LIC New Jeevan Shanti Policy: ಎಲ್ ಐಸಿಯ ಈ ಪಾಲಿಸಿಯಲ್ಲಿ ಒಮ್ಮೆ ಹೂಡಿಕೆ ಮಾಡಿದರೆ ಜೀವನ ಪೂರ್ತಿ ಸಿಗಲಿದೆ ಪಿಂಚಣಿ
LIC New Jeevan Shanti Policy :ಈ ಯೋಜನೆ ಎಲ್‌ಐಸಿಯ ಹಳೆಯ ಸ್ಕೀಮ್ ಜೀವನ್ ಅಕ್ಷಯ್‌ಗೆ ಹೋಲುತ್ತದೆ. ಜೀವನ್ ಶಾಂತಿ ಪಾಲಿಸಿಯಲ್ಲಿ ಎರಡು ಆಯ್ಕೆಗಳಿವೆ. ಮೊದಲನೆಯದು ಇಮಿಡಿಯೇಟ್ ಎನ್ಯುಟಿ ಮತ್ತು ಎರಡನೆಯದು ಡೆಫರಡ್ ಎನ್ಯುಟಿ.
ನವದೆಹಲಿ : LIC New Jeevan Shanti Policy : ನಿಮ್ಮ ವೃದ್ಧಾಪ್ಯ ಜೀವನವನ್ನು ಸುರಕ್ಷಿತವಾಗಿರಿಸಲು ಬಯಸಿದರೆ, ಎಲ್ಐಸಿಯ ಈ ಪಾಲಿಸಿ ಉತ್ತಮ ಆಯ್ಕೆಯಾಗಿದೆ. ಎಲ್ಐಸಿಯ ಜೀವನ್ ಶಾಂತಿ ಪಾಲಿಸಿಯಲ್ಲಿ ಒಮ್ಮೆ ಹೂಡಿಕೆ ಮಾಡಿದರೆ, ಜೀವವ ಪೂರ್ತಿ ಪಿಂಚಣಿ ಪಡೆಯಬಹುದು. ಇದರೊಂದಿಗೆ, ನಿವೃತ್ತಿಯ ನಂತರದ ಜೀವನವನ್ನು ಸುರಕ್ಷಿತವಾಗಿರಿಸಬಹುದು.
ಏನಿದು ಎಲ್ಐಸಿ ಜೀವನ್ ಶಾಂತಿ ಯೋಜನೆ :
ಈ ಯೋಜನೆ ಎಲ್‌ಐಸಿಯ (LIC) ಹಳೆಯ ಸ್ಕೀಮ್ ಜೀವನ್ ಅಕ್ಷಯ್‌ಗೆ ಹೋಲುತ್ತದೆ. ಜೀವನ್ ಶಾಂತಿ ಪಾಲಿಸಿಯಲ್ಲಿ (LIC New Jeevan Shanti Policy) ಎರಡು ಆಯ್ಕೆಗಳಿವೆ. ಮೊದಲನೆಯದು ಇಮಿಡಿಯೇಟ್ ಎನ್ಯುಟಿ ಮತ್ತು ಎರಡನೆಯದು ಡೆಫರಡ್ ಎನ್ಯುಟಿ. ಇದೊಂದು ಸಿಂಗಲ್ ಪ್ರೀಮಿಯಂ ಪ್ಲಾನ್ ಆಗಿದೆ. ಮೊದಲ ಅಂದರೆ ಇಮಿಡಿಯೇಟ್ ಎನ್ಯುಟಿ ಅಡಿಯಲ್ಲಿ ಪಾಲಿಸಿಯನ್ನು ತೆಗೆದುಕೊಂಡ ತಕ್ಷಣ ಪಿಂಚಣಿ (Pension) ಸೌಲಭ್ಯ ಸಿಗಲಿದೆ. . ಮತ್ತೊಂದೆಡೆ, ಡೆಫರಡ್ ಎನ್ಯುಟಿಯಲ್ಲಿ ಪಾಲಿಸಿಯನ್ನು ತೆಗೆದುಕೊಂಡ 5, 10, 15 ಅಥವಾ 20 ವರ್ಷಗಳ ನಂತರ ಪಿಂಚಣಿ ಸೌಲಭ್ಯ ಲಭ್ಯವಾಗಲಿದೆ.
