Post Office Schemes: ಈ ಅದ್ಭುತ ಯೋಜನೆಯಲ್ಲಿ 7,500 ರೂ. ಹೂಡಿಕೆ ಮಾಡಿ, ಮಿಲಿಯನೇರ್ ಆಗಿ..!

ಪಿಪಿಎಫ್ ಕೋಟ್ಯಧಿಪತಿ: ನೀವು ಸಹ ಕೋಟ್ಯಧಿಪತಿಯಾಗಲು ಬಯಸಿದರೆ ಇಂದಿನಿಂದಲೇ ಹೂಡಿಕೆಯನ್ನು ಪ್ರಾರಂಭಿಸಿ. ನೀವು ಹೆಚ್ಚು ಹೂಡಿಕೆ ಮಾಡಬೇಕಾಗಿಲ್ಲ, ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಪ್ರತಿ ತಿಂಗಳು ಕೆಲವೇ ಸಾವಿರ ರೂ.ಗಳನ್ನು ಹೂಡಿಕೆ ಮಾಡಿದರೆ ಸಾಕು ಕೋಟ್ಯಧಿಪತಿಯಾಗಬಹುದು.

Written by - Puttaraj K Alur | Last Updated : Feb 5, 2022, 12:20 PM IST
  • ಕೆಲವೇ ವರ್ಷಗಳಲ್ಲಿ ಮಿಲೇನಿಯರ್ ಆಗಲು ಇಲ್ಲಿದೆ ಇಲ್ಲಿದೆ ಸುಲಭ ವಿಧಾನ
  • ಮಿಲಿಯನೇರ್ ಆಗಲು ನೀವು ಪ್ರತಿ ತಿಂಗಳು ಕೇವಲ 7,500 ರೂ. ಹೂಡಿಕೆ ಮಾಡಿ
  • ಸಣ್ಣ ವಯಸ್ಸಿನಲ್ಲಿಯೇ ಹೂಡಿಕೆ ಪ್ರಾರಂಭಿಸಿ ನಿವೃತ್ತಿಗೆ ಕೋಟಿ ಪಡೆದುಕೊಳ್ಳಿರಿ
Post Office Schemes: ಈ ಅದ್ಭುತ ಯೋಜನೆಯಲ್ಲಿ 7,500 ರೂ. ಹೂಡಿಕೆ ಮಾಡಿ, ಮಿಲಿಯನೇರ್ ಆಗಿ..! title=
ಮಿಲೇನಿಯರ್ ಆಗಲು ಇಲ್ಲಿದೆ ಇಲ್ಲಿದೆ ಸುಲಭ ವಿಧಾನ

ನವದೆಹಲಿ: ನೀವು ಸಹ ಮಿಲಿಯನೇರ್ ಆಗಲು ಬಯಸಿದರೆ ಇದೇ ಸುಸಮಯ. ಮಿಲಿಯನೇರ್ ಆಗಲು ಇಂದಿನಿಂದಲೇ ಹೂಡಿಕೆಯನ್ನು ಪ್ರಾರಂಭಿಸಿ. ಇದಕ್ಕಾಗಿ ನಿಮಗೆ ಹೆಚ್ಚಿನ ಹೂಡಿಕೆ ಅಗತ್ಯವಿಲ್ಲ, ಆದರೆ ಪ್ರತಿ ತಿಂಗಳು ಕೆಲವೇ ಸಾವಿರ ರೂ.ಗಳನ್ನು ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡಬೇಕು. ಇಲ್ಲಿ ಹೇಳಿರುವ ರೀತಿಯಲ್ಲಿ ನೀವು ಹೂಡಿಕೆ ಮಾಡುವುದನ್ನು ಮುಂದುವರಿಸಿದರೆ ನಿವೃತ್ತಿ(Retirement)ಗೂ ಮುಂಚೆಯೇ ನೀವು ಮಿಲಿಯನೇರ್ ಆಗುತ್ತೀರಿ.

