Honda SP 160: ಭಾರತೀಯ ಮಾರುಕಟ್ಟೆಗೆ ಹೋಂಡಾ ಎಸ್‌ಪಿ 160 ಗ್ರ್ಯಾಂಡ್ ಎಂಟ್ರಿ!  

Specifications of Honda SP 160: ನೂತನ ಹೋಂಡಾ ಎಸ್‌ಪಿ 160 ಬೈಕ್ ಅತ್ಯಾಕರ್ಷಕ ಲುಕ್ ಹೊಂದಿರಲಿದೆ. ಜೊತೆಗೆ ಹೊಸ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದ್ದು, ವಿನೂತನ ವೈಶಿಷ್ಟ್ಯಗಳನ್ನು ಪಡೆದಿರಲಿದೆ.

Written by - Puttaraj K Alur | Last Updated : Jul 24, 2023, 07:44 PM IST
  • ಮುಂದಿನ ತಿಂಗಳು ಹೋಂಡಾದ ಹೊಚ್ಚ ಹೊಸ ಎಸ್‌ಪಿ 160 (Honda SP 160) ಬೈಕ್ ಲಾಂಚ್
  • ಕೊಂಚ ಪ್ರೀಮಿಯಂ ಆಗಿರುವ ನೂತನ ಹೋಂಡಾ ಎಸ್‌ಪಿ 160 ಮೋಟಾರ್‌ಸೈಕಲ್
  • ಯುನಿಕಾರ್ನ್ ಬೈಕ್‍ಗಿಂತ ದುಬಾರಿಯಾಗಿರಲಿರುವ ಹೋಂಡಾದ ಹೊಸ ಬೈಕ್ ಬಗ್ಗೆ ತಿಳಿಯಿರಿ
Honda SP 160: ಭಾರತೀಯ ಮಾರುಕಟ್ಟೆಗೆ ಹೋಂಡಾ ಎಸ್‌ಪಿ 160 ಗ್ರ್ಯಾಂಡ್ ಎಂಟ್ರಿ!   title=
ಹೋಂಡಾ SP 160 ಬಿಡುಗಡೆ

ನವದೆಹಲಿ: ಹೀರೋ ಸ್ಪ್ಲೆಂಡರ್ ಭಾರತದಲ್ಲಿನ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಅತಿಹೆಚ್ಚು ಮಾರಾಟವನ್ನು ಹೊಂದಿದೆ. 2ನೇ ಸ್ಥಾನಕ್ಕಾಗಿ ಹೋಂಡಾ ಶೈನ್ ಮತ್ತು ಬಜಾಜ್ ಪಲ್ಸರ್ ನಡುವೆ ಸಮರ ನಡೆಯುತ್ತಿದೆ. ಈಗ ಹೀರೋ ಮತ್ತು ಬಜಾಜ್‍ಗೆ ತೀವ್ರ ಪೈಪೋಟಿ ನೀಡಲು ಹೋಂಡಾ ದ್ವಿಚಕ್ರ ವಾಹನ ಕಂಪನಿಯು ಹೊಸ ಬೈಕ್ ಬಿಡುಗಡೆ ಮಾಡಲು ಸಜ್ಜಾಗಿದೆ..

ಕಂಪನಿಯು ಶೀಘ್ರದಲ್ಲೇ ಹೋಂಡಾ SP160 ಎಂಬ 160 ಸಿಸಿ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ವರದಿಯ ಪ್ರಕಾರ ಇದನ್ನು ಹಬ್ಬದ ಸಮಯದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದು ಯುನಿಕಾರ್ನ್‌ನ ಅದೇ ಎಂಜಿನ್ ಮತ್ತು ಚಾಸಿಸ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇದರ ನೋಟವು ಸಾಕಷ್ಟು ಆಧುನಿಕ ಮತ್ತು ಆಕರ್ಷಕವಾಗಿದೆ ಮತ್ತು ಹೊಸ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಕೇವಲ 55 ಸಾವಿರ ರೂ.ಗಳಿಗೆ ಮನೆಗೆ ಕೊಂಡೊಯ್ಯಿರಿ ಈ ಎಲೆಕ್ಟ್ರಿಕ್ ಸ್ಕೂಟರ್!

