Gold Price : ಚಿನ್ನ ಖರೀದಿದಾರರಿಗೆ 'ಸುವರ್ಣಾವಕಾಶ' : ಕಡಿಮೆಯಾಗುತ್ತದೆ ಚಿನ್ನದ ಬೆಲೆ 

ಚಿನ್ನದ ಬೆಲೆ 10 ಗ್ರಾಂಗೆ ₹ 108 ಇಳಿದು 10 ಗ್ರಾಂಗೆ, 47,526 ರೂ. ತಲುಪಿದೆ. ಸರಕು ತಜ್ಞರ ಪ್ರಕಾರ, ಸಧ್ಯ ಹಳದಿ ಲೋಹದ ಖರೀದಿದಾರರಿಗೆ ಸುವರ್ಣಾವಕಾಶ ಏಕೆಂದರೆ ಷೇರು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ ಕಾಣಲಿದೆ. ಜಾಗತಿಕವಾಗಿ ಹೆಚ್ಚುತ್ತಿರು ಹಣದುಬ್ಬರದ ಕಾಳಜಿ ಮತ್ತು ಯುಎಸ್, ಯುರೋಪ್ ಮತ್ತು ಆಗ್ನೇಯ ಏಷ್ಯಾದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳು ಇದರಿಂದ ಮತ್ತೆ ಚಿನ್ನದ ಮೇಲೆ 'ಹೂಡಿಕೆದಾರರ ಆಶ್ರಯ ತಾಣ'ವಾಗಿ ಮಾಡಬಹುದು ಎಂದು ಹೇಳಿದ್ದಾರೆ.

Written by - Channabasava A Kashinakunti | Last Updated : Jul 24, 2021, 11:41 AM IST
  • ಹಳದಿ ಲೋಹದ ಖರೀದಿದಾರರಿಗೆ ಸುವರ್ಣಾವಕಾಶ
  • ಚಿನ್ನದ ಬೆಲೆ 10 ಗ್ರಾಂಗೆ ₹ 108 ಇಳಿದು 10 ಗ್ರಾಂಗೆ, 47,526 ರೂ.
  • ಷೇರು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ
Gold Price : ಚಿನ್ನ ಖರೀದಿದಾರರಿಗೆ 'ಸುವರ್ಣಾವಕಾಶ' : ಕಡಿಮೆಯಾಗುತ್ತದೆ ಚಿನ್ನದ ಬೆಲೆ  title=

ನವದೆಹಲಿ : ಮಲ್ಟಿ ಕಮೋಡಿಟಿ ಎಕ್ಸ್‌ಚೇಂಜ್ (ಎಂಸಿಎಕ್ಸ್) ನಲ್ಲಿನ ಚಿನ್ನದ ಬೆಲೆ 10 ಗ್ರಾಂಗೆ ₹ 108 ಇಳಿದು 10 ಗ್ರಾಂಗೆ, 47,526 ರೂ. ತಲುಪಿದೆ. ಸರಕು ತಜ್ಞರ ಪ್ರಕಾರ, ಸಧ್ಯ ಹಳದಿ ಲೋಹದ ಖರೀದಿದಾರರಿಗೆ ಸುವರ್ಣಾವಕಾಶ ಏಕೆಂದರೆ ಷೇರು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ ಕಾಣಲಿದೆ. ಜಾಗತಿಕವಾಗಿ ಹೆಚ್ಚುತ್ತಿರು ಹಣದುಬ್ಬರದ ಕಾಳಜಿ ಮತ್ತು ಯುಎಸ್, ಯುರೋಪ್ ಮತ್ತು ಆಗ್ನೇಯ ಏಷ್ಯಾದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳು ಇದರಿಂದ ಮತ್ತೆ ಚಿನ್ನದ ಮೇಲೆ 'ಹೂಡಿಕೆದಾರರ ಆಶ್ರಯ ತಾಣ'ವಾಗಿ ಮಾಡಬಹುದು ಎಂದು ಹೇಳಿದ್ದಾರೆ. ಹಳದಿ ಲೋಹವು, 46,500 ರೂ.ಗಿಂತ ಹೆಚ್ಚು ಬೆಲೆಯಾಗುವವರೆಗೆ 'ಬೈ ಆನ್ ಡಿಪ್ಸ್' ತಂತ್ರವನ್ನು ಕಾಯ್ದುಕೊಳ್ಳುವಂತೆ ಬುಲಿಯನ್ ಹೂಡಿಕೆದಾರರಿಗೆ ಸಲಹೆ ನೀಡಿದರು. ದೀಪಾವಳಿ 2021 ರ ವೇಳೆಗೆ ಚಿನ್ನವು 10 ಗ್ರಾಂಗೆ 52,500 ವರೆಗೆ ಹೋಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಭವಿಷ್ಯದಲ್ಲಿ ಚಿನ್ನದ ಬೆಲೆ :

ಚಿನ್ನದ ಬೆಲೆ(Gold Rate)ಯ ದೃಷ್ಟಿಕೋನದಲ್ಲಿ ಮಾತನಾಡುವದಾದರೆ, ರಿಲಿಗೇರ್ ಬ್ರೋಕಿಂಗ್ ಲಿಮಿಟೆಡ್‌ನ ಉಪಾಧ್ಯಕ್ಷೆ ಸುಗಂಧ ಸಚ್‌ದೇವ ಹೇಳುವ ಪ್ರಕಾರ, ಚಿನ್ನದ ಔಟ್‌ಲುಕ್ ಇನ್ನೂ ಕಡಿಮೆ ಆಗಲಿದೆ. ಹಳದಿ ಲೋಹದ ಖರೀದಿದಾರರು 10 ಗ್ರಾಂಗೆ, 46,500 ರೂ.ಗಿಂತ ಹೆಚ್ಚು ಬೆಲೆ ನಿಗದಿಪಡಿಸುವವರೆಗೆ ನೋಡಬೇಕು. ಈ ಕೊರೋನಾದಿಂದ ಆಗಿ ಈ ವರ್ಷ ಚಿನ್ನದ ಆಕರ್ಷಣೆಯನ್ನು ದೊಡ್ಡ ಪ್ರಮಾಣದಲ್ಲಿ ಮಂಕಾಗಿದೆ.

