ನವದೆಹಲಿ: Aadhar Card New Rule- ಆಧಾರ್ ಕಾರ್ಡ್ಗೆ ಸಂಬಂಧಿಸಿದ ದೊಡ್ಡ ಸುದ್ದಿ ಇದೆ. ವಾಸ್ತವವಾಗಿ, ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI) ಈಗ ಮಕ್ಕಳ ಆಧಾರ್ ಪಡೆಯುವ ಪ್ರಕ್ರಿಯೆಯನ್ನು ಬದಲಾಯಿಸಿದೆ. ಮಗುವಿನ ಜನನ ಪ್ರಮಾಣಪತ್ರ ಅಥವಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಸ್ಲಿಪ್ ಮತ್ತು ಪೋಷಕರಲ್ಲಿ ಒಬ್ಬರ ಆಧಾರ ಕಾರ್ಡ್ ಆಧಾರದ ಮೇಲೆ ಮಗುವಿನ ಬಾಲ್ ಆಧಾರ್ ಕಾರ್ಡ್ ಹೊಸ ನಿಯಮಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಯುಐಡಿಎಐ ತಿಳಿಸಿದೆ.
ಆಧಾರ್ ಕಾರ್ಡ್ ನಿಯಮಗಳನ್ನು ಬದಲಾಯಿಸಲಾಗಿದೆ:
ಬಾಲ್ ಆಧಾರ್ ಆಧಾರ್ ಕಾರ್ಡ್ನ (Baal Aadhaar Card) ನೀಲಿ ಬಣ್ಣದ ರೂಪಾಂತರವಾಗಿದ್ದು, ಇದನ್ನು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡಲಾಗುತ್ತದೆ. ಆದರೆ ಈಗ ಹೊಸ ನಿಯಮದ ಪ್ರಕಾರ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವುದೇ ಬಯೋಮೆಟ್ರಿಕ್ ವಿವರಗಳು ಅಗತ್ಯವಿಲ್ಲ. ಬಯೋಮೆಟ್ರಿಕ್ (ಫಿಂಗರ್ಪ್ರಿಂಟ್ ಮತ್ತು ಐ ಸ್ಕ್ಯಾನ್) ಅಗತ್ಯವನ್ನು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ತೆಗೆದುಹಾಕಲಾಗಿದೆ. ಅದೇ ಸಮಯದಲ್ಲಿ, ಮಗುವಿಗೆ ಐದು ವರ್ಷ ತುಂಬಿದ ಬಳಿಕ ಬಯೋಮೆಟ್ರಿಕ್ ನವೀಕರಣ ಕಡ್ಡಾಯವಾಗಿ ಅಗತ್ಯವಾಗಿರುತ್ತದೆ.
ಇದನ್ನೂ ಓದಿ- UIDAI Aadhaar Alert: ನಿಮ್ಮ ಆಧಾರ್ ಸಂಖ್ಯೆಯಿಂದ ಬ್ಯಾಂಕ್ ಖಾತೆ ಹ್ಯಾಕ್ ಆಗುವ ಅಪಾಯವಿದೆಯೇ? ಯುಐಡಿಎಐ ಹೇಳಿದ್ದೇನು?
ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಲು ಅಗತ್ಯವಾದ ದಾಖಲೆಗಳು:
ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಲು ಅಗತ್ಯವಿರುವ ದಾಖಲೆಗಳಲ್ಲಿ ಪಾಸ್ಪೋರ್ಟ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ, ಎನ್ಆರ್ಇಜಿಎ ಜಾಬ್ ಕಾರ್ಡ್ ಇತ್ಯಾದಿಗಳು ಸೇರಿವೆ. ವಿಳಾಸದ ಪುರಾವೆಯಾಗಿ ಪಾಸ್ಪೋರ್ಟ್, ಬ್ಯಾಂಕ್ ಸ್ಟೇಟ್ಮೆಂಟ್ / ಪಾಸ್ಬುಕ್, ಪೋಸ್ಟ್ ಆಫೀಸ್ ಖಾತೆ ಹೇಳಿಕೆ, ಪಡಿತರ ಚೀಟಿ ಅನ್ನು ಬಳಸಬಹುದಾಗಿದೆ.
ನಿಮ್ಮ ಮಕ್ಕಳಿಗಾಗಿ ಬಾಲ್ ಆಧಾರ್ ತಯಾರಿಸಲು ಈ ಹಂತಗಳನ್ನು ಅನುಸರಿಸಿ:-
1. ಮಗುವಿನ ಆಧಾರ್ ತಯಾರಿಸಲು, ಮೊದಲು ಯುಐಡಿಎಐನ ವೆಬ್ಸೈಟ್ಗೆ ಹೋಗಿ.
