India Growth Projection By IMF - ಕರೋನಾದ ಎರಡನೇ ಅಲೆ (Coronavirus Second Wave) ಭಾರತದ ಆರ್ಥಿಕತೆಯ (Indian Economy) ಮೇಲೆ ಕೆಟ್ಟ ಪರಿಣಾಮ ಬೀರಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯ (IMF) ವರದಿ ಈ ಅಂಶ ಬಹಿರಂಗಪಡಿಸಿದೆ. ಐಎಂಎಫ್ ವರದಿಯ ಪ್ರಕಾರ, "ಮಾರ್ಚ್-ಮೇ ಅವಧಿಯಲ್ಲಿ ಕರೋನದ ಎರಡನೇ ಅಲೆಯಿಂದಾಗಿ ಭಾರತದ ಬೆಳವಣಿಗೆಯ (GDP Growth Rate) ನಿರೀಕ್ಷೆಗಳು ಕಡಿಮೆಯಾಗಿವೆ ಮತ್ತು ಈ ಆಘಾತದಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಮಯಾವಕಾಶ ಬೇಕಾಗಲಿದೆ" ಎಂದು ಹೇಳಲಾಗಿದೆ. ಆರ್ಥಿಕತೆಯ ಬಗ್ಗೆ IMF ವ್ಯಕ್ತಪಡಿಸಿರುವ ಈ ಅಂದಾಜು ಭಾರತ ಸರ್ಕಾರದ ಟೆನ್ಶನ್ ಹೆಚ್ಚಿಸುವಂತಿದೆ.


COMMERCIAL BREAK
SCROLL TO CONTINUE READING

IMF ಭಾರತದಂತಹ ಉದಯೋನ್ಮುಖ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳನ್ನು (GDP Growth) ಕೆಳಮಟ್ಟಕ್ಕಿಳಿಸಲಾಗಿದೆ. ಇದೇ ವೇಳೆ ಕೊರೊನಾ ಲಸಿಕೆಯ ತಲುಪು ಉತ್ತಮವಾಗಿರುವ ದೇಶಗಳ    ಆರ್ಥಿಕತೆಯನ್ನು ಭರವಸೆಯೊಂದಿಗೆ ನೋಡಲಾಗಿದೆ.  ಕೊರೊನಾ ಲಸಿಕೆಗಳಿಗಾಗಿ ಸಂಘರ್ಷ ಪಡುತ್ತಿರುವ ದೇಶಗಳು ಇದರ ಪ್ರಭಾವಕ್ಕೆ ಹೆಚ್ಚಿಗೆ ಒಳಗಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.


ಶೇ.3 ರಷ್ಟು ಇಳಿಕೆ
ಕರೋನಾದ ಎರಡನೇ ಅಲೆ ಹರಡುವ ಮುನ್ನ ತನ್ನ ಅಂದಾಜು ವ್ಯಕ್ತಪಡಿಸಿದ್ದ IMF, ಭಾರತದ ಆರ್ಥಿಕತೆಯನ್ನು (GDP) ಭರವಸೆಯಿಂದ ದೃಷ್ಟಿಯಿಂದ ನೋಡಿತ್ತು. 2021 ರ ಆರ್ಥಿಕ ವರ್ಷದಲ್ಲಿ ಐಎಂಎಫ್ ಭಾರತದ ಆರ್ಥಿಕ ಬೆಳವಣಿಗೆಯ ದರವನ್ನು ಶೇಕಡಾ 12.5 ಕ್ಕೆ ತಲುಪಲಿದೆ ಎಂದು ಅಂದಾಜು ವ್ಯಕ್ತಪಡಿಸಿತ್ತು. ಆದರೆ, ಕರೋನಾದ ಎರಡನೇ ಅಲೆಯ ನಂತರ ಮೇ ತಿಂಗಳಲ್ಲಿ, ಐಎಂಎಫ್ ಅದನ್ನು ಶೇ. 3ರಷ್ಟು ಇಳಿಕೆ ಮಾಡಿದೆ.


