PF Withdrawal Rule Change: PF ಹಿಂಪಡೆಯುವಿಕೆಯ ನಿಯಮದಲ್ಲಿ ಬದಲಾವಣೆ

PF Withdrawal Rule Change - PF ಹಿಂಪಡೆಯುವಿಕೆಯ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಹೌದು, ಇನ್ಮುಂದೆ ವೈದ್ಯಕೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ 1 ಲಕ್ಷ ರೂ.ಗಳ ವರೆಗೆ ಅಡ್ವಾನ್ಸ್ ಪಡೆಯಬಹುದಾಗಿದೆ.

Written by - Nitin Tabib | Last Updated : Jul 26, 2021, 07:34 PM IST
  • PF ಹಿಂಪಡೆಯುವಿಕೆಯ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ.
  • ಇನ್ಮುಂದೆ ವೈದ್ಯಕೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ 1 ಲಕ್ಷ ರೂ.ಅಡ್ವಾನ್ಸ್ ಪಡೆಯಬಹುದು.
  • ಈ ಕುರಿತಾದ ಸುತ್ತೋಲೆಯಲ್ಲಿ ತಿದ್ದುಪಡಿ ಮಾಡಿದ EPFO.
PF Withdrawal Rule Change: PF ಹಿಂಪಡೆಯುವಿಕೆಯ ನಿಯಮದಲ್ಲಿ ಬದಲಾವಣೆ title=
PF Withdrawal Rule Change (File Photo)

PF Withdrawal Rule Change - ನೌಕರರ ಭವಿಷ್ಯ ನಿಧಿಗೆ (EPF) ಕೊಡುಗೆ (PF) ಕೊಡುವ ನೌಕರರು ಇನ್ಮುಂದೆ ತಮ್ಮ ವೈದ್ಯಕೀಯ ತುರ್ತು ಅಗತ್ಯತೆಗಳಿಗಾಗಿ (Medical Emergency) ತಾವು ಸಂಗ್ರಹಿಸಿರುವ ಕಾರ್ಪಸ್ ನಿಂದ 1 ಲಕ್ಷ ರೂ. ಅಡ್ವಾನ್ಸ್ (EPF Advace) ರೂಪದಲ್ಲಿ ಪಡೆಯಬಹುದಾಗಿದೆ. ತುರ್ತು ಚಿಕಿತ್ಸೆ ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಲು ಅವರು ತಮ್ಮ ಕಾರ್ಪಸ್ ನಿಂದ ಈ ಹಣವನ್ನು ಪಡೆಯಬಹುದಾಗಿದೆ. ಆದರೆ,  ಹಣವನ್ನು ಹಿಂತೆಗೆದುಕೊಳ್ಳುವ ಮೊದಲು ನೌಕರರು ಆಸ್ಪತ್ರೆಗೆ ದಾಖಲಾದ ಅಥವಾ  ವೆಚ್ಚ ಅಥವಾ ಕಾರ್ಯವಿಧಾನದ ಬಗ್ಗೆ ಯಾವುದಾದರೊಂದು ದಾಖಲೆ ಒದಗಿಸಬೇಕಾಗಲಿದೆ.

ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಹೊರಡಿಸಿರುವ ಸುತ್ತೋಲೆಯಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ. ಪಿಎಫ್ ಯೋಜನೆಯಡಿ ನೌಕರರಿಗೆ ವೈದ್ಯಕೀಯ ತುರ್ತು ಸಂದರ್ಭದಲ್ಲಿ ವೈದ್ಯಕೀಯ ಮುಂಗಡ ನೀಡುವ ಬಗ್ಗೆ ಈ ಮೊದಲು ಹೊರಡಿಸಲಾಗಿರುವ ಸುತ್ತೋಲೆಯಲ್ಲಿ ಈ ತಿದ್ದುಪಡಿ ಮಾಡಲಾಗಿದೆ. 

ಈ ಪರಿಷ್ಕ್ರತ ಹಾಗೂ ಸುವ್ಯವಸ್ಥಿತ ಸುತ್ತೋಲೆಯಲ್ಲಿ ಈ ವೈದ್ಯಕೀಯ ಮುಂದಾಗ ಯಾವ ವ್ಯಾಪ್ತಿಗೆ ಸೇರುತ್ತದೆ ಯಾವ ಉಪಚಾರದ ಷರತ್ತುಗಳನ್ನು ಇದು ಒಳಗೊಂಡಿದೆ ಎಂಬುದನ್ನು ಕೂಡ ಸ್ಪಷ್ಟಪಡಿಸಲಾಗಿದೆ.

