ಪ್ರಯಾಣಿಕರಿಗಾಗಿ ಹೊಸ ಸೌಲಭ್ಯವನ್ನು ಪ್ರಾರಂಭಿಸಿದ ರೈಲ್ವೇ: ನೂತನ ಸೇವೆಯ ಫೋಟೋ ಇಲ್ಲಿದೆ
Sleeping Pods In CSMT : ಭಾರತೀಯ ರೈಲ್ವೆಯು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸ್ಲೀಪಿಂಗ್ ಪಾಡ್‌ಗಳ ಸೌಲಭ್ಯವನ್ನು ಪ್ರಾರಂಭಿಸಿದೆ. 17 ನವೆಂಬರ್ 2021 ರಂದು, ಪಶ್ಚಿಮ ರೈಲ್ವೆಯ ಮುಂಬೈ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಪಾಡ್ ಹೋಟೆಲ್ ಅನ್ನು ಪ್ರಾರಂಭಿಸಲಾಯಿತು.
Sleeping Pods In CSMT : ಪ್ರಯಾಣಿಕರಿಗೆ ವಿನೂತನ ಸೌಲಭ್ಯಗಳನ್ನು ಒದಗಿಸುವ ಕುರಿತು ಭಾರತೀಯ ರೈಲ್ವೆ ನಿರಂತರ ಕೆಲಸ ಮಾಡುತ್ತಲೇ ಇದೆ. ಇದೀಗ ದೂರದ ಪ್ರಯಾಣದಿಂದ ದಣಿದ ಪ್ರಯಾಣಿಕರಿಗಾಗಿ ಹೊಸ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ. ಈ ಸೇವೆಯ ಅಡಿಯಲ್ಲಿ ನಿಲ್ದಾಣದಲ್ಲಿ ಇಳಿದ ನಂತರ ಪ್ರಯಾಣಿಕರು ಹೋಟೆಲ್ ಹುಡುಕಲು ಅಲೆದಾಡಬೇಕಾಗಿಲ್ಲ. ಸಾಮಾನ್ಯವಾಗಿ ಒಂದು ನಗರದಿಂದ ಮತ್ತೊಂದು ನಗರಕ್ಕೆ ಪ್ರಯಾಣಿಸುವಾಗ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುವ ಪ್ರಯಾಣಿಕರಿಗಾಗಿ ರೈಲ್ವೆ ಪ್ರಾರಂಭಿಸಿದ ಸೌಲಭ್ಯವು ತುಂಬಾ ವಿಶೇಷವಾಗಿದೆ.
ಸ್ಲೀಪಿಂಗ್ ಪಾಡ್ ಫೆಸಿಲಿಟಿ :
ಭಾರತೀಯ ರೈಲ್ವೆಯು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸ್ಲೀಪಿಂಗ್ ಪಾಡ್‌ಗಳ ಸೌಲಭ್ಯವನ್ನು ಪ್ರಾರಂಭಿಸಿದೆ. 17 ನವೆಂಬರ್ 2021 ರಂದು, ಪಶ್ಚಿಮ ರೈಲ್ವೆಯ ಮುಂಬೈ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಪಾಡ್ ಹೋಟೆಲ್ ಅನ್ನು ಪ್ರಾರಂಭಿಸಲಾಯಿತು. ಈ ಮೂಲಕ ಮುಂಬೈನಲ್ಲಿ ಆರಂಭವಾಗಿರುವ ಎರಡನೇ ಸ್ಲೀಪ್ ಪಾಡ್ ಸೇವಾ ಸೌಲಭ್ಯ ಇದಾಗಿದೆ.
ಇದನ್ನೂ ಓದಿ : GST rates revised: ಕೇಂದ್ರದ ನೂತನ GST ನೀತಿ: ಈ ಎಲ್ಲಾ ವಸ್ತುಗಳು ಇನ್ಮುಂದೆ ದುಬಾರಿ!