ಇದನ್ನೂ ಓದಿ- Indian Railways: ಆನ್‌ಲೈನ್ ಟಿಕೆಟ್‌ಗಳಿಗಾಗಿ IRCTC ಹೊಸ ನಿಯಮ ನಿಮಗೂ ತಿಳಿದಿರಲಿ


ಬೆಳವಣಿಗೆಯ ದರ ಶೇ.9.5ರಷ್ಟು ಇರಲಿದೆ
ಇತ್ತೀಚಿನ ಐಎಂಎಫ್ (IMF)ಅಂದಾಜಿನ ಪ್ರಕಾರ, ಭಾರತದ ಬೆಳವಣಿಗೆಯ ದರವು ಶೇಕಡಾ 9.5 ರಷ್ಟು ಇರುವ ಸಾಧ್ಯತೆಯನ್ನು ವರ್ತಿಸಲಾಗಿದೆ. ಇದರೊಂದಿಗೆ, ಐಎಂಎಫ್ 2022 ರ ಆರ್ಥಿಕ ವರ್ಷದ ಬೆಳವಣಿಗೆಯ ದರ ಮುನ್ಸೂಚನೆಯನ್ನು ಶೇಕಡಾ 1.6 ರಷ್ಟು ಹೆಚ್ಚಿಸಿದೆ. ಮುಂದಿನ ಹಣಕಾಸು ವರ್ಷದಲ್ಲಿ ಅಂದರೆ 2022 ರಲ್ಲಿ ದೇಶದ ಬೆಳವಣಿಗೆಯ ದರವು ಶೇಕಡಾ 8.5 ರಷ್ಟು ಹೆಚ್ಚಾಗಬಹುದು.


ಇದನ್ನೂ ಓದಿ- PF Withdrawal Rule Change: PF ಹಿಂಪಡೆಯುವಿಕೆಯ ನಿಯಮದಲ್ಲಿ ಬದಲಾವಣೆ


IMF ವರದಿಯ ಪ್ರಕಾರ ಕೊರೊನಾ ವೈರಸ್ ನ ಎರಡನೇ ಅಲೆಗೆ ತತ್ತರಿಸಿ ಹೋದ ಅರ್ಥವ್ಯವಸ್ಥೆಗಳಲ್ಲಿ ಕೇವಲ ಭಾರತ ಒಂದೇ ಇಲ್ಲ. ಈ ಪಟ್ಟಿಯಲ್ಲಿ ಇಂಡೋನೆಷ್ಯಾ, ಮಲೇಶಿಯಾ, ಫಿಲಿಪೈನ್ಸ್, ಥೈಲ್ಯಾಂಡ್, ವಿಯಟ್ನಾಂ ದೇಶಗಳ ಆರ್ಥವ್ಯವಸ್ಥೆಗಳ ಕುರಿತು ಕೂಡ ಆತಂಕ ವ್ಯಕ್ತಪಡಿಸಲಾಗಿದೆ. ಇದರ ಜೊತೆಗೆ ಕೊರೊನಾ ಹೊಸ ರೂಪಾಂತರಿ ಅಥವಾ ಹೊಸ ಅಲೆಯ ಕಾರಣ ವಿಶ್ವಾದ್ಯಂತ ಅರ್ಥಿಕ ಪ್ರಗತಿ ಪ್ರಭಾವಕ್ಕೆ ಒಳಗಾಗಲಿದೆ ಎಂಬ ಎಚ್ಚರಿಕೆಯನ್ನೂ ಕೂಡ ವರದಿಯಲ್ಲಿ ನೀಡಲಾಗಿದೆ.


ಇದನ್ನೂ ಓದಿ-Motor Insurance Claim: ಇನ್ಮುಂದೆ ನಿಮಗೆ ತಕ್ಷಣವೆ ಸಿಗಲಿದೆ ಮೋಟಾರ್ ಇನ್ಸುರೆನ್ಸ್ ಕ್ಲೇಮ್, ಹೇಗೆ ಗೊತ್ತಾ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.