ಹಿರಿಯ ನಾಗರಿಕರಿಗೆ ರೈಲು ಪ್ರಯಾಣದಲ್ಲಿ ಮತ್ತೆ ಸಿಗಲಿದೆ ರಿಯಾಯಿತಿ .! ಆದರೆ ನಿಯಮದಲ್ಲಿ ಸ್ವಲ್ಪ ಬದಲಾವಣೆ
ಭಾರತೀಯ ರೈಲ್ವೆ ಮೂಲಗಳಿಂದ ಪಡೆದ ಮಾಹಿತಿಯ ಪ್ರಕಾರ, ಟಿಕೆಟ್‌ನಲ್ಲಿ ಹಿರಿಯ ನಾಗರಿಕರಿಗೆ ರಿಯಾಯಿತಿ ನೀಡುವಾಗ ಈ ಬಾರಿ ವಯಸ್ಸಿನ ಮಿತಿಯನ್ನು ಬದಲಾಯಿಸಬಹುದು. ಈ ಸೌಲಭ್ಯವು ಮೊದಲು 58 ವರ್ಷ ವಯಸ್ಸಿನ ಮಹಿಳೆಯರಿಗೆ ಮತ್ತು 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸನ್ನು ಪೂರೈಸಿದವರಿಗೆ ಸಿಗುತ್ತಿತ್ತು.
Indian Railways Discount on Ticket : ಜನರ ಬೇಡಿಕೆಯ ಮೇರೆಗೆ ಹಿರಿಯ ನಾಗರಿಕರಿಗೆ ಮತ್ತೊಮ್ಮೆ ಟಿಕೆಟ್ ದರದಲ್ಲಿ ರಿಯಾಯಿತಿ ನೀಡಲು ಭಾರತೀಯ ರೈಲ್ವೇ ಚಿಂತನೆ ನಡೆಸುತ್ತಿದೆ. ಹೀಗಾದರೆ ಮತ್ತೊಮ್ಮೆ ಹಿರಿಯ ನಾಗರಿಕರು ಮತ್ತು ಕ್ರೀಡಾಪಟುಗಳು ಸೇರಿದಂತೆ ಇತರ ವರ್ಗದ ಪ್ರಯಾಣಿಕರು ಟಿಕೆಟ್ ದರದ ಮೇಲೆ ರಿಯಾಯಿತಿ ಪಡೆಯಲಿದ್ದಾರೆ.
ಹಿರಿಯ ನಾಗರಿಕರಿಗೆ ಮತ್ತೆ ರಿಯಾಯಿತಿ!
ಭಾರತೀಯ ರೈಲ್ವೆ ಮೂಲಗಳಿಂದ ಪಡೆದ ಮಾಹಿತಿಯ ಪ್ರಕಾರ, ಟಿಕೆಟ್‌ನಲ್ಲಿ ಹಿರಿಯ ನಾಗರಿಕರಿಗೆ ರಿಯಾಯಿತಿ ನೀಡುವಾಗ ಈ ಬಾರಿ ವಯಸ್ಸಿನ ಮಿತಿಯನ್ನು ಬದಲಾಯಿಸಬಹುದು. 70 ವರ್ಷ ಮೇಲ್ಪಟ್ಟವರಿಗೆ ಸರ್ಕಾರವು ರಿಯಾಯಿತಿ ದರದ ಸೌಲಭ್ಯವನ್ನು ಒದಗಿಸಬಹುದು ಎಂದು ನಿರೀಕ್ಷಿಸಲಾಗಿದೆ. ಈ ಸೌಲಭ್ಯವು ಮೊದಲು 58 ವರ್ಷ ವಯಸ್ಸಿನ ಮಹಿಳೆಯರಿಗೆ ಮತ್ತು 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸನ್ನು ಪೂರೈಸಿದವರಿಗೆ ಸಿಗುತ್ತಿತ್ತು.
ಇದನ್ನೂ ಓದಿ : 12 ನೇ ಕಂತು ಕೈ ಸೇರುವ ಮುನ್ನವೇ ಬದಲಾಯಿತು ಪಿಎಂ ಕಿಸಾನ್ ನಿಯಮ
ಮಾರ್ಚ್ 2020 ರ ಮೊದಲು ರೈಲ್ವೆಯು 58 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಿಗೆ ಶೇಕಡಾ 50 ರಷ್ಟು ಮತ್ತು 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರಿಗೆ ಶೇಕಡಾ 40 ರಷ್ಟು ರಿಯಾಯಿತಿಯನ್ನು ನೀಡುತ್ತಿತ್ತು. ಆದರೆ ಕರೋನಾ ನಂತರ ಮತ್ತೆ ರೈಲು ಸಂಚಾರ ಆರಂಭವಾದಾಗ ಈ ಸೌಲಭ್ಯವನ್ನು ರದ್ದುಗೊಳಿಸಲಾಯಿತು. ರೈಲ್ವೇಯ ಈ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಇನ್ನೊಂದು ಆಯ್ಕೆಯನ್ನು ಸಹ ರೈಲ್ವೆ ಪರಿಗಣಿಸುತ್ತಿದೆ. ಎಲ್ಲಾ ರೈಲುಗಳಲ್ಲಿ 'ಪ್ರೀಮಿಯಂ ತತ್ಕಾಲ್' ಯೋಜನೆಯನ್ನು ಪರಿಚಯಿಸುವ ಯೋಜನೆ ಮಾಡುತ್ತಿದೆ. ಇದು ಹೆಚ್ಚಿನ ಆದಾಯವನ್ನು ಪಡೆಯಲು ಸಹಾಯ ಮಾಡುತ್ತದೆ. ಪ್ರಸ್ತುತ ಈ ಯೋಜನೆಯು ಸುಮಾರು 80 ರೈಲುಗಳಲ್ಲಿ ಅನ್ವಯಿಸುತ್ತದೆ. ಪ್ರೀಮಿಯಂ ತತ್ಕಾಲ್ ಯೋಜನೆಯಲ್ಲಿ ಪ್ರಯಾಣಿಕರಿ ಸ್ವಲ್ಪ ಹೆಚ್ಚು ಬೆಲೆ ನೀಡಬೇಕಾಗುತ್ತದೆ. ಕೊನೆ ಘಳಿಗೆಯಲ್ಲಿ ಪ್ರಯಾಣ ಬೆಳೆಸುವ ಸನ್ನಿವೇಶ ಬಂದಾಗ ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.
ಇದನ್ನೂ ಓದಿ : Today Vegetable Price : ಕರ್ನಾಟಕದಲ್ಲಿ ಇಂದಿನ ತರಕಾರಿ ದರ ಹೀಗಿದೆ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.