UPI Payment First Transaction Rules : ಡಿಜಿಟಲ್ ವಹಿವಾಟಿನತ್ತ ಜನರ ಆಸಕ್ತಿ ಹೆಚ್ಚುತ್ತಿರುವಂತೆ, ಆನ್ಲೈನ್ ಪಾವತಿ ವಂಚನೆಯ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ಇತ್ತೀಚಿನ ಕೆಲವು ವರ್ಷಗಳಲ್ಲಿ, ಸೈಬರ್ ಅಪರಾಧ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗತೊಡಗಿವೆ. ಅವುಗಳನ್ನು ನಿಯಂತ್ರಿಸಲು ಸರ್ಕಾರ ಮತ್ತು ಆರ್ಬಿಐ ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿವೆ. ಈ ಹಿನ್ನೆಲೆಯಲ್ಲಿ ಆನ್ಲೈನ್ ಪಾವತಿ ವಂಚನೆಯನ್ನು ತಡೆಯುವ ನಿಟ್ಟಿನಲ್ಲಿ ಕೆಲವು ನಿಯಮಗಳನ್ನು ತರಲು ಸರ್ಕಾರ ನಿರ್ಧರಿಸಿದೆ.
ಹೌದು, ವಂಚನೆ ಪ್ರಕರಣಗಳನ್ನು ತಡೆಯಲು ಸರ್ಕಾರವು ಕೆಲವು ನಿಯಮಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಯೋಚಿಸುತ್ತಿದೆ. ಇದರ ಅಡಿಯಲ್ಲಿ, ಮೊದಲ ಬಾರಿಗೆ ಇಬ್ಬರು ವ್ಯಕ್ತಿಗಳ ನಡುವೆ ಆನ್ಲೈನ್ ವಹಿವಾಟು ನಡೆದರೆ, ಈ ಪ್ರಕ್ರಿಯೆ ಪೂರ್ಣಗೊಳ್ಳಲು 4 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇಷ್ಟು ಮಾತ್ರವಲ್ಲದೆ ಕನಿಷ್ಠ ಸಮಯ ಮಿತಿಯನ್ನು ವಿಧಿಸುವ ಯೋಜನೆಯೂ ಸರ್ಕಾರದ ಮುಂದೆ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ಆಧಾರ್ ಕಾರ್ಡ್ನಲ್ಲಿ ಹೆಸರು, ಡೇಟ್ ಆಫ್ ಬರ್ತ್ ಅನ್ನು ಎಷ್ಟು ಬಾರಿ ಬದಲಿಸಬಹುದು? ಏನು ಹೇಳುತ್ತದೆ ನಿಯಮ ?
ಮೊದಲ ವಹಿವಾಟು ಪೂರ್ಣಗೊಳ್ಳಲು ಬೇಕು 4 ಗಂಟೆ :
ಆನ್ಲೈನ್ ಪಾವತಿ ವಂಚನೆ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಅಂದರೆ ಯಾವುದೇ ಇಬ್ಬರು ವ್ಯಕ್ತಿಗಳ ನಡುವಿನ ಮೊದಲ ಬಾರಿಯ ವಹಿವಾಟಿನಲ್ಲಿ ಸರ್ಕಾರವು ಕೆಲವು ಬದಲಾವಣೆಗಳನ್ನು ಮಾಡಲಿದೆ ಎಂದು ಸರ್ಕಾರಿ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದರ ಅಡಿಯಲ್ಲಿ ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಕನಿಷ್ಠ ಕಾಲಮಿತಿ ವಿಧಿಸುವ ಯೋಜನೆ ಇದೆ. 2,000 ಕ್ಕಿಂತ ಹೆಚ್ಚಿನ ವಹಿವಾಟುಗಳು ನಡೆದಾಗ ಇಬ್ಬರು ಬಳಕೆದಾರರ ನಡುವಿನ ಮೊದಲ ವಹಿವಾಟು ಪೂರ್ಣಗೊಳ್ಳಲು 4-ಗಂಟೆಗಳ ಸಮಯಾವಕಾಶವಿರುತ್ತದೆ.