ದೀರ್ಘಾವಧಿಯ ಹೂಡಿಕೆ ಪ್ರಯೋಜನ

ಸಾರ್ವಜನಿಕ ಭವಿಷ್ಯ ನಿಧಿ(Public Provident Fund)ಯು ದೀರ್ಘಾವಧಿಯ ಹೂಡಿಕೆಗೆ ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ನೀವು ಉತ್ತಮ ಆದಾಯವನ್ನು ಪಡೆಯಬಹುದು. ನೀವು 1 ವರ್ಷದಲ್ಲಿ 1.5 ಲಕ್ಷ ರೂ.ವರೆಗೆ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಬಹುದು. ಅಂದರೆ ತಿಂಗಳಿಗೆ 12,500 ರೂ. ಆಗುತ್ತದೆ. ನೀವು ಮಿಲಿಯನೇರ್ ಆಗಲು ಬಯಸಿದರೆ ಪ್ರತಿ ತಿಂಗಳು ಎಷ್ಟು ಹೂಡಿಕೆ ಮಾಡಬೇಕು? ಮತ್ತು ಎಷ್ಟು ಸಮಯದವರೆಗೆ ಹೂಡಿಕೆ ಮಾಡಬೇಕು? ಎಂಬುದನ್ನು ತಿಳಿದುಕೊಳ್ಳಲೇಬೇಕು.

PPF ನಲ್ಲಿ ಶೇ.7.1ರಷ್ಟು ಬಡ್ಡಿ ಲಭ್ಯವಿದೆ

ಪ್ರಸ್ತುತ ಸರ್ಕಾರವು PPF ಖಾತೆಗೆ ಶೇ.7.1ರಷ್ಟು ವಾರ್ಷಿಕ ಬಡ್ಡಿ(PPF Account)ಯನ್ನು ನೀಡುತ್ತದೆ. ಇದರಲ್ಲಿ ಹೂಡಿಕೆಯನ್ನು 15 ವರ್ಷಗಳವರೆಗೆ ಮಾಡಲಾಗುತ್ತದೆ. ಅದರಂತೆ ತಿಂಗಳ ಹೂಡಿಕೆಯ ಒಟ್ಟು ಮೌಲ್ಯ 12,500 ರೂ. ಆಗುತ್ತದೆ. 15 ವರ್ಷಗಳ ನಂತರ ಇದು 40,68,209 ರೂ. ಆಗುತ್ತದೆ. ಇದರಲ್ಲಿ ಒಟ್ಟು ಹೂಡಿಕೆ 22.5 ಲಕ್ಷ ರೂ. ಮತ್ತು ಇದರ ಬಡ್ಡಿ 18,18,209 ರೂ. ಆಗಿರುತ್ತದೆ.

ಇದನ್ನೂ ಓದಿ: ITR ದಾಖಲಿಸುವ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಿದ ಸರ್ಕಾರ, ಫಟ್ ಅಂತ ನೀವೂ ತಿಳಿದುಕೊಳ್ಳಿ

1 ಕೋಟಿ ರೂ. ಬೇಕೆಂದರೆ ಹೀಗೆ ಮಾಡಬೇಕು

ಪ್ಲಾನ್ A

  1. ನಿಮಗೆ 30 ವರ್ಷ ವಯಸ್ಸಾಗಿದೆ ಮತ್ತು ನೀವು PPFನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ್ದೀರಿ ಎಂದು ಭಾವಿಸೋಣ
  2. 15 ವರ್ಷಗಳ ಕಾಲ ಪ್ರತಿ ತಿಂಗಳು 12,500 ರೂ.ಗಳನ್ನು PPFನಲ್ಲಿ ಠೇವಣಿ ಮಾಡಿದ ನಂತರ ನೀವು 40,68,209 ರೂ.ಪಡೆಯುತ್ತೀರಿ.
  3. ಈಗ ನೀವು ಈ ಹಣವನ್ನು ಹಿಂಪಡೆಯಬೇಕಾಗಿಲ್ಲ, ನೀವು 5-5 ವರ್ಷಗಳ ಅವಧಿಗೆ PPF ಅನ್ನು ಮುಂದುವರೆಸುತ್ತಲೇ ಇರುತ್ತೀರಿ
  4. ಅಂದರೆ 15 ವರ್ಷಗಳ ನಂತರ ಇನ್ನೂ 5 ವರ್ಷಗಳವರೆಗೆ ಹೂಡಿಕೆ ಮಾಡಿದರೆ 20 ವರ್ಷಗಳ ನಂತರ ಈ ಮೊತ್ತವು  66,58,288 ರೂ. ಆಗುತ್ತದೆ.
  5. ಇದು 20 ವರ್ಷಗಳಾದ ನಂತರ ಹೂಡಿಕೆಯನ್ನು ಮತ್ತೆ ಮುಂದಿನ 5 ವರ್ಷಗಳವರೆಗೆ ವಿಸ್ತರಿಸಿರಿ. ಅಂದರೆ 25 ವರ್ಷಗಳ ನಂತರ ಈ ಮೊತ್ತವು ಬರೋಬ್ಬರಿ 1,03,08,015 ರೂ. ಆಗುತ್ತದೆ.