ಸಣ್ಣ ಕೊಠಡಿಗಳಂತೆ ಇರುತ್ತವೆ ಈ ಸ್ಲೀಪಿಂಗ್ ಪಾಡ್‌ಗಳು :
ರೈಲ್ವೆ ನೀಡಿದ ಮಾಹಿತಿಯಲ್ಲಿ, ಆರಾಮದಾಯಕ ಮತ್ತು ಕಡಿಮೆ ದರದಲ್ಲಿ ತಂಗುವ ಆಯ್ಕೆಯನ್ನು ಒದಗಿಸಲು ಭಾರತೀಯ ರೈಲ್ವೆ ಈ ಉಪಕ್ರಮವನ್ನು ತೆಗೆದುಕೊಂಡಿದೆ. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಸ್ಲೀಪಿಂಗ್ ಪಾಡ್‌ನ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಸ್ಲೀಪಿಂಗ್ ಪಾಡ್‌ಗಳು ಪ್ರಯಾಣಿಕರಿಗೆ ಉಳಿದುಕೊಳ್ಳಲುಇರುವ ಸಣ್ಣ ಕೊಠಡಿಗಳಾಗಿವೆ. ಇವುಗಳನ್ನು ಕ್ಯಾಪ್ಸುಲ್ ಹೋಟೆಲ್ ಎಂದೂ ಕರೆಯುತ್ತಾರೆ.
[[{"fid":"249266","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]
ಏನೆಲ್ಲಾ ಇರುತ್ತದೆ ಪಾಡ್ ಹೋಟೆಲ್ :
ಸ್ಲೀಪಿಂಗ್ ಪಾಡ್ಗಳ ದರವು ರೈಲ್ವೇ ನಿಲ್ದಾಣದಲ್ಲಿರುವ ಕಾಯುವ ಕೋಣೆಗಿಂತ ಕಡಿಮೆಯಾಗಿದೆ. ಆದರೆ ಇಲ್ಲಿ ಪ್ರಯಾಣಿಕರು ತಮ್ಮ ಅಗತ್ಯಕ್ಕೆ ತಕ್ಕಂತೆ ಸೌಲಭ್ಯಗಳನ್ನು ಪಡೆಯುತ್ತಾರೆ. ಇವುಗಳಲ್ಲಿ ಹವಾನಿಯಂತ್ರಣ ಕೊಠಡಿಯಲ್ಲಿ ತಂಗುವ ಸೌಲಭ್ಯದ ಜೊತೆಗೆ ಮೊಬೈಲ್ ಫೋನ್ ಚಾರ್ಜಿಂಗ್, ಲಾಕರ್ ರೂಂ, ಇಂಟರ್ ಕಾಮ್, ಡಿಲಕ್ಸ್ ಬಾತ್ ರೂಂ ಮತ್ತು ಟಾಯ್ಲೆಟ್ ಇತ್ಯಾದಿ ಹಲವು ಸೌಲಭ್ಯಗಳು ಇರುತ್ತವೆ.
[[{"fid":"249267","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"2":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"2"}}]]
ಇದನ್ನೂ ಓದಿ : Vegetable Price: ತರಕಾರಿಗಳ ಮೇಲೂ ಜಿಎಸ್‌ಟಿ ಕಣ್ಣು! ಹೀಗಿದೆ ನೋಡಿ ಇಂದಿನ ಬೆಲೆ
ಒಟ್ಟು 40 ಸ್ಲೀಪಿಂಗ್ ಪಾಡ್‌ಗಳಲ್ಲಿ, 4 ಫ್ಯಾಮಿಲಿ ಪಾಡ್ :
ರೈಲ್ವೇಯು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮುಂಬೈನ ಮುಖ್ಯ ಮಾರ್ಗದಲ್ಲಿ ಕಾಯುವ ಕೊಠಡಿಯ ಬಳಿ ಹೊಸ ಸ್ಲೀಪಿಂಗ್ ಪಾಡ್ ಹೋಟೆಲ್ ಅನ್ನು ತೆರೆಯಲಾಗಿದೆ. ಅದರ ಹೆಸರು ನಮಃ ಸ್ಲೀಪಿಂಗ್ ಪಾಡ್ಸ್. ಸಿಎಸ್‌ಎಂಟಿಯಲ್ಲಿರುವ ಈ ಸ್ಲೀಪಿಂಗ್ ಪಾಡ್‌ಗಳಲ್ಲಿ ಪ್ರಸ್ತುತ 40 ಸ್ಲೀಪಿಂಗ್ ಪಾಡ್‌ಗಳಿವೆ ಎಂದು ರೈಲ್ವೆ ತಿಳಿಸಿದೆ. ಇವುಗಳಲ್ಲಿ 30 ಸಿಂಗಲ್ ಪಾಡ್‌ಗಳು, 6 ಡಬಲ್ ಪಾಡ್ಸ್ ಮತ್ತು 4 ಫ್ಯಾಮಿಲಿ ಪಾಡ್‌ಗಳಿವೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