Business Idea: ಕೆಂಪು ಚಿನ್ನದ ವ್ಯವಸಾಯ ಆರಂಭಿಸಿ, ಈ ರೀತಿ ಕೋಟ್ಯಾಧೀಶರಾಗಿ!

Business Idea: ಇದರ ಒಂದು ತರು ಅಥವಾ ಸಸಿ ಸುಮಾರು 100-150 ರೂಪಾಯಿಗಳ ನಡುವೆ ಸಿಗುತ್ತದೆ. ರೈತ ಬಾಂಧವರು ಬಯಸಿದರೆ, ಒಂದು ಹೆಕ್ಟೇರ್ ಭೂಮಿಯಲ್ಲಿ 600 ಗಿಡಗಳನ್ನು ನೆಡಬಹುದು. ಈ ಗಿಡಗಳು ಮರಗಳಾಗುತ್ತವೆ ಮತ್ತು ಮುಂದಿನ ಕೆಲವು ವರ್ಷಗಳಲ್ಲಿ 30 ಕೋಟಿ ರೂಪಾಯಿಗಳವರೆಗೆ ಲಾಭವನ್ನು ನೀಡುತ್ತವೆ.  

Written by - Nitin Tabib | Last Updated : Jul 7, 2023, 11:23 PM IST
  • ರಕ್ತಚಂದನ ಕೃಷಿಯ ಉತ್ತಮ ಸಂಗತಿ ಎಂದರೆ ಸರ್ಕಾರವೂ ಇದಕ್ಕೆ ಸಹಾಯ ಮಾಡುತ್ತದೆ.
  • ವಾಸ್ತವದಲ್ಲಿ, ಕೆಲವು ವರ್ಷಗಳ ಹಿಂದೆ ಭಾರತದಲ್ಲಿ ರಕ್ತಚಂದನ ಮರವನ್ನು ಬೆಳೆಸುವುದನ್ನು ನಿಷೇಧಿಸಲಾಗಿದೆ,
  • ಅಂದರೆ, ಸರ್ಕಾರದಿಂದ ಅನುಮತಿ ಪಡೆದ ನಂತರವೇ ರೈತರು ರಕ್ತಚಂದನವನ್ನು ಬೆಳೆಸುತ್ತಿದ್ದರು.
  • ಆದರೆ ಇದೀಗ ಅದರ ಅನುಮತಿ ಪಡೆದು ಅದರ ಸಾಗುವಳಿಗೆ ಸರಕಾರ 28-30 ಸಾವಿರ ರೂ.ಅನುದಾನ ನೀಡುತ್ತಿದೆ.
Business Idea: ಕೆಂಪು ಚಿನ್ನದ ವ್ಯವಸಾಯ ಆರಂಭಿಸಿ, ಈ ರೀತಿ ಕೋಟ್ಯಾಧೀಶರಾಗಿ! title=

Business Idea: ರೈತ ತನ್ನ ಇಡೀ ಜೀವನವನ್ನು ಹೊಲಗಳಲ್ಲಿ ಕಳೆಯುತ್ತಾನೆ, ಅದರ ನಂತರವೂ ಅವನಿಗೆ ಕೈತುಂಬಾ ಸಂಪಾದಿಸಲು ಸಾಧ್ಯವಾಗುವುದಿಲ್ಲ. ಇದೆ ಕಾರಣದಿಂದ ಪ್ರಸ್ತುತ ಯುಗದಲ್ಲಿ ಬಹುತೇಕ ರೈತರು ಸಾಂಪ್ರದಾಯಿಕ ಕೃಷಿಯಿಂದ ದೂರ ಸರಿದು ಬೇರೆಯದನ್ನು ಮಾಡುತ್ತಿದ್ದಾರೆ. ನೀವು ಸಹ ಅಂತಹ ರೈತರಾಗಿದ್ದರೆ ಮತ್ತು ಅಲ್ಪಾವಧಿಯಲ್ಲಿ ಕೋಟ್ಯಾಂತರ ಲಾಭವನ್ನು ಗಳಿಸಲು ಬಯಸಿದರೆ, ನಾವು ನಿಮಗಾಗಿ ಅದ್ಭುತವಾದ ಬೆಳೆಯನ್ನು ತಂದಿದ್ದೇವೆ. ಈ ಬೆಳೆಯನ್ನು ಬೆಳೆಸುವ ಮೂಲಕ, ನೀವು ಕೆಲವೇ ವರ್ಷಗಳಲ್ಲಿ ಕೋಟ್ಯಾಧೀಶರಾಗಬಹುದು. ಮಹತ್ವದ ವಿಷಯವೆಂದರೆ ಇದರ ಬೇಡಿಕೆ ಪ್ರಪಂಚದಾದ್ಯಂತ ಇದೆ ಮತ್ತು ಜನರು ಇದನ್ನು ಕೆಂಪು ಚಿನ್ನದ ಹೆಸರಿನಿಂದ ಕೂಡ ಗುರುತಿಸುತ್ತಾರೆ.