ಮಿಲಿಯನೇರ್ ಆಗಲು ದೀರ್ಘಕಾಲದ ಹೂಡಿಕೆ ಅಗತ್ಯ

ನೀವು ಮಿಲಿಯನೇರ್(PPF Crorepati) ಆಗಬೇಕೆಂದರೆ ದೀರ್ಘಕಾಲದ ಹೂಡಿಕೆ ಮಾಡಲೇಬೇಕು. ಅಂದರೆ ನೀವು 30ನೇ ವಯಸ್ಸಿನಿಂದ ಪ್ರತಿ ತಿಂಗಳು 12,500 ರೂ.ಗಳನ್ನು PPFನಲ್ಲಿ ಹೂಡಿಕೆ ಮಾಡುತ್ತಾ ಬಂದರೆ ನಂತರದ 25 ವರ್ಷಗಳು ಅಂದರೆ ನಿಮ್ಮ 55ನೇ ವಯಸ್ಸಿನಲ್ಲಿ ನೀವು ಮಿಲಿಯನೇರ್ ಆಗುತ್ತೀರಿ. PPF ಖಾತೆಯ ಮುಕ್ತಾಯ ಅವಧಿಯು 15 ವರ್ಷಗಳು ಎಂಬುದನ್ನು ಗಮನಿಸಬೇಕು. ಈ ಖಾತೆಯನ್ನು 15 ವರ್ಷಗಳವರೆಗೆ ವಿಸ್ತರಿಸಬೇಕೆಂದರೆ ನೀವು ಮತ್ತೈದು ವರ್ಷಗಳಿಗೆ ಖಾತೆ ವಿಸ್ತರಿಸಿಕೊಳ್ಳಬೇಕು.

ಪ್ಲಾನ್ B

ನೀವು 12,500 ರೂ. ಬದಲಿಗೆ ಸ್ವಲ್ಪ ಕಡಿಮೆ ಮೊತ್ತವನ್ನು PPFನಲ್ಲಿ ಹೂಡಿಕೆ ಮಾಡಲು ಬಯಸಿದರೆ, ಆದರೆ 55ನೇ ವಯಸ್ಸಿನಲ್ಲಿಯೇ ಮಿಲಿಯನೇರ್ ಆಗಲು ಬಯಸಿದರೆ ಸ್ವಲ್ಪ ಮುಂಚಿತವಾಗಿ ಹೂಡಿಕೆ ಪ್ರಾರಂಭಿಸಬೇಕು.

  1.  25ನೇ ವಯಸ್ಸಿನಲ್ಲಿ ನೀವು ಪ್ರತಿ ತಿಂಗಳು ನಿಮ್ಮ PPF ಖಾತೆಯಲ್ಲಿ 10 ಸಾವಿರ ರೂ.ಗಳನ್ನು ಹೂಡಿಕೆ ಪ್ರಾರಂಭಿಸಿದ್ದೀರಿ ಎಂದಿಟ್ಟುಕೊಳ್ಳಿರಿ.
  2. ಶೇ.7.1ರಷ್ಟು ಬಡ್ಡಿಯ ಪ್ರಕಾರ 15 ವರ್ಷಗಳ ನಂತರ ನೀವು ಒಟ್ಟು 32,54,567 ರೂ. ಮೌಲ್ಯವನ್ನು ಹೊಂದುತ್ತೀರಿ.
  3. ಈಗ ಇದನ್ನೇ ಮತ್ತೆ 5 ವರ್ಷಗಳವರೆಗೆ ವಿಸ್ತರಿಸಿದರೆ ಅಂದರೆ 20 ವರ್ಷಗಳ ನಂತರ ಇದರ ಒಟ್ಟು ಮೌಲ್ಯ 53,26,631 ರೂ. ಆಗುತ್ತದೆ.
  4. ಇದನ್ನು ಮತ್ತೆ 5 ವರ್ಷಗಳವರೆಗೆ ವಿಸ್ತರಿಸಿ, 25 ವರ್ಷಗಳ ನಂತರ ಒಟ್ಟು ಮೌಲ್ಯ 82,46,412 ರೂ. ಆಗುತ್ತದೆ.
  5. ಇದನ್ನು ಮತ್ತೆ 5 ವರ್ಷಗಳಿಗೆ ವಿಸ್ತರಿಸಿ, ಅಂದರೆ 30 ವರ್ಷಗಳ ನಂತರ ಇದರ ಒಟ್ಟು ಮೌಲ್ಯವು 1,23,60,728 ರೂ. ಆಗುತ್ತದೆ.
  6. ಅಂದರೆ ನೀವು ನಿಮ್ಮ 55ನೇ ವಯಸ್ಸಿನಲ್ಲಿ ಮಿಲಿಯನೇರ್ ಆಗುತ್ತೀರಿ.

