ ಪ್ರಕಾರ ಆದಾಯ ತೆರಿಗೆ ರಿಟರ್ನ್ಸ್ (ITR) ಫೈಲ್ ಮಾಡಿದರೆ ಒಂದು ವರ್ಷದಲ್ಲಿ 17,000 ರೂಪಾಯಿವರೆಗೆ ಉಳಿತಾಯ ಮಾಡುವ ಸಾಧ್ಯತೆಗಳು ಇರುತ್ತವೆ.
2- ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ ಹೆಚ್ಚಳ
ಹೊಸ ಆದಾಯ ತೆರಿಗೆ ಪದ್ಧತಿಯಲ್ಲಿ ನೌಕರರ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು ಹೆಚ್ಚಳ ಮಾಡಲಾಗಿದೆ. ಈ ಹಿಂದೆ 50 ಸಾವಿರ ರೂಪಾಯಿ ಇದ್ದ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು 75 ಸಾವಿರ ರುಪಾಯಿಗೆ ಹೆಚ್ಚಳ ಮಾಡಲಾಗಿದೆ. ಕುಟುಂಬ ಪಿಂಚಣಿದಾರರಿಗೆ ಈ ಹಿಂದೆ ಇದ್ದ 15 ಸಾವಿರ ರೂಪಾಯಿಗಳ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು 25 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ.
ಇದನ್ನೂ ಓದಿ- ಸೇವಿಂಗ್ಸ್ ಖಾತೆಯಲ್ಲಿ ಇದಕ್ಕಿಂತ ಹೆಚ್ಚು ಹಣ ಡೆಪಾಸಿಟ್ ಮಾಡಿದ್ರೆ TAX ಬೀಳೋದು ಗ್ಯಾರಂಟಿ..!
3- ಕಾರ್ಪೊರೇಟ್ NPS ವ್ಯಾಪ್ತಿಯ ಕಡಿತದ ಹೆಚ್ಚಳ:
ಹೊಸ ಆದಾಯ ತೆರಿಗೆ ಪದ್ಧತಿಯ ಪ್ರಕಾರ ಕಾರ್ಪೊರೇಟ್ NPS ಅಡಿಯಲ್ಲಿ ಕಡಿತದ ಮಿತಿಯನ್ನುಹೆಚ್ಚಳ ಮಾಡಲಾಗಿದೆ. ಈವರೆಗೆ ಸೆಕ್ಷನ್ 80CCD (2) ಅಡಿಯಲ್ಲಿ ಕಂಪನಿಗಳ ನೌಕಾರರ ಖಾತೆಯಲ್ಲಿ ಶೇಕಡಾ 10ರಷ್ಟು ಮೊತ್ತವನ್ನು ಕಡಿತಗ ಮಾಡಲಾಗುತ್ತಿತ್ತು. ಈಗ ಆ ಮಿತಿಯನ್ನು ಶೇಕಡಾ 14ಕ್ಕೆ ಏರಿಕೆ ಮಾಡಲಾಗಿದೆ.
4- LTCG ಮತ್ತು STCGಯಲ್ಲೂ ಹೊಸ ನಿಯಮಗಳು:
ಈಕ್ವಿಟಿ ಮತ್ತು ಮ್ಯೂಚುವಲ್ ಫಂಡ್‌ಗಳಿಂದ ಅಲ್ಪಾವಧಿಯ ಬಂಡವಾಳ ಲಾಭಗಳಿಗೆ ಈಗ ಶೇಕಡಾ 20ರಷ್ಟು ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ. ಈವರೆಗೆ ಇದು ಶೇಕಡಾ 15ರಷ್ಟಿತ್ತು. ಇದಲ್ಲದೆ ಆಸ್ತಿ, ಚಿನ್ನ, ಮನೆ ಇತ್ಯಾದಿಗಳ ಖರೀದಿ ಮೂಲಕ ಆಗುತ್ತಿದ್ದ ಅಲ್ಪಾವಧಿಯ ಬಂಡವಾಳ ಲಾಭಕ್ಕೆ ಆದಾಯ ತೆರಿಗೆ ಸ್ಲ್ಯಾಬ್ ಪ್ರಕಾರವೇ ತೆರಿಗೆ ವಿಧಿಸಲಾಗುತ್ತದೆ. ಜೊತೆಗೆ ಆಸ್ತಿಗಳಿಂದ ದೀರ್ಘಾವಧಿಯ ಬಂಡವಾಳ ಲಾಭಗಳಿಗೆ ಶೇಕಡಾ 12.5ರಷ್ಟು ತೆರಿಗೆ ವಿಧಿಸಲಾಗುತ್ತದೆ. ಮೊದಲು ಶೇಕಡಾ 10ರಷ್ಟಿತ್ತು. ದೀರ್ಘಾವಧಿಯ ಬಂಡವಾಳ ಲಾಭದ ತೆರಿಗೆ ವಿನಾಯಿತಿ ಮಿತಿಯನ್ನು 1 ಲಕ್ಷದಿಂದ 1.25 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ- ಐಟಿಆರ್ ಫೈಲ್ ಯಾರಿಂದ ಮಾಡಿಸುತ್ತಿರಿ ಎನ್ನುವುದೂ ಮುಖ್ಯ, ಯಾರಿಂದಲೋ ಮಾಡಿಸಿದರೆ ಸಮಸ್ಯೆ ಗ್ಯಾರಂಟಿ!
5- ಬಂಡವಾಳ ಲಾಭಗಳ ಹಿಡುವಳಿ ಅವಧಿ
ಅಲ್ಪಾವಧಿಯ ಮತ್ತು ದೀರ್ಘಾವಧಿಯ ಬಂಡವಾಳ ಲಾಭಗಳ ನಿಯಮಗಳಲ್ಲಿ ಸರ್ಕಾರವು ಕೆಲವು ಬದಲಾವಣೆಗಳನ್ನು ಮಾಡಿದೆ. ಐಟಿಆರ್ ಅನ್ನು ಸಲ್ಲಿಸುವಾಗ ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಹೊಸ ನಿಯಮಗಳ ಪ್ರಕಾರ, ಎಲ್ಲಾ ಪಟ್ಟಿ ಮಾಡಲಾದ ಸೆಕ್ಯುರಿಟಿಗಳಿಗೆ ಹಿಡುವಳಿ ಅವಧಿಯು 12 ತಿಂಗಳುಗಳಿಗಿಂತ ಹೆಚ್ಚಿದ್ದರೆ ಅದನ್ನು ದೀರ್ಘಾವಧಿ ಎಂದು ಪರಿಗಣಿಸಲಾಗುತ್ತದೆ. ನಾನ್-ಲಿಸ್ಟೆಡ್ ಸೆಕ್ಯುರಿಟಿಗಳಿಗೆ, ಹಿಡುವಳಿ ಅವಧಿಯು 24 ತಿಂಗಳುಗಳಿಗಿಂತ ಹೆಚ್ಚಿದ್ದರೆ ಅದನ್ನು ದೀರ್ಘಾವಧಿಯ ಬಂಡವಾಳ ಲಾಭ ಎಂದು ಪರಿಗಣಿಸಲಾಗುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.