ಇದನ್ನೂ ಓದಿ : Income Tax Day 2021: ತೆರಿಗೆ ಪಾವತಿದಾರರಿಗೆ ಅಧ್ಬುತ ಕೊಡುಗೆ ಪ್ರಕಟಿಸಿದ SBI
ಎಷ್ಟು ಪಿಂಚಣಿ ಪಡೆಯಲಾಗುವುದು ? :
ಈ ಯೋಜನೆಯಡಿ ಪಿಂಚಣಿ ಮೊತ್ತವನ್ನು ನಿಗದಿಪಡಿಸಲಾಗಿಲ್ಲ. ನಿಮ್ಮ ಹೂಡಿಕೆ (Investment), ವಯಸ್ಸು ಮತ್ತು ಡಿಫರ್ಮೆಂಟ್ ಪೀರಿಯೇಡ್ ಗೆ ಅನುಗುಣವಾಗಿ ಪಿಂಚಣಿ ಪಡೆಯಬಹುದು. ಹೂಡಿಕೆ ಮತ್ತು ಪಿಂಚಣಿ ಪ್ರಾರಂಭದ ನಡುವಿನ ಅವಧಿ ಎಷ್ಟಿರುತ್ತದೆಯೋ ಅಥವಾ ನಿಮಗೆ ವಯಸ್ಸು ಎಷ್ಟಾಗಿರುತ್ತದೆಯೋ ಅದೇ ಆಧಾರದಲ್ಲಿ ಪಿಂಚಣಿ ಸಿಗಲಿದೆ. ನಿಮ್ಮ ಹೂಡಿಕೆಯ ಶೇಕಡಾವಾರು ಪ್ರಕಾರ ಎಲ್ಐಸಿ ಪಿಂಚಣಿ ನೀಡುತ್ತದೆ.
ಯಾರು ಪ್ರಯೋಜನವನ್ನು ಪಡೆಯುತ್ತಾರೆ :
ಎಲ್ಐಸಿಯ ಈ ಯೋಜನೆಯನ್ನು (LIC Policy) ಕನಿಷ್ಠ 30 ವರ್ಷಗಳು ಮತ್ತು ಗರಿಷ್ಠ 85 ವರ್ಷಗಳವರೆಗೆ ತೆಗೆದುಕೊಳ್ಳಬಹುದು. ಇದಲ್ಲದೆ, ಪಿಂಚಣಿ ಪ್ರಾರಂಭವಾದ ಮೂರು ತಿಂಗಳ ನಂತರ ಅಥವಾ 1 ವರ್ಷದ ನಂತರ ಇದನ್ನು ಸರೆಂಡರ್ ಮಾಡಬಹುದು. ಎರಡೂ ಆಯ್ಕೆಗಳಿಗೆ ಪಾಲಿಸಿಯನ್ನು (LIC Policy) ತೆಗೆದುಕೊಳ್ಳುವಾಗ ವಾರ್ಷಿಕ ದರಗಳನ್ನು ಖಾತರಿಪಡಿಸಲಾಗುತ್ತದೆ. ಯೋಜನೆಯ ಅಡಿಯಲ್ಲಿ ವಿವಿಧ ವರ್ಷಾಶನ ಆಯ್ಕೆಗಳು ಲಭ್ಯವಿದೆ. ಆದರೆ ಪಾಲಿಸಿ ಖರೀದಿ ವೇಳೆ, ಒಮ್ಮೆ ಮಾಡಿದ ಆಯ್ಕೆಯನ್ನು ಬದಲಾಯಿಸಲಾಗುವುದಿಲ್ಲ. ಈ ಪಾಲಿಸಿಯನ್ನು ಆಫ್‌ಲೈನ್‌ನಲ್ಲಿ ಮತ್ತು ಆನ್‌ಲೈನ್‌ನಲ್ಲಿ (Online) ಖರೀದಿಸಬಹುದು.
ಇದನ್ನೂ ಓದಿ :Gold Price : ಚಿನ್ನ ಖರೀದಿದಾರರಿಗೆ 'ಸುವರ್ಣಾವಕಾಶ' : ಕಡಿಮೆಯಾಗುತ್ತದೆ ಚಿನ್ನದ ಬೆಲೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