ಇದನ್ನೂ ಓದಿ: 05-02-2022 Today Gold Price: ಆಭರಣ ಪ್ರಿಯರಿಗೆ ಭರ್ಜರಿ ಸುದ್ದಿ, ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ

ಪ್ಲಾನ್ C

ತಿಂಗಳಿಗೆ 10 ಸಾವಿರ ರೂ. ಬದಲಿಗೆ ಕೇವಲ 7,500 ರೂ. ಠೇವಣಿ(Public Provident Fund) ಇಟ್ಟರೂ 55 ವರ್ಷಕ್ಕೆ ಮಿಲಿಯನೇರ್ ಆಗಬಹುದು. ಆದರೆ ಇದಕ್ಕೆ ನಿಮ್ಮ 20ನೇ ವಯಸ್ಸಿನಲ್ಲಿಯೇ ಹೂಡಿಕೆಯನ್ನು ಆರಂಭಿಸಬೇಕು.

  1. ನೀವು ಶೇ.7.1ರಷ್ಟು ಬಡ್ಡಿಯಲ್ಲಿ 15 ವರ್ಷಗಳವರೆಗೆ PPFನಲ್ಲಿ 7,500 ರೂ.ಗಳನ್ನು ಠೇವಣಿ ಇರಿಸಿದರೆ ಆಗ ಒಟ್ಟು ಮೌಲ್ಯ 24,40,926 ರೂ. ಆಗುತ್ತದೆ.
  2. 5 ವರ್ಷಗಳ ನಂತರ ಅಂದರೆ 20 ವರ್ಷಗಳ ನಂತರ ಈ ಮೊತ್ತವು 39,94,973 ರೂ. ಆಗುತ್ತದೆ.
  3. ಮತ್ತೆ 5 ವರ್ಷ ಹೂಡಿಕೆ ಮುಂದುವರೆಸಿದರೆ 25 ವರ್ಷಗಳ ನಂತರ ಈ ಮೊತ್ತವು 61,84,809 ರೂ. ಆಗುತ್ತದೆ.
  4. ಮತ್ತೆ 5 ವರ್ಷಗಳ ಹೂಡಿಕೆ ಮುಂದುವರೆಸಿದಾಗ 30 ವರ್ಷಗಳ ನಂತರ ಈ ಮೊತ್ತವು 92,70,546 ರೂ.ಗೆ ಹೆಚ್ಚಾಗುತ್ತದೆ.
  5. ಮತ್ತೆ ನೀವು ಇನ್ನೈದು ವರ್ಷ ಹೂಡಿಕೆ ಮುಂದುವರಿಸಿದರೆ 35 ವರ್ಷಗಳ ನಂತರ ಇದರ ಮೊತ್ತವು 1,36,18,714 ರೂ. ಆಗುತ್ತದೆ.
  6. ಅಂದರೆ ನೀವು 55 ವರ್ಷ ವಯಸ್ಸಿನವರಾಗಿದ್ದಾಗ ನಿಮ್ಮ ಬಳಿ 1 ಕೋಟಿ ರೂ.ಗಿಂತಲೂ ಹೆಚ್ಚು ಮೊತ್ತ ಇರುತ್ತದೆ. ಮಿಲಿಯನೇರ್ ಆಗುವ ತಂತ್ರವೆಂದರೆ ಪಿಪಿಎಫ್ ಸಂಯೋಜನೆಯ ಲಾಭವನ್ನು ಪಡೆದುಕೊಳ್ಳುವುದು ಎಂದರ್ಥ. ಸಾಕಷ್ಟು ಸಣ್ಣ ವಯಸ್ಸಿನಲ್ಲಿಯೇ ತಾಳ್ಮೆಯಿಂದ ಹೂಡಿಕೆ(Long Tern Investment) ಮಾಡುವುದನ್ನು ಪ್ರಾರಂಭಿಸಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News