ಎಂಜಿನ್ ಮತ್ತು ಶಕ್ತಿ

ನಾವು ಹೊಸ 160 ಸಿಸಿ ಬೈಕ್‍ ಸಿದ್ಧಪಡಿಸುತ್ತಿದ್ದೇವೆಂದು ಹೋಂಡಾ ಕಂಪನಿ ಈ ಹಿಂದೆ ಘೋಷಿಸಿತ್ತು. ಈಗ ಅದಕ್ಕೆ SP160 ಎಂದು ಹೆಸರಿಡಲಾಗಿದೆ. ಇದು ಕಂಪನಿಯ SP125ಗೆ ಹೋಲುವ ಸ್ಟೈಲ್ ಹೊಂದಿರಬಹುದು. ಇದರ ಎಂಜಿನ್ ಅನ್ನು ದೇಶಾದ್ಯಂತ ಜಾರಿಗೆ ಬಂದಿರುವ OBD 2 ಎಮಿಷನ್ ಮಾನದಂಡಗಳಿಗೆ ಅನ್ವಯ ಮೇಲ್ದರ್ಜೆಗೇರಿಸಲಾಗಿದೆ. ಇದರ 160 ಸಿಸಿ ಏರ್ ಕೋಲ್ಡ್ ಎಂಜಿನ್, 13 hp ಪವರ್, 14.58 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 5 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.

SP160 ಯುನಿಕಾರ್ನ್‌ಗಿಂತ ಭಿನ್ನವಾಗಿರುತ್ತದೆ. ಇದು ಸ್ವಲ್ಪ ಚಿಕ್ಕದಾದ 12-ಲೀಟರ್ ಫ್ಯುಯೆಲ್ ಟ್ಯಾಂಕ್ ಹೊಂದಿರಲಿದೆ. ಇದು141 ಕೆಜಿಯಷ್ಟು ಅಂದರೆ 2 ಕೆಜಿ ಹೆಚ್ಚು ತೂಗುತ್ತದೆ. ಮತ್ತೊಂದು ವ್ಯತ್ಯಾಸವೆಂದರೆ SP160 ಯುನಿಕಾರ್ನ್‌ನಲ್ಲಿ 18-ಇಂಚಿನ ಚಕ್ರಗಳಿಗೆ ವಿರುದ್ಧವಾಗಿ 17-ಇಂಚಿನ ಚಕ್ರಗಳೊಂದಿಗೆ ಬರುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಬ್ಯಾಂಕ್ ಗಳಲ್ಲಿನ ಠೇವಣಿಗಿಂದಲೂ ಜಬರ್ದಸ್ತ್ ಆದಾಯ ನೀಡುತ್ತವೆ ಈ ಯೋಜನೆಗಳು!

SP125 276mm ಫ್ರಂಟ್ ಡಿಸ್ಕ್ ಹೊಂದಿರುತ್ತದೆ ಮತ್ತು ಹಿಂಭಾಗವು 220mm ಡಿಸ್ಕ್ ಅಥವಾ 130mm ಡ್ರಮ್ ಬ್ರೇಕ್ ಅನ್ನು ಪಡೆಯಬಹುದು. SP125 ಅನ್ನು 2 ರೂಪಾಂತರಗಳಲ್ಲಿ ನೀಡಲಾಗುವುದು. ಪ್ರಸ್ತುತ ಹೋಂಡಾ ಯೂನಿಕಾರ್ನ್ ಬೆಲೆ 1,09,800 ರೂ. (ಭಾರತದಲ್ಲಿ ಎಕ್ಸ್ ಶೋ ರೂಂ ದರ) ಆಗಲಿದೆ. ಮುಂದಿನ ತಿಂಗಳು SP160 ಬಿಡುಗಡೆಯಾದಾಗ ಇದರ ನಿಖರ ಬೆಲೆ ತಿಳಿಯಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News