2. ನಂತರ ಇಲ್ಲಿ ಆಧಾರ್ ಕಾರ್ಡ್ (Aadhaar Card) ನೋಂದಣಿಯ ಆಯ್ಕೆಯನ್ನು ಆರಿಸಿ.
3. ಬಳಿಕ ಮಗುವಿನ ಹೆಸರು ಮತ್ತು ಇತರ ಬಯೋಮೆಟ್ರಿಕ್ ಮಾಹಿತಿಯಂತಹ ಅಗತ್ಯ ವಿವರಗಳನ್ನು ಭರ್ತಿ ಮಾಡಿ.
4. ಈಗ ವಸತಿ ವಿಳಾಸ, ಸ್ಥಳ, ರಾಜ್ಯ ಮುಂತಾದ ಜನಸಂಖ್ಯಾ ವಿವರಗಳನ್ನು ನಮೂದಿಸಿ ಮತ್ತು ಸಲ್ಲಿಸಿ.
5. ಆಧಾರ್ ಕಾರ್ಡ್ಗೆ ನೋಂದಣಿ ನಿಗದಿಪಡಿಸಲು 'ಅಪಾಯಿಂಟ್ಮೆಂಟ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
6. ಹತ್ತಿರದ ಅಧಾರ್ ದಾಖಲಾತಿ ಕೇಂದ್ರವನ್ನು ಆಯ್ಕೆ ಮಾಡಿ, ನಿಮ್ಮ ನೇಮಕಾತಿಯನ್ನು ನಿಗದಿಪಡಿಸಿ ಮತ್ತು ನಿಗದಿಪಡಿಸಿದ ದಿನಾಂಕದಂದು ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ, ಅಧಾರ ಕಾರ್ಡ್ ತಯಾರಿಸಿ.
ಇದನ್ನೂ ಓದಿ- Aadhaar Card ಅನ್ನು ಸುರಕ್ಷಿತವಾಗಿರಿಸಲು ಈ ರೀತಿ ಲಾಕ್ ಮಾಡಿ
ದಾಖಲಾತಿ ಕೇಂದ್ರದಲ್ಲಿ ಆಧಾರ್ ಮಾಡಲಾಗುವುದು:-
ದಾಖಲಾತಿ ಕೇಂದ್ರದಲ್ಲಿ ಆಧಾರ್ ತಯಾರಿಸಲು ಗುರುತಿನ ಪುರಾವೆ (POI), ವಿಳಾಸದ ಪುರಾವೆ (POA), ಸಂಬಂಧದ ಪುರಾವೆ (POR) ಮತ್ತು ಹುಟ್ಟಿದ ದಿನಾಂಕ (DOB) ದಾಖಲೆಗಳಂತಹ ಅಗತ್ಯ ದಾಖಲೆಗಳನ್ನು ಒಯ್ಯಿರಿ. ಕೇಂದ್ರದಲ್ಲಿ ಇರುವ ಆಧಾರ್ ಅಧಿಕಾರಿ ದಾಖಲೆಗಳನ್ನು ಪರಿಶೀಲಿಸಿದ ಎಲ್ಲಾ ದಾಖಲೆಗಳನ್ನು ಪಡೆಯಿರಿ. ನಿಮ್ಮ ಮಗು ಐದು ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ಬಯೋಮೆಟ್ರಿಕ್ ಡೇಟಾವನ್ನು ತೆಗೆದುಕೊಳ್ಳಲಾಗುತ್ತದೆ. ಆದರೆ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ, ಬಯೋಮೆಟ್ರಿಕ್ ಡೇಟಾ ಅಗತ್ಯವಿರುವುದಿಲ್ಲ, ಜನಸಂಖ್ಯಾ ಡೇಟಾ ಮತ್ತು ಮುಖ ಗುರುತಿಸುವಿಕೆ ಮಾತ್ರ ಅಗತ್ಯವಾಗಿರುತ್ತದೆ.
ಬಾಲ್ ಆಧಾರ್ 90 ದಿನಗಳಲ್ಲಿ ಬರಲಿದೆ:
ಈ ಪ್ರಕ್ರಿಯೆಯ ನಂತರ ಪೋಷಕರು ತಮ್ಮ ಅರ್ಜಿಯ ಪ್ರಕ್ರಿಯೆಯನ್ನು ಪತ್ತೆಹಚ್ಚಲು ಸ್ವೀಕೃತಿ ಸಂಖ್ಯೆಯನ್ನು ಪಡೆಯುತ್ತಾರೆ. ಅದರ ನಂತರ 60 ದಿನಗಳಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ SMS ಸ್ವೀಕರಿಸಲಾಗುತ್ತದೆ. ಬಾಲ್ ಆಧಾರ್ ಕಾರ್ಡ್ 90 ದಿನಗಳಲ್ಲಿ ನಿಮ್ಮನ್ನು ತಲುಪುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