Weekly Pay Policy In India : ಕರೋನಾ ಅವಧಿಯ (Coronavirus) ನಂತರ, ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳ ಸಂಬಳವನ್ನು ಕಡಿತಗೊಳಿಸುತ್ತಿವೆ. ಆದರೆ, ಈ ಮಧ್ಯೆ ಉದ್ಯೋಗಿಗಳಿಗೆ ಪ್ರತಿ ವಾರ ಸಂಬಳ (weekly salary) ನೀಡುವ ಕಂಪನಿ ಇದೆ. ವಾಸ್ತವವಾಗಿ, ಜಾಗತಿಕ ಸಾಂಕ್ರಾಮಿಕದ ಈ ಯುಗದಲ್ಲಿ, ಇಂಡಿಯಾಮಾರ್ಟ್ (indiamart) ಕಂಪನಿಯು ಉದ್ಯೋಗಿಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಂಡಿದೆ. ಈಗ ನೌಕರರು ತಮ್ಮ ವೇತನಕ್ಕಾಗಿ ಒಂದು ತಿಂಗಳು ಕಾಯಬೇಕಾಗಿಲ್ಲ.


COMMERCIAL BREAK
SCROLL TO CONTINUE READING

ಗಮನಿಸಬೇಕಾದ ಸಂಗತಿಯೆಂದರೆ, ಅನೇಕ ದೇಶಗಳಲ್ಲಿನ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಪ್ರತಿ ವಾರ ವೇತನವನ್ನು (weekly salary) ಪಾವತಿಸುತ್ತವೆ. ಈಗ ಇಂಡಿಯಾಮಾರ್ಟ್ ಭಾರತದಲ್ಲಿ ಈ ಕ್ರಮವನ್ನು  ಪ್ರಾರಂಭಿಸಿದೆ. ಇಂಡಿಯಾಮಾರ್ಟ್ ಕಂಪನಿಯು (Indiamart Company) ತನ್ನ ಉದ್ಯೋಗಿಗಳಿಗೆ ಪ್ರತಿ ವಾರ ಸಂಬಳ ನೀಡಲು ನಿರ್ಧರಿಸಿದೆ (Salary rules). 


ಇದನ್ನೂ ಓದಿ :  7th Pay Commission: ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.34ಕ್ಕೆ ಏರಿಕೆಯಾಗುವುದು ಖಚಿತ! ಘೋಷಣೆ ಯಾವಾಗ?


ಅನೇಕ ದೇಶಗಳಲ್ಲಿ ಪ್ರಚಲಿತದಲ್ಲಿದೆ ಈ ಪದ್ಧತಿ : 
ಇಂಡಿಯಾಮಾರ್ಟ್ ವಾರದ ವೇತನವನ್ನು ಪಾವತಿಸುವ ದೇಶದ ಮೊದಲ ಕಂಪನಿಯಾಗಿದೆ. ಕಂಪನಿಯ ಪ್ರಕಾರ, 'ಬದಲಾಗುತ್ತಿರುವ ಕಾಲ ಮತ್ತು ಹೆಚ್ಚುತ್ತಿರುವ ಆರ್ಥಿಕ ಹೊರೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಹಾಂಗ್ ಕಾಂಗ್ ಮತ್ತು ಅಮೆರಿಕದಂತಹ (America) ಅನೇಕ ದೇಶಗಳಲ್ಲಿ ಇಂತಹ ಪದ್ಧತಿ ಜಾರಿಯಲ್ಲಿದೆ. ಜಾಗತಿಕ ಆರ್ಥಿಕತೆಯ ಬದಲಾದ ಸನ್ನಿವೇಶಗಳು, ಉದ್ಯೋಗಿಗಳ ಅನುಕೂಲಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.


ಕಪನಿಯ ನಿರ್ಧಾರಕ್ಕೆ ಸ್ವಾಗತ :  
“ಕಂಪನಿಯಲ್ಲಿರುವ ಪ್ರತಿಯೊಬ್ಬರೂ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ ಎಂದು ಇಂಡಿಯಾಮಾರ್ಟ್‌ನ ಸಿಒಒ ದಿನೇಶ್ ಗುಲಾಟಿ, ತಿಳಿಸಿದ್ದಾರೆ. ಕಂಪನಿಯು ಹಲವು ವರ್ಷಗಳ ಹಿಂದೆ ಈ ನಿಟ್ಟಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿತ್ತು. ಈ ಕಂಪನಿ ಯಲ್ಲಿ ಪ್ರತಿ ವಾರ ನೌಕರರಿಗೆ ಇನ್ಸೇನ್ ಟೀವ್ ನೀಡಲಾಗುತ್ತದೆ. ಕರೋನಾ ಸಾಂಕ್ರಾಮಿಕದ ನಂತರ, ಇಂಡಿಯಾಮಾರ್ಟ್, ಶಾಶ್ವತವಾಗಿ  ವರ್ಕ್ ಫ್ರಮ್ ಹೋಂ (work from home) ಅನ್ನು  ಜಾರಿಗೆ ತಂದಿದೆ.


ಇದನ್ನೂ ಓದಿ :  Post Office Schemes: ಈ ಅದ್ಭುತ ಯೋಜನೆಯಲ್ಲಿ 7,500 ರೂ. ಹೂಡಿಕೆ ಮಾಡಿ, ಮಿಲಿಯನೇರ್ ಆಗಿ..! 


ಪ್ರತಿ ವಾರ ನೌಕರರಿಗೆ ಸಿಗಲಿದೆ ವೇತನ : 
ಈ ನಿರ್ಧಾರದಿಂದಾಗಿ, ಪ್ರತಿ ವಾರ ಸಂಬಳ ಪಡೆಯುವ ಮೂಲಕ ಉದ್ಯೋಗಿಗಳಿಗೆ ಮೊದಲಿಗಿಂತ ಆರ್ಥಿಕ ಅಗತ್ಯಗಳನ್ನು ಪೂರೈಸಲು ಸುಲಭವಾಗುತ್ತದೆ ಎಂದು ಕಂಪನಿ ಹೇಳಿದೆ. ಇದರೊಂದಿಗೆ ನೌಕರರು ಇನ್ನು ಮುಂದೆ ಸಂಬಳಕ್ಕಾಗಿ (salary) ಒಂದು ತಿಂಗಳು ಕಾಯಬೇಕಾಗಿಲ್ಲ. ದೇಶದಲ್ಲೇ ಮೊದಲ ಬಾರಿಗೆ ಕಂಪನಿಯೊಂದು ಇಂತಹ ವ್ಯವಸ್ಥೆಯನ್ನು ಆರಂಭಿಸಲಿದೆ. ಇದರಿಂದ ನೌಕರರಿಗೆ ಎಲ್ಲಾ  ರೀತಿಯಲ್ಲೂ ಅನುಕೂಲವಾಗಲಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.