India Richest Person : ಭಾರತದ ಶ್ರೀಮಂತರ ಹೊಸ ಪಟ್ಟಿ ಹೊರ ಬಂದಿದೆ. ದೇಶದ 334 ಶತಕೋಟ್ಯಧಿಪತಿಗಳ ಶ್ರೀಮಂತರ ಪಟ್ಟಿ ಬಿಡುಗಡೆಯಾಗಿದೆ. ಶ್ರೀಮಂತರ ಈ ಪಟ್ಟಿಯಲ್ಲಿ ಈ ಬಾರಿ ದೊಡ್ಡ ಬದಲಾವಣೆಯಾಗಿದೆ. ಈ ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಗೌತಮ್ ಅದಾನಿಯದ್ದು ಹೈ ಜಂಪ್. ಹೌದು,  ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯ ಕಿರೀಟವನ್ನು ಅದಾನಿ ಮುಡಿಗೇರಿಸಿಕೊಂಡಿದ್ದಾರೆ. ಗೌತಮ್ ಅದಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕುವ ಮೂಲಕ ಹುರುನ್ ಇಂಡಿಯಾ ರಿಚ್ ಲಿಸ್ಟ್ 2024 ರಲ್ಲಿ ನಂಬರ್ 1 ಸ್ಥಾನವನ್ನು ಪಡೆದುಕೊಂಡಿದ್ದಾರೆ.  


COMMERCIAL BREAK
SCROLL TO CONTINUE READING

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ  : 
ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅಮೆರಿಕದ ಕಿರು ಮಾರಾಟ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್‌ನ ವರದಿಯ ನಂತರ ಇದು ಅವರ ದೊಡ್ಡ ಕಂಬ್ಯಾಕ್.  ಒಂದು ವರ್ಷದ ಹಿಂದೆ ಬಿಡುಗಡೆಯಾದ ಹಿಂಡೆನ್‌ಬರ್ಗ್ ವರದಿಯ ನಂತರ ಅದಾನಿ  ವ್ಯಾಪಾರ ವ್ಯವಹಾರದಲ್ಲಿ ಭಾರೀ ಮಟ್ಟದ ಏರಿಳಿತ ಕಂಡು ಬಂದಿತ್ತು.  ಅದಾನಿ ಷೇರುಗಳ ಬೆಲೆ ದೊಡ್ಡ ಮಟ್ಟದಲ್ಲಿ ಕುಸಿದಿತ್ತು.ಕಂಪನಿಯ ಮಾರುಕಟ್ಟೆ ಕ್ಯಾಪ್ ಅರ್ಧಕ್ಕಿಂತ ಕಡಿಮೆ ಮಟ್ಟಕ್ಕೆ ಕುಸಿದಿತ್ತು. ಇಷ್ಟೆಲ್ಲಾ ಆದರೂ ಒಂದೇ ವರ್ಷದಲ್ಲಿ ಮತ್ತೆ ಅದಾನಿ ಮಾಡಿರುವ ಕಂ ಬ್ಯಾಕ್ ಆಶ್ಚರ್ಯವನ್ನುಂಟು ಮಾಡುತ್ತದೆ.ಒಂದು ವರ್ಷದಲ್ಲಿ ಅವರ ಸಂಪತ್ತು ದ್ವಿಗುಣಗೊಂಡಿದ್ದು, ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ಗೌತಮ್ ಅದಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. 


ಇದನ್ನೂ ಓದಿ :   Arecanut Price Today: ದಾವಣಗೆರೆ, ಮಂಗಳೂರು & ತುಮಕೂರಿನಲ್ಲಿ ಇಂದಿನ ಅಡಿಕೆ ಧಾರಣೆ