ಸುತ್ತೋಲೆಯ ಪ್ರಕಾರ, ಈ ಅಡ್ವಾನ್ಸ್ ಕೇಂದ್ರ ಸೇವಾ ವೈದ್ಯಕೀಯ ಅಟೆಂಡೆಂಟ್ (ಸಿಎಸ್ (ಎಂಎ)) ನಿಯಮಗಳ ಅಡಿಯಲ್ಲಿ ಬರುವ ನೌಕರರಿಗೆ ಮತ್ತು ಕೇಂದ್ರ ಸರ್ಕಾರಿ ಆರೋಗ್ಯ ಯೋಜನೆ (ಸಿಜಿಹೆಚ್ಎಸ್) ವ್ಯಾಪ್ತಿಗೆ ಬರುವ ನೌಕರರಿಗೆ ಅನ್ವಯಿಸಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ- PF ಗ್ರಾಹಕರಿಗೆ ಗುಡ್ ನ್ಯೂಸ್ : ಈ ತಿಂಗಳು ನಿಮ್ಮಗೆ ಸಿಗಲಿದೆ ಶೇ.8.5 ಬಡ್ಡಿ! 

"ಹಲವು ಸಂದರ್ಭಗಳಲ್ಲಿ, ಮಾರಣಾಂತಿಕ ಕಾಯಿಲೆಗಳಲ್ಲಿ ರೋಗಿಯ ಜೀವವನ್ನು ಉಳಿಸುವ ಸಲುವಾಗಿ, ತುರ್ತು ಸಂದರ್ಭಗಳಲ್ಲಿ ಅವರನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸುವ ಅವಶ್ಯಕತೆ ಇರುತ್ತದೆ ಮತ್ತು ಇಂತಹ ಪರಿಸ್ಥಿತಿಯಲ್ಲಿ ಆಸ್ಪತ್ರೆಯಿಂದ ಅಂದಾಜು ವ್ಯಕ್ತಪಡಿಸುವುದು ಸಾಧ್ಯವಿರುವುದಿಲ್ಲ. ಅಂತಹ ರೋಗಿಯನ್ನು ತುರ್ತು ಪರಿಸ್ಥಿತಿಯಲ್ಲಿ ದಾಖಲಿಸಲಾಗಿರುವ ಸಂಬಂಧಪಟ್ಟ ಆಸ್ಪತ್ರೆಯಿಂದ ಅಂದಾಜುಗಳನ್ನು ನಿರ್ವಹಿಸಲು ಸಿಬ್ಬಂದಿಗಳ ಕುಟುಂಬ ಸದಸ್ಯರಿಗೆ ಸಾಧ್ಯವಾಗದಿದ್ದಾಗ ಆಸ್ಪತ್ರೆಯಲ್ಲಿ ಅಂತಹ ನಿರ್ಣಾಯಕ ರೋಗಿಯ ಚಿಕಿತ್ಸೆಗಾಗಿ ಸೌಲಭ್ಯವನ್ನು ಮೊದಲೇ ಸಂಘಟಿಸುವ ಅವಶ್ಯಕತೆಯಿದೆ. ಕೆಲವೊಮ್ಮೆ ರೋಗಿಯು ಐಸಿಯುನಲ್ಲಿರಬಹುದು, ಅಲ್ಲಿ ಮುನ್ಸೂಚನೆ  ಮೊದಲೇ ನೀಡಲಾಗುವುದಿಲ್ಲ. ಹೀಗಾಗಿ COVID ಸೇರಿದಂತೆ ಗಂಭೀರ ಮಾರಣಾಂತಿಕ ಕಾಯಿಲೆಯಿಂದಾಗಿ ತುರ್ತು ಆಸ್ಪತ್ರೆಗೆ ದಾಖಲು ಮಾಡಲು ವೈದ್ಯಕೀಯ ಮುಂಗಡವನ್ನು ನೀಡಲು ಈ ಕೆಳಗಿನ ವಿಧಾನವನ್ನು ಅಳವಡಿಸಿಕೊಳ್ಳಬಹುದು" ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ- EPFO : ಒಂದು ಗಂಟೆಯಲ್ಲಿ PF ಖಾತೆಯಿಂದ ಹಿಂಪಡೆಯಬಹುದು ಒಂದು ಲಕ್ಷ ರೂಪಾಯಿ ..!

EPFO ಹಿಂಪಡೆಯುವಿಕೆಯ ಷರತ್ತುಗಳು ಯಾವುವು?
ನೌಕರರ ವೇತನದ ಕನಿಷ್ಟ 6 ತಿಂಗಳ ಮೂಲ ವೇತನ ಮತ್ತು ಪ್ರಿಯ ಭತ್ಯೆ ಅಥವಾ ಬಡ್ಡಿಯ ಜೊತೆಗೆ ಸದಸ್ಯರ ಪಾಲಿನ ಕೊಡುಗೆ ಈ ಹಿಂಪಡೆಯಲಾಗುವ ಹಣ ಒಳಗೊಂಡಿರುತ್ತದೆ.

ಇದನ್ನೂ ಓದಿ- ಆನ್‌ಲೈನ್‌ನಲ್ಲಿ EPFO ಬ್ಯಾಂಕ್ ಖಾತೆ ಸಂಖ್ಯೆ ಬದಲಾಯಿಸುವುದು, ನವೀಕರಿಸುವುದು ಹೇಗೆ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News