ನವದೆಹಲಿ : Indian Railways: ಕೆಲವೊಮ್ಮೆ ರೈಲ್ವೆ ಪ್ರಯಾಣಿಕರು ಅನಿವಾರ್ಯ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಬುಕ್ ಮಾಡಿರುವ ನಿಲ್ದಾಣ ಬಿಟ್ಟು ಬೇರೆ ನಿಲ್ದಾಣದಲ್ಲಿ ರೈಲು ಹತ್ತುವ ಪ್ರಮೇಯ ಎದುರಾಗಬಹುದು. ಆದರೆ, ಬೋರ್ಡಿಂಗ್ ನಿಲ್ದಾಣವನ್ನು (Boarding Station) ಬದಲಾಯಿಸಲು ಕೂಡಾ ರೈಲ್ವೆಯಲ್ಲಿ ಕೆಲವೊಂದು ನಿಯಮಗಳಿವೆ. ಇಲ್ಲವಾದರೆ ಅದಕ್ಕೂ ದಂಡ ತೆರಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

ಬೋರ್ಡಿಂಗ್ ಸ್ಟೇಷನ್ ಅನ್ನು ಬದಲಾಯಿಸಬಹುದು : 
ಕೆಲವೊಮ್ಮೆ ಇದ್ದಕ್ಕಿದ್ದಂತೆ,  ಬೋರ್ಡಿಂಗ್ ನಿಲ್ದಾಣವನ್ನು (Boarding Station) ಬದಲಾಯಿಸುವ ಅವಶ್ಯಕತೆ ಎದುರಾಗುತ್ತದೆ. ಬೋರ್ಡಿಂಗ್ ನಿಲ್ದಾಣವು ದೂರವಿದ್ದು, ಸಮಯಕ್ಕೆ ಸರಿಯಾಗಿ ತಲುಪುವುದು ಸಾಧ್ಯವಾಗದೇ ಹೋದಾಗ ಹತ್ತಿರದ ಯಾವುದೇ ನಿಲ್ದಾಣವನ್ನು ಬೋರ್ಡಿಂಗ್ ಸ್ಟೇಷನ್ ಆಗಿ ಬದಲಾಯಿಸಿಕೊಳ್ಳಬಹುದು.  ಪ್ರಯಾಣಿಕರ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಬೋರ್ಡಿಂಗ್ ನಿಲ್ದಾಣವನ್ನು ಬದಲಾಯಿಸುವ ಸೌಲಭ್ಯವನ್ನು ಐಆರ್‌ಸಿಟಿಸಿ (IRCTC) ನೀಡುತ್ತಿದೆ. ಐಆರ್‌ಸಿಟಿಸಿಯ ಈ ಸೌಲಭ್ಯದ ಲಾಭವನ್ನು ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್ (Online ticket booking) ಮಾಡಿದ ಪ್ರಯಾಣಿಕರು ಪಡೆದುಕೊಳ್ಳಬಹುದು. ಆದರೆ,  ಟ್ರಾವೆಲ್ ಏಜೆಂಟ್‌ಗಳ ಮೂಲಕ ಅಥವಾ ರಿಸರ್ವೇಶನ್ ಸಿಸ್ಟಮ್ ಮೂಲಕ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರು ಈ ಸೌಲಭ್ಯವನ್ನು ಪಡೆಯಲು ಸಾಧ್ಯವಿಲ್ಲ. 