ಈ ಕೆಂಪು ಚಿನ್ನ ಯಾವುದು?
ನಾವು ಕೆಂಪು ಚಿನ್ನ ಎಂದು ಕರೆಯುವ ಇದನ್ನು ಸಾಮಾನ್ಯ ಭಾಷೆಯಲ್ಲಿ ಜನರು ರಕ್ತಚಂದನ ಅಥವಾ ರೆಡ್ ಸ್ಯಾಂಡಲ್ ವುಡ್ ಎಂದು ಕರೆಯುತ್ತಾರೆ. ಮಾರುಕಟ್ಟೆಯಲ್ಲಿ ಲಕ್ಷಾಂತರ ರೂ. ಬೆಲೆ ಬಾಳುತ್ತದೆ. ಇದರ ಒಂದು ಮರವು ಹಲವು ಲಕ್ಷ ರೂಪಾಯಿಗಳಿಗೆ ಮಾರಾಟವಾಗುತ್ತದೆ. ಹೀಗಿರುವಾಗ ನೀವು ನೂರಾರು ಗಿಡಗಳನ್ನು ನೆಟ್ಟರೆ ಮುಂದಿನ ದಿನಗಳಲ್ಲಿ ಈ ಮರಗಳು ಕೋಟ್ಯಂತರ ರೂ. ಆದಾಯ ನೀಡುತ್ತವೆ.  ಆದರೆ, ಅದರ ಕೃಷಿ ಅಷ್ಟು ಸುಲಭವಲ್ಲ. ಇದಕ್ಕೆ ಸಾಕಷ್ಟು ಶ್ರಮ ಬೇಕಾಗುತ್ತದೆ. ಆದರೆ, ರೈತ ಕಷ್ಟಪಟ್ಟು ದುಡಿದಷ್ಟೂ ಇದರಲ್ಲಿ ಲಾಭ ಸಿಗುತ್ತದೆ.

ಇದನ್ನೂ ಓದಿ-Good News: ಡೆಬಿಟ್-ಕ್ರೆಡಿಟ್ ಕಾರ್ಡ್ ಪಡೆಯಬಯಸುವವರಿಗೆ ಒಂದು ಗುಡ್ ನ್ಯೂಸ್, ಆರ್ಬಿಐ ಕರಡು ಸುತ್ತೋಲೆ ಜಾರಿ

ರಕ್ತಚಂದನ ಕೃಷಿಯಲ್ಲಿ ಬೇಕಾಗುವ ಹಣವೆಷ್ಟು?
ರಕ್ತಚಂದನ ಕೃಷಿ ಬಗ್ಗೆ ಹೇಳುವುದಾದರೆ, ಒಂದು ಸಸಿ ರೂ.100-150ರ ನಡುವೆ ಲಭ್ಯವಿದೆ. ರೈತ ಬಾಂಧವರು ಬಯಸಿದರೆ, ಒಂದು ಹೆಕ್ಟೇರ್ ಭೂಮಿಯಲ್ಲಿ 600 ಗಿಡಗಳನ್ನು ನೆಡಬಹುದು. ಈ ಗಿಡಗಳು ಮುಂದಿನ 12 ವರ್ಷಗಳಲ್ಲಿ ಮರಗಳಾಗಿ ಎದ್ದು ನಿಲ್ಲುತ್ತವೆ ಮತ್ತು ಅವುಗಳು ನಿಮಗೆ 30 ಕೋಟಿ ರೂ.ವರೆಗೆ ಲಾಭ ನೀಡಬಹುದು. ಒಂದು ಶ್ರೀಗಂಧದ ಮರದಿಂದ 6 ಲಕ್ಷ ರೂ.ವರೆಗೆ ಆದಾಯ ಬರುತ್ತದೆ. ಅದಕ್ಕಾಗಿಯೇ ಭಾರತದ ಅನೇಕ ರೈತರು ಇದೀಗ ಅದರ ಕೃಷಿಯತ್ತ ಒಲವು ತೋರುತ್ತಿದ್ದಾರೆ.

ಇದನ್ನೂ ಓದಿ-Investment In Gold: ಚಿನ್ನ ಖರೀದಿಸಬೇಕೆ ಅಥವಾ ಚಿನ್ನ ಮಾರಾಟ ಮಾಡುವ ಕಂಪನಿಯ ಷೇರು ಖರೀದಿಸಬೇಕೆ? ಯಾವುದರಲ್ಲಿ ಹೆಚ್ಚು ಲಾಭ?

ಸರ್ಕಾರವೂ ಸಹಾಯ ಮಾಡುತ್ತದೆ
ರಕ್ತಚಂದನ ಕೃಷಿಯ ಉತ್ತಮ ಸಂಗತಿ ಎಂದರೆ ಸರ್ಕಾರವೂ ಇದಕ್ಕೆ ಸಹಾಯ ಮಾಡುತ್ತದೆ. ವಾಸ್ತವದಲ್ಲಿ, ಕೆಲವು ವರ್ಷಗಳ ಹಿಂದೆ ಭಾರತದಲ್ಲಿ ರಕ್ತಚಂದನ ಮರವನ್ನು ಬೆಳೆಸುವುದನ್ನು ನಿಷೇಧಿಸಲಾಗಿದೆ, ಅಂದರೆ, ಸರ್ಕಾರದಿಂದ ಅನುಮತಿ ಪಡೆದ ನಂತರವೇ ರೈತರು ರಕ್ತಚಂದನವನ್ನು ಬೆಳೆಸುತ್ತಿದ್ದರು. ಆದರೆ ಇದೀಗ ಅದರ ಅನುಮತಿ ಪಡೆದು ಅದರ ಸಾಗುವಳಿಗೆ ಸರಕಾರ 28-30 ಸಾವಿರ ರೂ.ಅನುದಾನ ನೀಡುತ್ತಿದೆ. ಆದರೂ ಸರ್ಕಾರ ರಕ್ತಚಂದನದ ಖರೀದಿಯ ಮೇಲೆ  ನಿಷೇಧ ಹೇರಿದೆ. ಅಂದರೆ ಸರ್ಕಾರ ಮಾತ್ರ ರೈತರಿಂದ ರಕ್ತಚಂದನವನ್ನು ಖರೀದಿಸಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News