ಅಟಲ್ ಪಿಂಚಣಿ ಯೋಜನೆಯ ನಿಯಮಗಳಲ್ಲಿ ಬದಲಾವಣೆ, ತೆರಿಗೆದಾರರಿಗೆ ಬಹು ದೊಡ್ಡ ಶಾಕ್ .!

Atal Pension Yojana New Rules : ಸರ್ಕಾರದ ಹೊಸ ನಿಯಮದ ಅಡಿಯಲ್ಲಿ, ಈಗ ಆದಾಯ ತೆರಿಗೆ ಪಾವತಿದಾರರು ಅಟಲ್ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ. ಈ ನಿಯಮವು 1 ಅಕ್ಟೋಬರ್ 2022 ರಿಂದ ಜಾರಿಗೆ ಬರಲಿದೆ.  

Written by - Ranjitha R K | Last Updated : Aug 11, 2022, 09:03 AM IST
  • ಮತ್ತೆ ಬದಲಾಯಿತು ಅಟಲ್ ಪೆನ್ಶನ್ ಯೋಜನೆಯ ನಿಯಮ
  • ಆದಾಯ ತೆರಿಗೆ ಪಾವತಿದಾರರು ಈ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ
  • ಅಕ್ಟೋಬರ್ 2022 ರಿಂದ ಹೊಸ ನಿಯಮ ಜಾರಿಗೆ ಬರಲಿದೆ.
 ಅಟಲ್ ಪಿಂಚಣಿ ಯೋಜನೆಯ ನಿಯಮಗಳಲ್ಲಿ ಬದಲಾವಣೆ,  ತೆರಿಗೆದಾರರಿಗೆ  ಬಹು ದೊಡ್ಡ ಶಾಕ್ .!  title=
Atal Pension Yojana New Rules (file photo)

Atal Pension Yojana New Rules : ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಅಟಲ್ ಪಿಂಚಣಿ ಯೋಜನೆಯಲ್ಲಿ ಸರ್ಕಾರ ದೊಡ್ಡ ಬದಲಾವಣೆ ಮಾಡಿದೆ. ಈ ಬದಲಾವಣೆಗೆ ಸಂಬಂಧಿಸಿದಂತೆ ಹಣಕಾಸು ಸಚಿವಾಲಯ ಅಧಿಸೂಚನೆಯನ್ನೂ ಹೊರಡಿಸಿದೆ. ಹೊಸ ನಿಯಮದ ಪ್ರಕಾರ, ಆದಾಯ ತೆರಿಗೆ ಪಾವತಿದಾರರು ಇನ್ನು ಮುಂದೆ ಅಟಲ್ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಸರ್ಕಾರದ ಈ ನಿಯಮ ಆದಾಯ ತೆರಿಗೆದಾರರಿಗೆ ದೊಡ್ಡ ಹಿನ್ನಡೆ ಎಂದೇ ಪರಿಗಣಿಸಲಾಗುತ್ತಿದೆ. 

ಸರ್ಕಾರದಿಂದ ಕಾಲಕಾಲಕ್ಕೆ ಪರಿಶೀಲನೆ  : 
ಹಣಕಾಸು ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಈ ನಿಯಮವು ಅಕ್ಟೋಬರ್ 1, 2022 ರಿಂದ ಅನ್ವಯವಾಗುತ್ತದೆ. ಇದರ ನಂತರ, ಆದಾಯ ತೆರಿಗೆ ಕಾಯ್ದೆಯ ಪ್ರಕಾರ ಆದಾಯ ತೆರಿಗೆ ಪಾವತಿಸುವ ವ್ಯಕ್ತಿ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಒಂದು ವೇಳೆ ಅರ್ಜಿ ಸಲ್ಲಿಸುವುದು ಗಮನಕ್ಕೆ ಬಂದರೆ ಅವರ ಖಾತೆಯನ್ನು ತಕ್ಷಣವೇ ಮುಚ್ಚಲಾಗುವುದು. ಅಲ್ಲಿಯವರೆಗೆ ಜಮೆಯಾದ ಹಣವನ್ನು ಅವರ ಖಾತೆಗೆ ವರ್ಗಾಯಿಸಲಾಗುವುದು. ಈ ಬಗ್ಗೆ ಸರ್ಕಾರದಿಂದ ಕಾಲಕಾಲಕ್ಕೆ ಪರಿಶೀಲನೆ ಕೂಡಾ ನಡೆಸಲಾಗುವುದು. 