ಇದನ್ನೂ ಓದಿ :  UIDAI: Aadhaar Card ನಿಯಮ ಬದಲಾವಣೆ, ನಿಮ್ಮ ಮೇಲೆ ನೇರ ಪರಿಣಾಮ


ರೈಲು ಹೊರಡುವ  24 ಗಂಟೆಗಳ ಒಳಗೆ ಬದಲಾವಣೆಗಳನ್ನು ಮಾಡಬೇಕಾಗುತ್ತದೆ : 
ತಮ್ಮ ಬೋರ್ಡಿಂಗ್ ನಿಲ್ದಾಣವನ್ನು ಬದಲಾಯಿಸಲು ಬಯಸುವ ಪ್ರಯಾಣಿಕರು (Passengers) ರೈಲು ಹೊರಡುವ 24 ಗಂಟೆಗಳ ಮೊದಲು, ಆನ್‌ಲೈನ್‌ನಲ್ಲಿ ಈ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಆದರೆ, ನೆನಪಿರಲಿ, ಒಮ್ಮೆ  ಬೋರ್ಡಿಂಗ್ ನಿಲ್ದಾಣವನ್ನು ಬದಲಾಯಿಸಿದರೆ, ಮತ್ತೆ ಮೊದಲ ಬೊರ್ಡಿಂಗ್ ಪಾಯಿಂಟ್ ನಲ್ಲಿ ರೈಲು ಹಿಡಿಯಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಹೀಗೆ ಮಾಡಿದರೆ, ದಂಡ ಪಾವತಿಸಬೇಕಾಗುತ್ತದೆ.  ಬೋರ್ಡಿಂಗ್ ಪಾಯಿಂಟ್ ಮತ್ತು ಪರಿಷ್ಕೃತ ಬೋರ್ಡಿಂಗ್ ಪಾಯಿಂಟ್ ನಡುವಿನ ಶುಲ್ಕವನ್ನು ನೀಡಬೇಕಾಗುತ್ತದೆ. ಐಆರ್ ಸಿಟಿಸಿ ನಿಯಮಗಳ ಪ್ರಕಾರ ಬೋರ್ಡಿಂಗ್ ನಿಲ್ದಾಣವನ್ನು ಒಮ್ಮೆ ಮಾತ್ರ ಬದಲಾಯಿಸಬಹುದು. 


ಆನ್‌ಲೈನ್ ಟಿಕೆಟ್‌ನಲ್ಲಿ ಬೋರ್ಡಿಂಗ್ ಸ್ಟೇಷನ್ ಅನ್ನು ನೀವು ಹೇಗೆ ಬದಲಾಯಿಸಬಹುದು : 
ಬೋರ್ಡಿಂಗ್ ನಿಲ್ದಾಣವನ್ನು ಬದಲಾಯಿಸಲು ಇಲ್ಲಿದೆ ಸುಲಭ ಮಾರ್ಗ : 
1. ಮೊದಲು ನೀವು ಐಆರ್‌ಸಿಟಿಸಿಯ ಅಧಿಕೃತ ವೆಬ್‌ಸೈಟ್‌ https://www.irctc.co.in/nget/train-searchಗೆ ಭೇಟಿ ನೀಡಿ. 
2. ಲಾಗಿನ್ ಮತ್ತು ಪಾಸ್ವರ್ಡ್ ಅನ್ನು ನಮೂದಿಸಿ ಮತ್ತು ನಂತರ ‘Booking Ticket History’ಹೋಗಿ
3. ನಿಮ್ಮ ರೈಲನ್ನು ಆಯ್ಕೆಮಾಡಿ ಮತ್ತು  'change boarding point'  ಗೆ ಹೋಗಿ.
4. ಹೊಸ ಪುಟ ತೆರೆಯುತ್ತದೆ, ಡ್ರಾಪ್‌ಡೌನ್‌ನಲ್ಲಿ ಆ ರೈಲುಗಾಗಿ ಹೊಸ ಬೋರ್ಡಿಂಗ್ ನಿಲ್ದಾಣವನ್ನು ಆಯ್ಕೆ ಮಾಡಿ
5. ಹೊಸ ನಿಲ್ದಾಣವನ್ನು ಆಯ್ಕೆ ಮಾಡಿದ ನಂತರ, ಸಿಸ್ಟಮ್ ಕಂಫರ್ಮೆಶನ್  ಕೇಳುತ್ತದೆ. ಇಲ್ಲಿ OK ಮೇಲೆ ಕ್ಲಿಕ್ ಮಾಡಿ
6. ಬೋರ್ಡಿಂಗ್ ನಿಲ್ದಾಣವನ್ನು ಬದಲಾಯಿಸಿರುವ ಬಗ್ಗೆ ನಿಮ್ಮ ಮೊಬೈಲ್ ಗೆ  SMS ಬರುತ್ತದೆ.


ಇದನ್ನೂ ಓದಿ : India Growth Projection By IMF: ಕೋರೋನಾ ಎರಡನೇ ಅಲೆಯಿಂದ ಭಾರತದ ಆರ್ಥಿಕತೆಗೆ ಭಾರಿ ಪೆಟ್ಟು! ಟೆನ್ಶನ್ ಹೆಚ್ಚಿಸಿದ IMF ವರದಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.