ಸೈಬರ್ ಭದ್ರತೆಗೆ ಈ ನಿಯಮಗಳು ಅವಶ್ಯಕ :
4 ಗಂಟೆಗಳ ಪ್ರಕ್ರಿಯೆಯನ್ನು ಸೇರಿಸುವುದರಿಂದ ಡಿಜಿಟಲ್ ಪಾವತಿಗಳಲ್ಲಿ ಕೆಲವು ಅಡ್ಡಿ ಉಂಟಾಗಬಹುದು ಎನ್ನುವ ಕಾಳಜಿಯೂ ಸರ್ಕಾರಕ್ಕೆ ಇದೆ. ಈ ಸಂದರ್ಭದಲ್ಲಿ ಗ್ರಾಹಕರು ತ್ವರಿತ ಪಾವತಿ ಸೇವೆ (IMPS), ಏಕೀಕೃತ ಪಾವತಿ ಇಂಟರ್ಫೇಸ್ (UPI) ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್ (RTGS) ಮೂಲಕ ಪಾವತಿಗಳನ್ನು ಮಾಡಲು ಈ ವಿಧಾನವನ್ನು ಅಳವಡಿಸಿಕೊಳ್ಳಬಹುದು.
ಇದನ್ನೂ ಓದಿ : ದೇಶದ ಸಾರ್ವಜನಿಕ ವಲಯದ ಈ ಬ್ಯಾಂಕ್ ಜೊತೆ ಕೈಜೋಡಿಸಿ ಕೈತುಂಬಾ ಸಂಪಾದನೆ ಮಾಡಿ!
24 ಗಂಟೆಗಳಲ್ಲಿ ಗರಿಷ್ಠ ಮೊತ್ತ 5 ಸಾವಿರ ರೂ :
ಪ್ರಸ್ತುತ, ಬಳಕೆದಾರರು ಆನ್ಲೈನ್ ವಹಿವಾಟುಗಳಿಗಾಗಿ ಹೊಸ UPI ಖಾತೆಯನ್ನು ರಚಿಸಿದರೆ, ಅವರು 24 ಗಂಟೆಗಳಲ್ಲಿ ಗರಿಷ್ಠ 5,000 ರೂ.ವರೆಗೆ ಮೊದಲ ವಹಿವಾಟು ಮಾಡಬಹುದು. ಅದೇ ರೀತಿ, ಇದು ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ಫರ್ (NEFT)ಗೂ ಅನ್ವಯಿಸುತ್ತದೆ. ಮೊದಲ ಬಾರಿಗೆ ಖಾತೆಯನ್ನು ರಚಿಸಿದರೆ, 24 ಗಂಟೆಗಳಲ್ಲಿ 50 ಸಾವಿರ ರೂ. ವಹಿವಾಟು ನಡೆಸಬಹುದು.
ಸಭೆಯಲ್ಲಿ ನಿರ್ಣಯ ಕೈಗೊಳ್ಳಬಹುದು :
ಇಂದು ಅಂದರೆ ಮಂಗಳವಾರ, ನವೆಂಬರ್ 28 ರಂದು ಕೇಂದ್ರ ಹಣಕಾಸು ಸಚಿವಾಲಯದ ಸಭೆ ನಡೆಯಲಿದೆ. ಈ ಅವಧಿಯಲ್ಲಿ, UPI ಮೂಲಕ ಮಾಡಲಾಗುವ ಮೊದಲ ವಹಿವಾಟಿಗೆ ಸಮಯದ ಮಿತಿ ವಿಧಿಸುವ ಬಗ್ಗೆ ನಿರ್ಣಯ ಕೈಗೊಳ್ಳಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