7th Pay Commission: ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.34ಕ್ಕೆ ಏರಿಕೆಯಾಗುವುದು ಖಚಿತ! ಘೋಷಣೆ ಯಾವಾಗ?

7th Pay Commission Latest News: ಕೇಂದ್ರ ನೌಕರರಿಗೆ (Central Government Employees) ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ತುಟ್ಟಿಭತ್ಯೆಗಾಗಿ 12-ತಿಂಗಳ ಸೂಚ್ಯಂಕ ಸರಾಸರಿ 351.33 ಆಗಿದೆ. ಈ ಸರಾಸರಿ ಸೂಚ್ಯಂಕದಲ್ಲಿ 34.04% ತುಟ್ಟಿಭತ್ಯೆ ನೀಡಲಾಗುತ್ತದೆ. ಅದನ್ನು ಯಾವಾಗ ಘೋಷಿಸಲಾಗುವುದು ಎಂಬುದರ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.

Written by - Nitin Tabib | Last Updated : Feb 5, 2022, 04:49 PM IST
  • ಜನವರಿ 2022ರಿಂದ ತುಟ್ಟಿಭತ್ಯೆಯಲ್ಲಿ ಮತ್ತೆ ಶೇ.3ರಷ್ಟು ಏರಿಕೆ
  • ವೇತನದಲ್ಲಿ ಸುಮಾರು 90 ಸಾವಿರ ರೂ.ಗಳ ಏರಿಕೆ.
  • ಇಲ್ಲಿ ತಿಳಿಯಿರಿ ಕನಿಷ್ಠ ಮತ್ತು ಗರಿಷ್ಟ ವೇತನಗಳ ಲೆಕ್ಕಾಚಾರ
7th Pay Commission: ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.34ಕ್ಕೆ ಏರಿಕೆಯಾಗುವುದು ಖಚಿತ! ಘೋಷಣೆ ಯಾವಾಗ? title=
7th Pay Commission Latest News (File Photo)

ನವದೆಹಲಿ: Dearness allowance Hike - ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿಸುದ್ದಿಯೊಂದು ಪ್ರಕಟವಾಗಿದೆ. ಸುದೀರ್ಘ ಕಾಯುವಿಕೆಯ ನಂತರ, ತುಟ್ಟಿಭತ್ಯೆಯಲ್ಲಿ ಶೇ.3ರಷ್ಟು  ಹೆಚ್ಚಳವಾಗುವುದು ಇದೀಗ ಖಚಿತವಾಗಿದೆ. ಅಂದರೆ, ಇದೀಗ ನೌಕರರು ಮತ್ತು ಪಿಂಚಣಿದಾರರು 34% ದರದಲ್ಲಿ ತುಟ್ಟಿ ಭತ್ಯೆ (DA Hike) ಪಡೆಯಲಿದ್ದಾರೆ. ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕದ (AICPI Index) ಡಿಸೆಂಬರ್ 2021 ರ ಸೂಚ್ಯಂಕದಲ್ಲಿ ಒಂದು ಅಂಶದ ಇಳಿಕೆ ಕಂಡುಬಂದಿದೆ. ತುಟ್ಟಿಭತ್ಯೆಗಾಗಿ ಸರಾಸರಿ 12 ತಿಂಗಳ ಸೂಚ್ಯಂಕವು 351.33 ಆಗಿದ್ದು, ಸರಾಸರಿ ಶೇ.34.04 ರಷ್ಟು (Dearness allowance) ತುಟ್ಟಿಭತ್ಯೆ ಸಿಗುವುದು ಖಚಿತವಾಗಿದೆ. ಆದರೆ, ತುಟ್ಟಿಭತ್ಯೆಯನ್ನು ಯಾವಾಗಲೂ ಪೂರ್ಣ ಸಂಖ್ಯೆಯಲ್ಲಿ ನೀಡಲಾಗುತ್ತದೆ. ಅಂದರೆ, ಜನವರಿ 2022 ರಿಂದ, ಒಟ್ಟು ತುಟ್ಟಿ ಭತ್ಯೆ ಶೇ. 34%ರಷ್ಟು ಆಗಲಿದೆ.