ಅದಾನಿ ಕುಟುಂಬದ ಆಸ್ತಿ : 
ಹುರುನ್ ಇಂಡಿಯಾ 2024 ರ ಶ್ರೀಮಂತ ಪಟ್ಟಿಯ ಪ್ರಕಾರ,ಅದಾನಿ ಕುಟುಂಬವು 11.6 ಲಕ್ಷ ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದೆ. ಅವರ ಸಂಪತ್ತು ಒಂದು ವರ್ಷದಲ್ಲಿ 5,65,503 ಕೋಟಿಗಳಷ್ಟು ಹೆಚ್ಚಾಗಿದೆ. ಗೌತಮ್ ಅದಾನಿ ಕುಟುಂಬದ ಸಂಪತ್ತು ಶೇ.95ರಷ್ಟು ಏರಿಕೆಯಾಗಿ 11.6 ಲಕ್ಷ ಕೋಟಿ ರೂ.ತಲುಪಿದೆ. ವಿಮಾನ ನಿಲ್ದಾಣ, ಬಂದರು, ವಿದ್ಯುತ್, ಎಫ್‌ಎಂಸಿಜಿ, ರಿಯಾಲ್ಟಿ, ಇನ್‌ಫ್ರಾ, ಸಿಮೆಂಟ್ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿ ವ್ಯಾಪಾರ ಮಾಡುವ ಗೌತಮ್ ಅದಾನಿ, ಹಿಂಡೆನ್‌ಬರ್ಗ್ ಬಿರುಗಾಳಿಹೊರತಾಗಿಯೂ ತಮ್ಮ ವ್ಯವಹಾರವನ್ನು ಉಳಿಸಿದ್ದಾರೆ, ಮಾತ್ರವಲ್ಲ ಅದನ್ನು ವೇಗವಾಗಿ ವಿಸ್ತರಿಸಿದ್ದಾರೆ.ಕಳೆದ ಒಂದು ವರ್ಷದಲ್ಲಿ ಅದಾನಿ ನಿವ್ವಳ ಮೌಲ್ಯ ಹೆಚ್ಚಳಕ್ಕೆ ಗ್ರೂಪ್ ನ ಷೇರುಗಳ ಏರಿಕೆಯೇ ಕಾರಣ.  


ಮುಖೇಶ್ ಅಂಬಾನಿ ಆಸ್ತಿ ಎಷ್ಟು? :
ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅಂಬಾನಿ ಕುಟುಂಬದ ಆಸ್ತಿ 10,14,700 ಕೋಟಿ ರೂ. ಒಂದು ವರ್ಷದಲ್ಲಿ ಅಂಬಾನಿ ಸಂಪತ್ತು ಶೇ.25ರಷ್ಟು ಹೆಚ್ಚಾಗಿದೆ. HCL ಸಂಸ್ಥಾಪಕ ಶಿವ ನಾಡರ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.ಅವರ ಕುಟುಂಬದ ಸಂಪತ್ತು 314,000 ಕೋಟಿ ರೂ. ನಾಲ್ಕನೇ ಸ್ಥಾನದಲ್ಲಿ ವ್ಯಾಕ್ಸಿನ್ ಕಿಂಗ್ ಸೈರಸ್ ಎಸ್ ಪೂನಾವಾಲಾ ಅವರ ಕುಟುಂಬವಿದೆ. ಅವರು 289,800 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. 


ಇದನ್ನೂ ಓದಿ : ಸೆಪ್ಟೆಂಬರ್ 01ರಿಂದ ಬದಲಾಗಲಿವೆ ಈ 09 ನಿಯಮಗಳು, ನಿಮ್ಮ ಪಾಕೆಟ್ ಮೇಲೆ ಡೈರೆಕ್ಟ್ ಎಫೆಕ್ಟ್


ಭಾರತದ ಟಾಪ್ 10 ಶ್ರೀಮಂತ ವ್ಯಕ್ತಿಗಳು  :
ಐದನೇ ಸ್ಥಾನದಲ್ಲಿ ಸನ್ ಫಾರ್ಮಾದ ದಿಲೀಪ್ ಸಿಂಘ್ವಿ ಇದ್ದಾರೆ. ಅವರ ಒಟ್ಟು ಸಂಪತ್ತು 249,900 ಕೋಟಿ ರೂ. ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿ ಆದಿತ್ಯ ಬಿರ್ಲಾ ಅವರ ಕುಮಾರ್ ಮಂಗಲಂ ಬಿರ್ಲಾ ಇದ್ದಾರೆ. ಅವರ ಒಟ್ಟು ಸಂಪತ್ತು 235,200 ಕೋಟಿ ರೂ. ಏಳನೇ ಸ್ಥಾನದಲ್ಲಿ ಹಿಂದೂಜಾ ಗ್ರೂಪ್‌ನ ಗೋಪಿಚಂದ್ ಹಿಂದುಜಾ ಇದ್ದು, ಅವರ ಒಟ್ಟು ಸಂಪತ್ತು 192,700 ಕೋಟಿ ರೂ. ಶ್ರೀಮಂತರ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿರುವವರು ಡಿಮಾರ್ಟ್ ಮಾಲೀಕ ರಾಧಾಕೃಷ್ಣ ದಮಾನಿ ಅವರ ನಿವ್ವಳ ಮೌಲ್ಯ 190,000 ಕೋಟಿ ರೂ. 9 ನೇ ಸ್ಥಾನದಲ್ಲಿ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್ಜಿ ಇದ್ದು, ಅವರ ಒಟ್ಟು ಸಂಪತ್ತು 190,700 ಕೋಟಿ ರೂ. ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿ 162,800 ಕೋಟಿ ರೂ ಸಂಪತ್ತು ಹೊಂದಿರುವ ಬಜಾಜ್ ಗ್ರೂಪ್‌ನ ನೀರಜ್ ಬಜಾಜ್ ಇದ್ದಾರೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.