ಇದನ್ನೂ ಓದಿ : RBI New Rules : ವೈಯಕ್ತಿಕ ಸಾಲದ ನಿಯಮಗಳನ್ನು ಬದಲಾವಣೆ ಮಾಡಿದ RBI : ಈಗ ನೀವು ಎಷ್ಟು ಸಾಲ ಪಡೆಯಬಹುದು?

ಐಐಎಫ್‌ಎಲ್ ಸೆಕ್ಯುರಿಟೀಸ್‌ನ ಸರಕು ಮತ್ತು ಕರೆನ್ಸಿ ವ್ಯಾಪಾರದ ಉಪಾಧ್ಯಕ್ಷ ಅನುಜ್ ಗುಪ್ತಾ ಅವರ ಚಿನ್ನ(Gold)ದ ಬೆಲೆ ಮುನ್ಸೂಚನೆಯ ಕುರಿತು, ಚಿನ್ನದ ಬೆಲೆ 1,750 ಕ್ಕಿಂತ ಹೆಚ್ಚು ವಹಿವಾಟು ನಡೆಸುವವರೆಗೆ ಮತ್ತು ಎಂಸಿಎಕ್ಸ್ ಪರಿಭಾಷೆಯಲ್ಲಿ; ಚಿನ್ನಕ್ಕೆ ಭಾರೀ ಬೆಂಬಲವಿದೆ. ಪ್ರತಿ 10 ಗ್ರಾಂ 46,500 ರಿಂದ 46,200 ರೂ. ಆಗುವವರೆಗೆ ಕಾಯಬೇಕು. ಚಿನ್ನದ ಬೆಲೆ 10 ಗ್ರಾಂಗೆ 48,500 ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ.

ಚಿನ್ನದ ಬೆಲೆಯ ಟಾರ್ ಗೆಟ್ :

ರಿಲಿಗೇರ್ ಬ್ರೋಕಿಂಗ್‌ನ ಸುಗಂಧ ಸಚ್‌ದೇವ ಅವರ ಚಿನ್ನದ ಬೆಲೆ ಮುನ್ಸೂಚನೆಯ ಕುರಿತು, ಎಂಸಿಎಕ್ಸ್‌(MCX)ನಲ್ಲಿ, ಚಿನ್ನದ ಬೆಲೆ 46,500 ರೂ.ಗೆ ಭಾರೀ ಬೆಂಬಲ ಹೊಂದಿದೆ ಮತ್ತು ಮುಕ್ತಾಯದ ಆಧಾರದ ಮೇಲೆ ಪ್ರತಿ 10 ಗ್ರಾಂ ಚಿನ್ನದ ಬೆಲೆ 46,500 ಕ್ಕಿಂತ ಹೆಚ್ಚಾಗುವವರೆಗೆ ಕಾದು ನಂತ್ರ ಚಿನ್ನವನ್ನು ಖರೀದಿಸುವುದನ್ನು ಮುಂದುವರಿಸಬಕು. ಮತ್ತೊಂದೆಡೆ, ಇದು ತಕ್ಷಣದ ಅಡಚಣೆಯಾಗಿದೆ, 48,500 ರೂ. ಮತ್ತು ಇದು ಒಮ್ಮೆ ಈ ಮಟ್ಟವನ್ನು ತಲುಪದೇ ಹೋದರೆ. ದೀಪಾವಳಿ 2021 ರ ವೇಳೆಗೆ ಚಿನ್ನದ ಬೆಲೆ ಎಂಸಿಎಕ್ಸ್ ನಲ್ಲಿ 52,500 ರೂ.ವರೆಗೂ ಏರಿಕೆ ಆಗಬಹುದು. ಆದ್ದರಿಂದ, ಚಿನ್ನ ಖರೀದಿದಾರರಿಗೆ ನನ್ನ ಸಲಹೆಯೆಂದರೆ, ಚಿನ್ನ ಪ್ರತಿ 10 ಗ್ರಾಂಗೆ, 46,500 ಕಡಿಮೆ ಬೆಲೆಯಲ್ಲಿ ಖರೀದಿಸಲು ಮುಂದಾಗದೆ ಇದ್ದಾಗ. ನೀವು 10 ಗ್ರಾಂಗೆ 45,500 ರಿಂದ 45,200 ರೂ.ವರೆಗೆ  ಇಳಿಮುಖಯಾಗುತ್ತದೆ. ಇದು ಖರೀದಿಗೆ ಭಾಳ ಸೂಕ್ತ ಸಮಯವಾಗಿದೆ.

ಇದನ್ನೂ ಓದಿ : Petrol-Diesel Price : ವಾಹನ ಸವಾರರಿಗೆ ಸಿಹಿ ಸುದ್ದಿ : ಏಳನೇ ದಿನವು ಸ್ಥಿರ ಉಳಿದ ಪೆಟ್ರೋಲ್-ಡೀಸೆಲ್ ಬೆಲೆ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News