ಇದನ್ನೂ ಓದಿ : Gold Price Today : ಒಂದೇ ದಿನಕ್ಕೆ ಭರ್ಜರಿ ಇಳಿಕೆ ಕಂಡ ಚಿನ್ನದ ಬೆಲೆ

ಪ್ರತಿ ತಿಂಗಳು 5 ಸಾವಿರ ರೂಪಾಯಿ ಪಿಂಚಣಿ :
ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ, ಭಾರತದ ಪ್ರಜೆಯಾಗಿದ್ದು, 18-40 ವರ್ಷ ವಯಸ್ಸಿನವರಾಗಿದ್ದರೆ  APY ಗೆ ಅರ್ಜಿ ಸಲ್ಲಿಸಬಹುದು. ಅಟಲ್ ಪಿಂಚಣಿ ಯೋಜನೆಯಲ್ಲಿ  ಹೂಡಿಕೆ ಮಾಡಿದ ನಂತರ, ನಿಗದಿತ ವಯಸ್ಸಿನ ಮಿತಿಯ ನಂತರ ಪ್ರತಿ ತಿಂಗಳು 5 ಸಾವಿರ ರೂಪಾಯಿಗಳವರೆಗೆ ಪಿಂಚಣಿ ಪಡೆಯುವ ಅವಕಾಶವಿದೆ. 

ಎರಡನೇ ಬಾರಿಗೆ  ನಿಯಮಗಳಲ್ಲಿ ಬದಲಾವಣೆ : 
ಈ ಯೋಜನೆಯನ್ನು ಸರ್ಕಾರವು 2015 ರಲ್ಲಿ ಪ್ರಾರಂಭಿಸಿತು. ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಜನರನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಎಪಿವೈ ಆರಂಭಿಸಿತ್ತು. ಆದರೆ ನಂತರ ಅದನ್ನು ಬದಲಾಯಿಸಲಾಯಿಸಿ, 18 ರಿಂದ 40 ವರ್ಷದೊಳಗಿನ ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯ ಲಾಭ ಪಡೆಯಲು ಅವಕಾಶ ನೀಡಲಾಯಿತು.  ಇದೀಗ ಮತ್ತೆ ಈ ಯೋಜನೆಯಲ್ಲಿ ಬದಲಾವಣೆ ತರಲಾಗಿದ್ದು, ಆದಾಯ ತೆರಿಗೆ ಪಾವತಿದಾರರು ಈ ಯೋಜನೆಯ ಭಾಗವಾಗಲು ಸಾಧ್ಯವಿಲ್ಲ.

ಇದನ್ನೂ ಓದಿ : Flipkart Big Saving Days : ವಾಷಿಂಗ್‌ ಮಷಿನ್, ರೆಫ್ರಿಜರೇಟರ್‌, ಡಿಶ್‌ವಾಶರ್‌ ಮೇಲೆ ಭರ್ಜರಿ 60% ವರೆಗೆ ರಿಯಾಯಿತಿ!

60 ವರ್ಷ ವಯಸ್ಸಿನ ನಂತರ  ಸಿಗುವುದು ಪಿಂಚಣಿ :
ಯೋಜನೆಯ ಪ್ರಕಾರ  60 ವರ್ಷ ವಯಸ್ಸಿನ ನಂತರ ಪಿಂಚಣಿ ಪಡೆಯವುದು ಸಾಧ್ಯವಾಗುತ್ತದೆ. ಇದಕ್ಕಾಗಿ ಎಷ್ಟು ಹೂಡಿಕೆ ಮಾಡಬೇಕು ಎನ್ನುವುದು ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. APY ನಲ್ಲಿ ಕನಿಷ್ಠ ಮಾಸಿಕ 1,000 ರೂ ಮತ್ತು ಗರಿಷ್ಠ 5,000 ರೂ ಪಿಂಚಣಿ ಪಡೆಯುವ ಅವಕಾಶವಿದೆ. ಎಷ್ಟು ಬೇಗ ಇದರಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸುತ್ತೀರೋ ಅಷ್ಟು ಹೆಚ್ಚು ಲಾಭವಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News