ಬೆಂಗಳೂರು : ನೀವು ನಿರುದ್ಯೋಗಿಗಳಾಗಿದ್ದು ಉದ್ಯೋಗ ಹುಡುಕುತ್ತಿದ್ದರೆ ಅಥವಾ ವ್ಯವಹಾರ ಆರಂಭಿಸುವ ಬಗ್ಗೆ ಯೋಚಿಸುತ್ತಿದ್ದರೆ ನಿಮಗೆ ಅಗತ್ಯ ಮಾಹಿತಿ ಇಲ್ಲಿದೆ. ಹೌದು ಜನೌಷಧಿ ಕೇಂದ್ರಗಳನ್ನು ತೆರೆಯಲು  ಸಹಕಾರಿ ಸಚಿವಾಲಯ ಅನುಮೋದಿಸಿದೆ. ಜನೌಷಧಿ ಕೇಂದ್ರಗಳಲ್ಲಿ   ಕೈಗೆಟಕುವ ದರದಲ್ಲಿ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳು ಲಭ್ಯವಿವೆ.  ಈ ವ್ಯವಹಾರ ಆರಂಭಿಸುವ ಮೂಲಕ  ಕಡಿಮೆ ಹೂಡಿಕೆಯೊಂದಿಗೆ ತಿಂಗಳಿಗೆ 50,000 ರೂಪಾಯಿಗಳವರೆಗೆ ಗಳಿಸಬಹುದು. ಸಹಕಾರ ಸಚಿವಾಲಯ ನೀಡಿದ ಮಾಹಿತಿಯಲ್ಲಿ, ದೇಶದಾದ್ಯಂತ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರವನ್ನು ತೆರೆಯಲು 2,000 ಪ್ರಾಥಮಿಕ ಕೃಷಿ ಸಾಲ ಸಂಘಗಳಿಗೆ ಅನುಮೋದನೆ ನೀಡಲಾಗಿದೆ. 


COMMERCIAL BREAK
SCROLL TO CONTINUE READING

ಆಗಸ್ಟ್ ವೇಳೆಗೆ 1000 ಕೇಂದ್ರ  ಸ್ಥಾಪನೆ : 
ಈ ವರ್ಷದ ಆಗಸ್ಟ್ ವೇಳೆಗೆ ಸುಮಾರು 1,000 ಜನೌಷಧಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಉಳಿದ ಜನೌಷಧಿ ಕೇಂದ್ರಗಳು ಡಿಸೆಂಬರ್ 2023 ರ ವೇಳೆಗೆ ತೆರೆಯಲ್ಪಡುತ್ತವೆ. ಜನೌಷಧಿ ಕೇಂದ್ರವನ್ನು ತೆರೆಯುವ ಮೂಲಕ ಪ್ರತಿ ತಿಂಗಳು 50,000 ರೂಪಾಯಿಗಳವರೆಗೆ ಗಳಿಸಬಹುದು. ಇದಕ್ಕಾಗಿ ಸರ್ಕಾರದಿಂದ ಸಹಾಯಧನವನ್ನೂ ನೀಡಲಾಗುತ್ತದೆ. ಸಹಕಾರ ಸಚಿವ ಅಮಿತ್ ಶಾ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಮನ್ಸುಖ್ ಮಾಂಡವಿಯಾ  ನಡುವೆ ನಡೆದ ಸಭೆಯಲ್ಲಿ ಜನೌಷಧಿ ಕೇಂದ್ರಗಳನ್ನು ತೆರೆಯಲು ಪಿಎಸಿಎಸ್ ಸಮಿತಿಗಳಿಗೆ ಅನುಮತಿ ನೀಡಲು ನಿರ್ಧರಿಸಲಾಯಿತು.


ಇದನ್ನೂ ಓದಿ : ಹೆಣ್ಣು ಮಕ್ಕಳಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ವಿಶೇಷ ಯೋಜನೆ: ನಿಮ್ಮ ಮಗಳಿಗೆ ಸಿಗುತ್ತೆ 15 ಲಕ್ಷ ರೂ.


2,000 ಪಿಎಸಿಎಸ್ ಸಮಿತಿಗಳ ಆಯ್ಕೆ : 
ಇದಕ್ಕಾಗಿ ದೇಶಾದ್ಯಂತ 2,000 ಪಿಎಸಿಎಸ್ ಸಮಿತಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಮಹತ್ವದ ನಿರ್ಧಾರದಿಂದ ಪಾಕ್ಸ್ ಸೊಸೈಟಿಗಳ ಆದಾಯ ಮತ್ತು ಉದ್ಯೋಗಾವಕಾಶಗಳು ಹೆಚ್ಚಾಗುವುದಲ್ಲದೆ, ಔಷಧಗಳು ಕೈಗೆಟಕುವ ದರದಲ್ಲಿ ಜನರಿಗೆ ಲಭ್ಯವಾಗಲಿದೆ ಎಂದು ಸಹಕಾರ ಸಚಿವಾಲಯ ಹೇಳಿದೆ. ಇಲ್ಲಿಯವರೆಗೆ, ದೇಶದಾದ್ಯಂತ ಕೈಗೆಟುಕುವ ಔಷಧಿಗಳನ್ನು ಮಾರಾಟ ಮಾಡುವ 9,400 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳ ಮೂಲಕ ಸುಮಾರು 1,800 ಔಷಧಗಳು ಮತ್ತು 285 ವೈದ್ಯಕೀಯ ಸಾಧನಗಳನ್ನು ಮಾರಾಟ ಮಾಡಲಾಗುತ್ತದೆ.


ಜನೌಷಧಿ ಕೇಂದ್ರದಲ್ಲಿ ದೊರೆಯುವ ಔಷಧಿಗಳ ಬೆಲೆ ಮುಕ್ತ ಮಾರುಕಟ್ಟೆಯಲ್ಲಿ ದೊರೆಯುವ ಬ್ರಾಂಡೆಡ್ ಔಷಧಿಗಳಿಗಿಂತ ಶೇ.50-90ರಷ್ಟು ಕಡಿಮೆ ಇರುತ್ತದೆ. ಜನೌಷಧಿ ಕೇಂದ್ರವನ್ನು ತೆರೆಯಲು, ಅರ್ಜಿದಾರರು ಕನಿಷ್ಠ 120 ಚದರ ಅಡಿ ಜಾಗವನ್ನು ಹೊಂದಿರಬೇಕು. ಇದಕ್ಕಾಗಿ 5,000 ರೂ. ಅರ್ಜಿ ಶುಲ್ಕ ಪಾವತಿಸಬೇಕು. 


ಇದನ್ನೂ ಓದಿ : Global Economy Outlook: ದುಬಾರಿ ಸಾಲ ವಿಶ್ವದ ಆರ್ಥಿಕ ಬೆಳವಣಿಗೆಗೆ ಭಾರಿ ಪೆಟ್ಟು ನೀಡಲಿದೆ ಎಂದ ವಿಶ್ವ ಬ್ಯಾಂಕ್


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.