ವಿವಿಧ ಬ್ಯಾಂಕ್ಗಳಿಂದ 2.09 ಲಕ್ಷ ಕೋಟಿ ಸಾಲ ರೈಟ್ ಆಫ್: ಆರ್ಬಿಐ ಮಾಹಿತಿ
ದೊಡ್ಡ ಮೊತ್ತದ ಈ ರೈಟ್ ಆಫ್‌ನಿಂದ ಬ್ಯಾಂಕುಗಳಿಗೆ ತಮ್ಮ ಒಟ್ಟು ಎನ್‌ಪಿಎ(Non-Performing Assets)ಗಳನ್ನು ಅಥವಾ ಸಾಲಗಾರರು ಮರುಪಾವತಿಸಲು ವಿಫಲವಾದ ಸಾಲವನ್ನು 10 ವರ್ಷಗಳಲ್ಲಿಯೇ ಕಡಿಮೆ ಪ್ರಮಾಣಕ್ಕೆ (ಶೇ3.9) ಇಳಿಸಲು ಸಾಧ್ಯವಾಗಿದೆ ಎಂದು ಹೇಳಲಾಗಿದೆ.
ನವದೆಹಲಿ: ಕಳೆದ ಹಣಕಾಸು ವರ್ಷ(2022-23)ದಲ್ಲಿ ದೇಶದ ವಿವಿಧ ಬ್ಯಾಂಕುಗಳು ಬರೋಬ್ಬರಿ 2.09 ಲಕ್ಷ ಕೋಟಿ ರೂ. ಬ್ಯಾಡ್ ಲೋನ್ಅನ್ನು ರೈಟ್ ಆಫ್ ಮಾಡಿವೆ ಎಂದು ವರದಿಯಾಗಿದೆ. ಇದರಿಂದಾಗಿ ಕಳೆದ 5 ವರ್ಷಗಳಲ್ಲಿ ಬ್ಯಾಂಕ್‌ಗಳು ರೈಟ್ ಆಫ್ ಮಾಡಿದ ಸಾಲದ ಪ್ರಮಾಣ 10.57 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು RBIನಲ್ಲಿ ಕೇಳಲಾದ ಪ್ರಶ್ನೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಉತ್ತರ ನೀಡಿದೆ.
ದೊಡ್ಡ ಮೊತ್ತದ ಈ ರೈಟ್ ಆಫ್‌ನಿಂದ ಬ್ಯಾಂಕುಗಳಿಗೆ ತಮ್ಮ ಒಟ್ಟು ಎನ್‌ಪಿಎ(Non-Performing Assets)ಗಳನ್ನು ಅಥವಾ ಸಾಲಗಾರರು ಮರುಪಾವತಿಸಲು ವಿಫಲವಾದ ಸಾಲವನ್ನು 10 ವರ್ಷಗಳಲ್ಲಿಯೇ ಕಡಿಮೆ ಪ್ರಮಾಣಕ್ಕೆ (ಶೇ3.9) ಇಳಿಸಲು ಸಾಧ್ಯವಾಗಿದೆ ಎಂದು ಹೇಳಲಾಗಿದೆ. 2018ರ ಆರ್ಥಿಕ ವರ್ಷದಲ್ಲಿ ಒಟ್ಟು ಎನ್‌ಪಿಎ 10.21 ಲಕ್ಷ ಕೋಟಿ ರೂ. ಇದ್ದರೆ, 2023ರಲ್ಲಿ 5.55 ಲಕ್ಷ ಕೋಟಿ ರೂ. ಆಗಿದೆ. ಬ್ಯಾಂಕುಗಳು ಎನ್‌ಪಿಎ ತಗ್ಗಿಸಲು ರೈಟ್ ಆಫ್ ಮಾರ್ಗ ಬಳಸಿಕೊಂಡಿದ್ದೇ ಇದಕ್ಕೆ ಕಾರಣವೆಂದು ಹೇಳಲಾಗಿದೆ.
ಇದನ್ನೂ ಓದಿ: ಬ್ಯಾಂಕ್ ಗಳಲ್ಲಿನ ಠೇವಣಿಗಿಂದಲೂ ಜಬರ್ದಸ್ತ್ ಆದಾಯ ನೀಡುತ್ತವೆ ಈ ಯೋಜನೆಗಳು!
RBI ನೀಡಿರುವ ಮಾಹಿತಿಯ ಪ್ರಕಾರ, 2012-13ರ ಹಣಕಾಸು ವರ್ಷದಿಂದ ಇಲ್ಲಿವರೆಗೆ ವಿವಿಧ ಬ್ಯಾಂಕುಗಳು ಬರೋಬ್ಬರಿ 15,31,453 ಕೋಟಿ ರೂ. ಬ್ಯಾಡ್ ಲೋನ್ಅನ್ನು ರೈಟ್ ಆಫ್ ಮಾಡಿವೆ. ಕಳೆದ 3 ವರ್ಷಗಳಲ್ಲಿ ರೈಟ್ ಆಫ್ ಮಾಡಿದ ಸಾಲದ ಪ್ರಮಾಣ 5,86,891ಕೋಟಿ ರೂ. ಆಗಿದ್ದರೆ, ಆವುಗಳಲ್ಲಿ ಕೇವಲ 1,09,186 ಕೋಟಿ ರೂ. (ಶೇ.18.60) ಮರುಪಾವತಿಯಾಗಿದೆ ಎಂದು ತಿಳಿದುಬಂದಿದೆ.
ಬ್ಯಾಂಕುಗಳ ರೈಟ್‌ಆಫ್‌ಗಳು ಮಾರ್ಚ್ 2023ರ ಹಣಕಾಸು ವರ್ಷದಲ್ಲಿ 2,09,144 ಕೋಟಿ ರೂ.ಗೆ ಏರಿಕೆಯಾಗಿದೆ. ಇದರ ಪ್ರಮಾಣ ಮಾರ್ಚ್ 2022ರಲ್ಲಿ 1,74,966 ಕೋಟಿ ರೂ. ಮತ್ತು ಮಾರ್ಚ್ 2021ರಲ್ಲಿ 2,02,781 ಕೋಟಿ ರೂ. ಆಗಿತ್ತು.
ಇದನ್ನೂ ಓದಿ: Honda SP 160: ಭಾರತೀಯ ಮಾರುಕಟ್ಟೆಗೆ ಹೋಂಡಾ ಎಸ್‌ಪಿ 160 ಗ್ರ್ಯಾಂಡ್ ಎಂಟ್ರಿ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.