ಸೆಪ್ಟೆಂಬರ್ 01ರಿಂದ ಬದಲಾಗಲಿವೆ ಈ 09 ನಿಯಮಗಳು, ನಿಮ್ಮ ಪಾಕೆಟ್ ಮೇಲೆ ಡೈರೆಕ್ಟ್ ಎಫೆಕ್ಟ್

Written ByYashaswini VUpdated byYashaswini V
Published: Aug 29, 2024, 11:09 AM IST|Updated: Aug 29, 2024, 11:09 AM IST

Rules Changes From September 2024: ಪ್ರತಿ ತಿಂಗಳಿನಂತೆ ಸೆಪ್ಟೆಂಬರ್‌ನಲ್ಲೂ ಕೂಡ ಹಣಕಾಸಿಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ನಿಯಮಗಳು ಬದಲಾಗಲಿವೆ. 

ಸೆಪ್ಟೆಂಬರ್‌ನಿಂದ 09 ನಿಯಮಗಳ ಬದಲಾವಣೆ 1/10

ಆಗಸ್ಟ್ ಕೊನೆಗೊಳ್ಳಲು ಇನ್ನೆರಡು ದಿನಗಳಷ್ಟೇ ಬಾಕಿ ಉಳಿದಿದೆ. ಸೆಪ್ಟೆಂಬರ್ 01ಋದ್ನ ಕ್ರೆಡಿಟ್ ಕಾರ್ಡ್, ಎಲ್‌ಪಿ‌ಡಿ, ಸ್ಪೆಷಲ್ ಎಫ್‌ಡಿ, ರುಪೇ ಕಾರ್ಡ್ ಸೇರಿದಂತೆ ಹಲವು ನಿಯಮಗಳು ಬದಲಾಗಲಿದ್ದು, ನಿಮ್ಮ ಜೇಬಿನ ಮೇಲೆ ಏನು ಪರಿಣಾಮ ಎಂದು ತಿಳಿಯಿರಿ.   

 ಎಲ್‌ಪಿ‌ಜಿ ಬೆಲೆ 2/10

ಪ್ರತಿ ತಿಂಗಳ ಮೊದಲ ದಿನದಂದು ತೈಲ ಕಂಪನಿಗಳು ಎಲ್‌ಪಿ‌ಜಿ ಬೆಳೆಯನ್ನು ಪರಿಷ್ಕರಿಸುತ್ತವೆ. ಜುಲೈನಲ್ಲಿ ವಾಣಿಜ್ಯ ಸಿಲಿಂಡರ್ ದರದಲ್ಲಿ ಇಳಿಕೆಯಾಗಿತ್ತು. ಈ ತಿಂಗಳು ಕೂಡ ವಾಣಿಜ್ಯ ಹಾಗೂ ಅಡುಗೆ ಅನಿಲ ದರಗಳ ಬೆಲೆ ಪರಿಷ್ಕರಣೆಯಾಗುವ ನಿರೀಕ್ಷೆಯಿದೆ. 

ಕ್ರೆಡಿಟ್ ಕಾರ್ಡ್ ನಿಯಮ3/10

ಸೆಪ್ಟೆಂಬರ್ 1, 2024 ರಿಂದ, ವಿವಿಧ ಬ್ಯಾಂಕ್‌ಗಳಲ್ಲಿ ಕ್ರೆಡಿಟ್ ಕಾರ್ಡ್  ರಿವಾರ್ಡ್ ಪಾಯಿಂಟ್‌ಗಳು, ರಿಡೀಮ್, ಪಾವತಿ ಗಡುವುಗಳು ಮತ್ತು ಕನಿಷ್ಠ ಮೊತ್ತಕ್ಕೆ ಸಂಬಂಧಿಸಿದ ನಿಯಮಗಳು ಬದಲಾಗಲಿವೆ. ಇದು ಬಳಕೆದಾರರ ಮೇಲೆ ನೇರ ಪರಿಣಾಮ ಬೀರುತ್ತದೆ. 

 ಆಧಾರ್ ನವೀಕರಣ ಗಡುವು4/10

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ವಿಸ್ತರಿಸಿರುವ ಉಚಿತ ಆಧಾರ್ ನವೀಕರಣದ ಗಡುವು ಸೆಪ್ಟೆಂಬರ್ ತಿಂಗಳಿನಲ್ಲಿ ಕೊನೆಗೊಳ್ಳಲಿದೆ.  ಸೆಪ್ಟೆಂಬರ್ 14, 2024 ರ ನಂತರ ಆಧಾರ್ ನವೀಕರಣಕ್ಕೆ ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ. 

ಎಚ್‌ಡಿಎಫ್‌ಸಿ ಬ್ಯಾಂಕ್ 5/10

ಸೆಪ್ಟೆಂಬರ್ 1 ರಿಂದ, ಎಚ್‌ಡಿಎಫ್‌ಸಿ ಬ್ಯಾಂಕ್  ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಬದಲಾಯಿಸಿದೆ. ವಾಸ್ತವವಾಗಿ, ಎಚ್‌ಡಿ‌ಎಫ್‌ಸಿ ಆಯ್ದ  ಕ್ರೆಡಿಟ್ ಕಾರ್ಡ್‌ಗಳ ಮೇಲಿನ ಲಾಯಲ್ಟಿ ಪ್ರೋಗ್ರಾಮ್ ನಿಯಮಗಳನ್ನು ಬಡಯಾಯಿಸಿದ್ದು,  ಯುಟಿಲಿಟಿ ಬಿಲ್ ಪಾವತಿ ವಹಿವಾಟುಗಳ ಮೇಲಿನ ರಿವಾರ್ಡ್ ಪಾಯಿಂಟ್‌ಗಳ ಮಿತಿಯನ್ನು ನಿಗದಿಪಡಿಸಲಿದೆ. ಈ ನಿಯಮಾವು ಸೆಪ್ಟೆಂಬರ್ 01ರಿಂದ ಜಾರಿಗೆ ಬರಲಿದೆ. 

