IRCTC ticket booking: ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ಸೋಷಿಯಲ್‌ ಮೀಡಿಯಾದಲ್ಲಿ ಹರಡುತ್ತಿರುವ ತಪ್ಪು ಮಾಹಿತಿಯ ಬಗ್ಗೆ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ IRCTC, ಪ್ರಯಾಣಿಕರು ವಿವಿಧ surname ಹೊಂದಿರುವ ಕಾರಣ ಇ-ಟಿಕೆಟ್‌ಗಳನ್ನು ಬುಕ್ ಮಾಡುವುದರ ಮೇಲಿನ ನಿರ್ಬಂಧಗಳ ಬಗ್ಗೆ‌ ಹರಡುತ್ತಿರುವ ವದಂತಿಗಳು "ಸುಳ್ಳು ಮತ್ತು ಮಿಸ್‌ ಲೀಡಿಂಗ್" ಆಗಿವೆ ಎಂದು ಹೇಳಿದೆ.


COMMERCIAL BREAK
SCROLL TO CONTINUE READING

IRCTCಯ ವೈಯಕ್ತಿಕ ಐಡಿ ಮೂಲಕ ಹೆಚ್ಚಿನ ಟಿಕೆಟ್‌ ಅಥವಾ ಅಪರಿಚಿತರಿಗೆ ಟಿಕಟ್‌ ಬುಕ್‌ ಮಾಡಿದ್ರೆ ಭಾರೀ ದಂಡದ ಜೊತೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂಬ ಫೇಕ್‌ ಸುದ್ದಿಯ ಬಗ್ಗೆ  IRCTC ಈ ಸ್ಪಷ್ಟನೆ ನೀಡಿದೆ.  "ವಿವಿಧ Surnameಗಳಿಂದ ಇ-ಟಿಕೆಟ್‌ಗಳ ಬುಕ್ಕಿಂಗ್‌ನಲ್ಲಿ ನಿರ್ಬಂಧದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಶೇರ್‌ ಆಗುತ್ತಿರುವ ಸುದ್ದಿ ಸುಳ್ಳು ಮತ್ತು ತಪ್ಪುದಾರಿಗೆಳೆಯುವಂತಿದೆ" ಎಂದು IRCTC ತನ್ನ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದೆ. ಹೀಗಾಗಿ ವಿವಿಧ Surname ಹೊಂದಿರುವ ಜನರಿಗೆ ನೀವು ರೈಲು ಟಿಕೆಟ್‌ಗಳನ್ನು ಬುಕ್‌ ಮಾಡಬಹುದು? ಈ ಪ್ರಶ್ನೆಗೆ ಉತ್ತರ ಹೌದು, ನೀವು ಅವರಿಗೂ ಟಿಕೆಟ್‌ಗಳನ್ನು ಬುಕ್‌ ಮಾಡಬಹುದಾಗಿದೆ. 


ಇದನ್ನೂ ಓದಿ: IRCTC ಹೊಸ ನಿಯಮ: ನಿಮ್ಮ IDಯಲ್ಲಿ ಅಪರಿಚಿತರಿಗೆ ರೈಲು ಟಿಕೆಟ್‌ ಬುಕ್ ಮಾಡಿದ್ರೆ ಜೈಲು ಫಿಕ್ಸ್!‌


ಭಗವದ್ಗೀತೆ ಉಲ್ಲೇಖಿಸಿ ಸಂಖ್ಯೆ 18 ರ ಮಹತ್ವ ವಿವರಿಸಿದ ಪ್ರಧಾನಿ ಮೋದಿ


ರೈಲ್ವೆ ಇಲಾಖೆಯ ನೀತಿಗಳಲ್ಲಿನ ಬದಲಾವಣೆಗಳ ಬಗ್ಗೆ ಸುಳ್ಳು ಮಾಹಿತಿಯ ಹರಡುವಿಕೆಯಿಂದ ಪ್ರಯಾಣಿಕರಿಗೆ ಗೊಂದಲವನ್ನುಂಟುಮಾಡಿದೆ. ಉದಾಹರಣೆಗೆ, ಜುಲೈ 1, 2017ರಿಂದ ಪ್ರಾರಂಭವಾಗುವ ಹೊಸ ಬದಲಾವಣೆಗಳ ಬಗೆಗಿನ ವದಂತಿಗಳು ಸಂಪೂರ್ಣವಾಗಿ ಸುಳ್ಳು ಎಂದು ರೈಲ್ವೆ ಸಚಿವಾಲಯವು ಸ್ಪಷ್ಟಪಡಿಸಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.