ಲಂಡನ್: ಭಾರತವು ಬ್ರಿಟನ್ ಹಿಂದಿಕ್ಕಿ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಭಾರತವು 2021ರ ಅಂತಿಮ 3 ತಿಂಗಳಲ್ಲಿ ಬ್ರಿಟನ್ ಹಿಂದಿಕ್ಕಿ ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶಗಳ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿತು. ಇದೇ ವೇಳೆ ಬ್ರಿಟನ್ 6ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಬ್ರಿಟನ್‍ ಅತೀ ಹೆಚ್ಚಿನ ಜೀವನ ವೆಚ್ಚದ ಆಘಾತ ಎದುರಿಸುತ್ತಿದೆ. ಯುಕೆ ಸರ್ಕಾರಕ್ಕೆ ನೂತನ ವಿಶ್ವದ ಅತಿದೊಡ್ಡ ಆರ್ಥಿಕತೆಯು ಮತ್ತೊಂದು ಹೊಡೆತ ನೀಡಿದೆ. ಈ ಪಟ್ಟಿಯಲ್ಲಿ 1 ಸ್ಥಾನ ಕುಸಿದಿರುವ ಬ್ರಿಟನ್ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ, ಭಾರತವು 1 ಸ್ಥಾನ ಜಿಗಿತ ಕಂಡು 5ನೇ ಸ್ಥಾನಕ್ಕೇರಿದೆ.


COMMERCIAL BREAK
SCROLL TO CONTINUE READING

2021ರ ಅಂತಿಮ ತ್ರೈಮಾಸಿಕ ವರದಿಯಲ್ಲಿ ಭಾರತವು ಬ್ರಿಟನ್ ಹಿಂದಿಕ್ಕಿ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯ GDP ಅಂಕಿಅಂಶಗಳ ಪ್ರಕಾರ ಭಾರತವು ಮೊದಲ ತ್ರೈಮಾಸಿಕದಲ್ಲಿ ತನ್ನ ಮುನ್ನಡೆ ವಿಸ್ತರಿಸಿದ್ದು, ಬ್ರಿಟನ್ ಆರ್ಥಿಕತೆಯನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೆ ಏರಿಕೆಯಾಗಿದೆ.


ಇದನ್ನೂ ಓದಿ: ವಿಶ್ವಸಂಸ್ಥೆ ವರದಿಯಲ್ಲಿ ಚೀನಾದ ನೈಜಮುಖ ಬಹಿರಂಗ, ಮುಸ್ಲಿಮರ ನರಕಯಾತನೆ ಬಯಲು


ಪಟ್ಟಿಯಲ್ಲಿ ದೊಡ್ಡಣ್ಣ ಅಮೆರಿಕ ಮೊದಲ ಸ್ಥಾನದಲ್ಲಿಯೇ ಮುಂದುವರೆದಿದ್ದು, 2ನೇ ಸ್ಥಾನದಲ್ಲಿ ಚೀನಾ, 3ನೇ ಸ್ಥಾನದಲ್ಲಿ ಜಪಾನ್ ಮತ್ತು 4ನೇ ಸ್ಥಾನದಲ್ಲಿ ಜರ್ಮನಿ ಇದೆ. 5ನೇ ಸ್ಥಾನದಲ್ಲಿ ಭಾರತವಿದ್ದು, ಬ್ರಿಟನ್ 6ನೇ ಸ್ಥಾನಕ್ಕೆ ಕುಸಿದಿದೆ. ಇದೇ ಭಾರತ ದಶಕದ ಹಿಂದೆ 11ನೇ ಸ್ಥಾನದಲ್ಲಿತ್ತು. ಬ್ರಿಟನ್ 5ನೇ ಸ್ಥಾನದಲ್ಲಿತ್ತು ಎಂದು ವರದಿ ಉಲ್ಲೇಖಿಸಿದೆ.


ವರದಿಗಳ ಪ್ರಕಾರ ಭಾರತೀಯ ಆರ್ಥಿಕತೆಯ ಗಾತ್ರ ಮಾರ್ಚ್‌ನಿಂದ ತ್ರೈಮಾಸಿಕದಲ್ಲಿ 'Nominal' ನಗದು ಪರಿಭಾಷೆಯಲ್ಲಿ 854.7 ಬಿಲಿಯನ್ ಅಮೆರಿಕನ್ ಡಾಲರ್ ಆಗಿದ್ದರೆ, ಬ್ರಿಟನ್ ದೇಶದ್ದು 816 ಬಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು. ಇದು ಹೊಂದಾಣಿಕೆಯ ಆಧಾರವಾಗಿತ್ತು ಮತ್ತು ಸಂಬಂಧಿತ ತ್ರೈಮಾಸಿಕದ ಕೊನೆಯ ದಿನದಂದು ಡಾಲರ್ ವಿನಿಮಯ ದರವನ್ನು ಬಳಸುತ್ತದೆ.


ಇದನ್ನೂ ಓದಿ: Xi Jinping: ಮಾವೋ ನಂತರ ಚೀನಾದ ಅತ್ಯಂತ ಶಕ್ತಿಶಾಲಿ ನಾಯಕ ಕ್ಸಿ ಜಿನ್‌ಪಿಂಗ್ 


ಭಾರತದ ಆರ್ಥಿಕತೆಯು ವರ್ಷದಿಂದ ವರ್ಷಕ್ಕೆ ಶೇ.13.5ರಷ್ಟು ಬೆಳವಣಿಗೆಯ ಪ್ರಕಾರ ಮೊದಲ ತ್ರೈಮಾಸಿಕಕ್ಕೆ ಜಿಡಿಪಿ ಡೇಟಾವನ್ನು ಬಿಡುಗಡೆ ಮಾಡಿದ ಕೇವಲ 2 ದಿನಗಳ ನಂತರ ಈ ವರದಿ ಬಂದಿದೆ. ಈ ಸಂಖ್ಯೆಯು ಆರ್‌ಬಿಐ ಮುನ್ಸೂಚನೆಗಿಂತ ಸ್ವಲ್ಪ ಕಡಿಮೆಯಾದರೂ, ಅಭಿವೃದ್ಧಿ ದರವು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇನ್ನೂ ಅತ್ಯಧಿಕವಾಗಿದೆ. ಭಾರತವು ಈ ಆರ್ಥಿಕ ವರ್ಷದಲ್ಲಿ ಸುಮಾರು ಶೇ.7ರಷ್ಟು ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.