7th pay commisiion latest update : 2023 ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಮಂಗಳಕರವಾಗಿರುತ್ತದೆ. ಲೋಕಸಭೆ ಚುನಾವಣೆಗೆ ಮುನ್ನ ಕೇಂದ್ರ ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆ ಈಡೇರಲಿದೆ. ನೌಕರರಿಗೆ ತುಟ್ಟಿ ಭತ್ಯೆ ಮತ್ತು ಫಿಟ್‌ಮೆಂಟ್ ಅಂಶದಲ್ಲಿ ದೊಡ್ಡ ಮಟ್ಟದ ಹೆಚ್ಚಳವಾಗಲಿದೆ.  


COMMERCIAL BREAK
SCROLL TO CONTINUE READING

ಹೊಸ ವರ್ಷದಲ್ಲಿ  ತುಟ್ಟಿಭತ್ಯೆ  3% ರಿಂದ 4% ಹೆಚ್ಚಳ : 
ಕೇಂದ್ರ ಸರ್ಕಾರವು ಜನವರಿ ಮತ್ತು ಜುಲೈನಲ್ಲಿ AICPI ಯ ಅರ್ಧ-ವಾರ್ಷಿಕ ಡೇಟಾವನ್ನು ಆಧರಿಸಿ ವರ್ಷಕ್ಕೆ ಎರಡು ಬಾರಿ  ಸರ್ಕಾರಿ ನೌಕರರ ಮತ್ತು ಪಿಂಚಣಿದಾರರ DA/DR ಅನ್ನು ಪರಿಷ್ಕರಿಸುತ್ತದೆ. ಮುಂದಿನ DA ಬದಲಾವಣೆಯನ್ನು ಜನವರಿಯಲ್ಲಿ ಘೋಷಿಸಲಾಗುತ್ತದೆ. ಎಐಸಿಪಿಐ ಸೂಚ್ಯಂಕ ಮಾಹಿತಿಯ ಪ್ರಕಾರ,  ಸೆಪ್ಟೆಂಬರ್‌ನಲ್ಲಿ  DA ಸ್ಕೋರ್ 48.54% ತಲುಪಿದೆ. ಅಕ್ಟೋಬರ್‌ನ ಅಂಕಗಳನ್ನು ನವೆಂಬರ್ 28-30 ರ ನಡುವೆ ಬಿಡುಗಡೆ ಮಾಡಲಾಗುತ್ತದೆ.


ಇದನ್ನೂ ಓದಿ : ಬದಲಾಗಿದೆ UPI Payment ನಿಯಮ ! ಇನ್ನು 2000 ರೂ.ಗಿಂತ ಹೆಚ್ಚಿನ ಮೊತ್ತ ವರ್ಗಾವಣೆಗೆ ಬೇಕು 4 ಗಂಟೆಗಳ ಸಮಯ


ನೌಕರರ ಆಗ್ರಹ:
ಲೋಕಸಭೆ ಚುನಾವಣೆಗೂ ಮುನ್ನ ಮೋದಿ ಸರ್ಕಾರ ನೌಕರರ ಬಗ್ಗೆಯೂ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ. 7 ನೇ ವೇತನ ಆಯೋಗದ ಅಡಿಯಲ್ಲಿ, ನೌಕರರ ಫಿಟ್‌ಮೆಂಟ್ ಅಂಶವು 2.57% ಮತ್ತು ಮೂಲ ವೇತನ 18000 ರೂ. ಆಗಿದೆ. ಇದೀಗ ಈ ಫಿಟ್‌ಮೆಂಟ್ ಫ್ಯಾಕ್ಟರ್ ಅನ್ನು ಶೇ.3.86ಕ್ಕೆ ಹೆಚ್ಚಿಸಬೇಕು ಎಂಬುದು ನೌಕರರ ಬಹುದಿನಗಳ ಬೇಡಿಕೆಯಾಗಿದೆ.


ಹೀಗಿರುವಾಗ ಲೋಕಸಭೆ ಚುನಾವಣೆಗೂ ಮುನ್ನವೇ ಮೋದಿ ಸರ್ಕಾರ ನೌಕರರ ಬೇಡಿಕೆಗಳನ್ನು ಈಡೇರಿಸಬಹುದು. ಈ ಪ್ರಕಾರ ಫಿಟ್‌ಮೆಂಟ್ ಫ್ಯಾಕ್ಟರ್ 2.57 ರಿಂದ 3.00 ಅಥವಾ 3.68 ರಷ್ಟು ಹೆಚ್ಚಾಗಬಹುದು. ಹೀಗಾದಲ್ಲಿ ಮೂಲ ವೇತನವು 18,000 ರೂ.ನಿಂದ 21,000 ಅಥವಾ 26,000 ರೂ.ಗೆ ಏರುತ್ತದೆ. 


ಇದನ್ನೂ ಓದಿ : ಆಧಾರ್ ಕಾರ್ಡ್‌ನಲ್ಲಿ ಹೆಸರು, ಡೇಟ್ ಆಫ್ ಬರ್ತ್ ಅನ್ನು ಎಷ್ಟು ಬಾರಿ ಬದಲಿಸಬಹುದು? ಏನು ಹೇಳುತ್ತದೆ ನಿಯಮ ?


3 ಪಟ್ಟು ಫಿಟ್‌ಮೆಂಟ್ ಅಂಶದೊಂದಿಗೆ, ವೇತನ ಹೆಚ್ಚಳ : 
ಉದಾಹರಣೆಗೆ, ಕೇಂದ್ರ ಉದ್ಯೋಗಿಯ ಮೂಲ ವೇತನ 18,000 ರೂ. ಆಗಿದ್ದರೆ, ಭತ್ಯೆಗಳನ್ನು ಹೊರತುಪಡಿಸಿ ಉದ್ಯೋಗಿ 18,000 X 2.57 = 46,260 ರೂ. ಲಾಭವನ್ನು ಪಡೆಯುತ್ತಾನೆ. 3 ಪಟ್ಟು ಫಿಟ್‌ಮೆಂಟ್ ಅಂಶದೊಂದಿಗೆ,  ಪಡೆಯುವ ವೇತನ  63,000 ರೂ. ಆಗಿರುತ್ತದೆ (21000 X 3). ಈ ಹಿಂದೆ 2016 ರಲ್ಲಿ, ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸುವ ಮೂಲಕ ಸರ್ಕಾರವು 7 ನೇ ವೇತನ  ಶ್ರೇಣಿಯನ್ನು ಪ್ರಾರಂಭಿಸಿತ್ತು. 


ಕಾರ್ಮಿಕ ಸಚಿವಾಲಯವು ಪ್ರಕಟಿಸಿದ ಎಐಸಿಪಿಐ ಸೂಚ್ಯಂಕವನ್ನು ಆಧರಿಸಿ ಕೇಂದ್ರ ಸರ್ಕಾರವು ಪ್ರತಿ 6 ತಿಂಗಳಿಗೊಮ್ಮೆ ನೌಕರರ  ಡಿಎ ಮತ್ತು ಪಿಂಚಣಿದಾರರ ಡಿಆರ್ ಅನ್ನು ಬದಲಾಯಿಸುತ್ತದೆ. ಇದರ ಆಧಾರದ ಮೇಲೆ, ಮೊದಲ ಹೆಚ್ಚಳವು ಜನವರಿಯಿಂದ ಮತ್ತು ಎರಡನೆಯದು ಜುಲೈನಿಂದ ಜಾರಿಗೆ ಬರುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.