ನವದೆಹಲಿ: ನೀವೂ ಒಂದು ವೇಳೆ ಆಗಾಗ್ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ, ಈ ಸಂತಸದ ಸುದ್ದಿ ಕೇವಲ ನಿಮಗಾಗಿ.  ಹೌದು, ಭಾರತೀಯ ರೈಲ್ವೇ ಪ್ರಯಾಣ ದರವನ್ನು ಶೇಕಡಾ 25 ರಷ್ಟು ಕಡಿತಗೊಳಿಸುವುದಾಗಿ ಪ್ರಕಟಿಸಿದೆ. ಇದು ರೈಲಿನಲ್ಲಿ ಪ್ರಯಾಣಿಸುವವರಿಗೆ ಹೆಚ್ಚಿನ ಜನರಿಗೆ ಭಾರಿ ನೆಮ್ಮದಿಯನ್ನು ನೀಡಲಿದೆ.  ಈ ಕಡಿತವು ಎಲ್ಲಾ ರೈಲುಗಳ ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ದರದ ಮೇಲೆ ಅನ್ವಯಿಸುತ್ತದೆ. ಸುದ್ದಿ ಸಂಸ್ಥೆ ಪಿಟಿಐ ನೀಡಿರುವ ಮಾಹಿತಿಯ ಪ್ರಕಾರ, ರೈಲ್ವೆ ಮಂಡಳಿಯ ಆದೇಶದಲ್ಲಿ, ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ದರವನ್ನು ಕಡಿಮೆ ಮಾಡಲು ಹೇಳಲಾಗಿದೆ.


ರೈಲ್ವೇ ಮಂಡಳಿ (Indian Railways) ನೀಡಿರುವ ಆದೇಶದಲ್ಲಿ, ಕಳೆದ 30 ದಿನಗಳಲ್ಲಿ ಶೇಕಡಾ 50 ಕ್ಕಿಂತ ಕಡಿಮೆ ಸೀಟುಗಳು ಭರ್ತಿಯಾಗುತ್ತಿರುವ ಕಾರಣ ರೈಲ್ವೆಯ ಆ ವಲಯಗಳಿಂದ ರೈಲುಗಳಲ್ಲಿ ರಿಯಾಯಿತಿ ದರದ ಯೋಜನೆಯನ್ನು ಪ್ರಾರಂಭಿಸಲು ಕೋರಲಾಗಿದೆ ಎನ್ನಲಾಗಿದೆ. ಕೆಲವು ಮಾರ್ಗಗಳ ವಂದೇ ಭಾರತ್ ರೈಲುಗಳಲ್ಲಿ ಸೀಟುಗಳು ಖಾಲಿ ಉಳಿದಿವೆ ಎಂಬ ವರದಿಗಳು ಕಳೆದ ದಿನಗಳಲ್ಲಿ ಮುನ್ನೆಲೆಗೆ ಬಂದಿವೆ. ತುಲನಾತ್ಮಕವಾಗಿ ಕಡಿಮೆ ವಂದೇ ಭಾರತ್ ರೈಲುಗಳಲ್ಲಿ ಸೀಟುಗಳು ಸಂಪೂರ್ಣವಾಗಿ ಭರ್ತಿಯಾಗುತ್ತಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.


COMMERCIAL BREAK
SCROLL TO CONTINUE READING

 


ಇದನ್ನೂ ಓದಿ-Business Idea: ಕೆಂಪು ಚಿನ್ನದ ವ್ಯವಸಾಯ ಆರಂಭಿಸಿ, ಈ ರೀತಿ ಕೋಟ್ಯಾಧೀಶರಾಗಿ!

ಪ್ರಯಾಣ ದರಗಳನ್ನು ಆಕರ್ಷಕವಾಗಿಸಲು ಯೋಜನೆ
ಇದಾದ ಬಳಿಕ ರೈಲ್ವೇ ಮಂಡಳಿ  ಪ್ರಯಾಣ ದರವನ್ನು ಪರಾಮರ್ಶಿಸಿ ಆಕರ್ಷಕವಾಗಿಸಲು ಮುಂದಾಗಿದೆ ಎಂಬ ಚರ್ಚೆ ನಡೆದಿದೆ. ಈ ಅನುಕ್ರಮದಲ್ಲಿ, ಎಲ್ಲಾ ರೈಲುಗಳ ಎಸಿ ಚೇರ್ ಕಾರ್ ಮತ್ತು ಎಕ್ಸಿಕ್ಯೂಟಿವ್ ವರ್ಗದ ದರವನ್ನು ಶೇಕಡಾ 25 ರಷ್ಟು ಕಡಿಮೆ ಮಾಡಲು ರೈಲ್ವೆ ಘೋಷಿಸಿದೆ. ಇಂದೋರ್-ಭೋಪಾಲ್, ಭೋಪಾಲ್-ಜಬಲ್‌ಪುರ್ ಮತ್ತು ನಾಗ್ಪುರ-ಬಿಲಾಸ್‌ಪುರದಂತಹ ವಂದೇ ಭಾರತ್ ರೈಲುಗಳ ದರವನ್ನು ಪರಿಶೀಲಿಸಲಾಗುತ್ತಿದೆ ಎಂಬ ಮಾಹಿತಿಯು ಇತ್ತೀಚೆಗೆ ಬಹಿರಂಗವಾಗಿದೆ. ಈ ರೈಲುಗಳಲ್ಲಿನ ಸೀಟುಗಳು ಹೆಚ್ಚಿನ ಪ್ರಮಾಣದಲ್ಲಿ ಖಾಲಿಯಾಗಿ ಓಡುತ್ತಿವೆ.


ಇದನ್ನೂ ಓದಿ-Investment In Gold: ಚಿನ್ನ ಖರೀದಿಸಬೇಕೆ ಅಥವಾ ಚಿನ್ನ ಮಾರಾಟ ಮಾಡುವ ಕಂಪನಿಯ ಷೇರು ಖರೀದಿಸಬೇಕೆ? ಯಾವುದರಲ್ಲಿ ಹೆಚ್ಚು ಲಾಭ?


21 ರಷ್ಟು ಸೀಟುಗಳನ್ನು ಮಾತ್ರ ಭರ್ತಿಯಾಗಿವೆ
ಜೂನ್ ವರೆಗೆ ಪಿಟಿಐ ನೀಡಿದ ಅಧಿಕೃತ ಅಂಕಿ ಅಂಶಗಳ ಪ್ರಕಾರ, ಭೋಪಾಲ್-ಇಂದೋರ್ ವಂದೇ ಭಾರತ್ ರೈಲಿನಲ್ಲಿ ಕೇವಲ ಶೇ.29 ಸೀಟುಗಳನ್ನು ಮಾತ್ರ ಭರ್ತಿ ಮಾಡಲಾಗಿದೆ. ಇಂದೋರ್-ಭೋಪಾಲ್ ರೈಲಿನಲ್ಲಿ ಶೇ. 21 ರಷ್ಟು ಸೀಟುಗಳನ್ನು ಕಾಯ್ದಿರಿಸಲಾಗಿತ್ತು. ಮೂರು ಗಂಟೆಗಳ ಕಾಲ ಸಂಚರಿಸುವ ಈ ರೈಲಿನಲ್ಲಿ ಎಸಿ ಚೇರ್ ಕಾರ್ ಗೆ 950 ರೂ. ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್ ಗೆ 1,525 ರೂ. ಪ್ರಯಾಣ ದರವಿದೆ ಎಂಬುದು ಇಲ್ಲಿ ಉಲ್ಲೇಖನೀಯ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.