ಇದನ್ನೂ ಓದಿ-Viral Trend: ಇನ್ಸ್ಟಾಗ್ರಾಮ್ ನಲ್ಲಿ ಭಾರಿ ಟ್ರೆಂಡ್ ಸೃಷ್ಟಿಸಿದ 'That's Not My Name'

ಘೋಷಣೆ ಯಾವಾಗ (7th CPC)
ಪ್ರಸ್ತುತ, ನೌಕರರು ಈಗಾಗಲೇ ಶೇ. 31 ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ. ಆದರೆ ಜನವರಿ 2022 ರಿಂದ, ನೀವು ಶೇ. 3 ಹೆಚ್ಚಿನ ತುಟ್ಟಿಭತ್ಯೆಯ ಲಾಭವನ್ನು ಪಡೆಯಬಹುದು. 7 ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ, ತುಟ್ಟಿಭತ್ಯೆಯನ್ನು ಮೂಲ ವೇತನದಲ್ಲಿ (Basic Salary) ಮಾತ್ರ ನೀಡಲಾಗುತ್ತದೆ. ಬರುವ ಮಾರ್ಚ್‌ನಲ್ಲಿ ಈ ಕುರಿತು  ಘೋಷಣೆಯಾಗುವ ನಿರೀಕ್ಷೆಯಿದೆ. ವಾಸ್ತವದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಸರ್ಕಾರ (Modi Government) ಅದನ್ನು ಸದ್ಯಕ್ಕೆ ಪ್ರಕಟಿಸುವುದಿಲ್ಲ.

ಇದನ್ನೂ ಓದಿ- Gemstone: ರತ್ನವನ್ನು ಧರಿಸುವ ಮೊದಲು ಈ ವಿಶೇಷ ನಿಯಮವನ್ನು ತಿಳಿದುಕೊಳ್ಳಿ

ಡಿಸೆಂಬರ್ ನಲ್ಲಿ ಇಳಿಕೆಯಾದ AICPI-IW
ಸರ್ಕಾರದ ಈ ನಿರ್ಧಾರದಿಂದ 50 ಲಕ್ಷಕ್ಕೂ ಹೆಚ್ಚು ಕೇಂದ್ರ ನೌಕರರು ಮತ್ತು 65 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ ಎಂಬುದು ಇಲ್ಲಿ ಗಮನಾರ್ಹ. ಇದರ ನಂತರ, ಇದೀಗ ಮುಂದಿನ ತುಟ್ಟಿಭತ್ಯೆಯನ್ನು ಜುಲೈ 2022 ರಲ್ಲಿ ಲೆಕ್ಕಹಾಕಲಾಗುತ್ತದೆ. ಡಿಸೆಂಬರ್ 2021 ಕ್ಕೆ AICPI-IW (All India Consumer Price Index for Industrial Workers) ಡೇಟಾವನ್ನು ಬಿಡುಗಡೆ ಮಾಡಲಾಗಿದೆ. ಈ ಅಂಕಿ ಅಂಶದ ಪ್ರಕಾರ, ಡಿಸೆಂಬರ್‌ನಲ್ಲಿ ಈ ಅಂಕಿ ಅಂಶವು 0.3 ಪಾಯಿಂಟ್‌ಗಳ ಕುಸಿತದೊಂದಿಗೆ 125.4 ಪಾಯಿಂಟ್‌ಗಳಿಗೆ ತಲುಪಿದೆ. ನವೆಂಬರ್‌ನಲ್ಲಿ, ಇದು 125.7 ಪಾಯಿಂಟ್‌ಗಳಷ್ಟಿತ್ತು. ಮತ್ತು ಡಿಸೆಂಬರ್‌ನಲ್ಲಿ 0.24% ರಷ್ಟು ಕಡಿಮೆಯಾಗಿದೆ. ಆದರೆ, ಇದು ತುಟ್ಟಿಭತ್ಯೆ ಹೆಚ್ಚಳದ ಮೇಲೆ ಹೆಚ್ಚು  ಪರಿಣಾಮ ಬೀರುವುದಿಲ್ಲ. ಕಾರ್ಮಿಕ ಸಚಿವಾಲಯ ಎಐಸಿಪಿಐ-ಐಡಬ್ಲ್ಯು ಅಂಕಿಅಂಶಗಳ ನಂತರ, ಈ ಬಾರಿ ತುಟ್ಟಿಭತ್ಯೆ ಶೇಕಡಾ 3 ರಷ್ಟು ಹೆಚ್ಚಿಸಲು ನಿರ್ಧರಿಸಿದೆ ಎನ್ನಲಾಗಿದೆ.

ಇದನ್ನೂ ಓದಿ-ಶ್ರೀ ರಾಮಾನುಜಾಚಾರ್ಯರ ಬಗ್ಗೆ ನಿಮಗೆಷ್ಟು ಗೊತ್ತು? ಅವರ 216 ಅಡಿ ಎತ್ತರದ ವಿಗ್ರಹದ ವಿಶೇಷತೆ ಏನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News