 ವಿಶೇಷ ಎಫ್‌ಡಿ ಬಡ್ಡಿ 6/10

ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಕೆಲವು ವಿಶೇಷ ಎಫ್‌ಡಿಗಳ ಬಡ್ಡಿಯನ್ನು ಹೆಚ್ಚಿಸಿವೆ. ಈ ಬ್ಯಾಂಕ್‌ಗಳ ಗ್ರಾಹಕರು 222 ದಿನಗಳವರೆಗೆ ಹಣವನ್ನು ಠೇವಣಿ ಮಾಡಿದರೆ, ನಿಮಗೆ 6.30% ಬಡ್ಡಿ ಸಿಗುತ್ತದೆ. 333 ದಿನಗಳವರೆಗೆ ಹಣವನ್ನು ಠೇವಣಿ ಮಾಡಿದರೆ, ನೀವು 7.15% ಬಡ್ಡಿಯನ್ನು ಪಡೆಯಬಹುದಾಗಿದೆ. ಆದಾಗ್ಯೂ, ಈ ಆಫರ್ ಸೆಪ್ಟೆಂಬರ್ ಅಂತ್ಯದವರೆಗೆ ಮಾತ್ರ ಲಭ್ಯವಿದೆ. 

ಎಸ್‌ಬಿ‌ಐ ಅಮೃತ್ ಕಲಶ ಯೋಜನೆ 7/10

ನೀವು ಎಸ್‌ಬಿ‌ಐ ಗ್ರಾಹಕರಾಗಿದ್ದು ಅಮೃತ್ ಕಲಶ್ ಯೋಜನೆಯಡಿ ಹೂಡಿಗೆ ಕ್ಮಾದ್ಲೌ ಬಯಸಿದರೆ  ಸೆಪ್ಟೆಂಬರ್ 30, 2024 ರವರೆಗೆಅವಕಾಶ ಇರಲಿದೆ. ಬ್ಯಾಂಕ್‌ನ ವೆಬ್‌ಸೈಟ್ ಪ್ರಕಾರ, 400-ದಿನಗಳ ವಿಶೇಷ ಅವಧಿಯ ಅಮೃತ್ ಕಲಶ್ ಯೋಜನೆ ಸೆಪ್ಟೆಂಬರ್ 30ಕ್ಕೆ ಮಾತ್ರವೇ ಮಾನ್ಯವಾಗಿರುತ್ತದೆ. 

ತುಟ್ಟಿಭತ್ಯೆ8/10

ಕೇಂದ್ರ ಸರ್ಕಾರಿ ನೌಕರರಿಗೆ ಸೆಪ್ಟೆಂಬರ್‌ನಲ್ಲಿ  ತುಟ್ಟಿಭತ್ಯೆಗೆ ಸಂಬಂಧಿಸಿದಂತೆ ಮಹತ್ವದ ಪ್ರಕಟಣೆ ಹೊರಬೀಳುವ ಸಾಧ್ಯತೆಯಿದೆ.  

ಟ್ರಾಯ್9/10

ದೇಶದಲ್ಲಿ ನಕಲಿ ಕರೆಗಳ ಹಾವಳಿಯನ್ನು ತಪ್ಪಿಸಲು ಟೆಲಿಕಾಂ ನಿಯಂತ್ರಕ TRAI ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. ಸ್ಪ್ಯಾಮ್, ಫೇಕ್ ಕಾಲ್ ಸಂಬಂಧಿಸಿದಂತೆ TRAI ಹೊಸ ನಿಯಮ 01ನೇ ಸೆಪ್ಟೆಂಬರ್ 2024ರಿಂದ ಜಾರಿಗೆ ಬರಲಿದೆ. 

ರುಪೇ ಕ್ರೆಡಿಟ್ ಕಾರ್ಡ್‌10/10

ರುಪೇ ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ನಿಯಮಗಳು ಸೆಪ್ಟೆಂಬರ್ 01ರಿಂದ ಬದಲಾಗಲಿದ್ದು ಇನ್ಮುಂದೆ ಯುಪಿಐ ವಹಿವಾತುಗಳಿಗೆ ರಿವಾರ್ಡ್ ಪಾಯಿಂಟ್‌ಗಳು ಅಥವಾ ಇತರ ನಿರ್ದಿಷ್ಟ ಪ್ರಯೋಜನಗಳಿಂದ ಶುಲ್ಕವನ್ನು ಕಡಿತಗೊಳಿಸಲಾಗುವುದಿಲ್ಲ ಎಂದು ಎನ್‌ಪಿ‌ಸಿ‌ಐ ಬ್ಯಾಂಕ್‌ಗಳಿಗೆ ನಿರ್ದೇಶಿಸಿದೆ.