Investment Tips - ಜೀವನದಲ್ಲಿ ಭವಿಷ್ಯದ ಭದ್ರತೆಗೆ ಹೂಡಿಕೆ ತುಂಬಾ ಮುಖ್ಯ. ಸಾಮಾನ್ಯವಾಗಿ ಜನರು ಎಫ್‌ಡಿಯಲ್ಲಿ ಸಗಟು ಮೊತ್ತವನ್ನು ಹೂಡಿಕೆ ಮಾಡುತ್ತಾರೆ. ಇದು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗಿದೆ. ಲಾಕ್-ಇನ್ ಅವಧಿ ಮುಗಿದ ನಂತರ, ನಿರ್ದಿಷ್ಟ ಬಡ್ಡಿಯನ್ನು ಅದಕ್ಕೆ ಸೇರಿಸಲಾಗುತ್ತದೆ. ಆದರೆ ಇಂದಿನ ಸಮಯದಲ್ಲಿ, ಎಫ್‌ಡಿ ಹೊರತುಪಡಿಸಿ ನಿಮ್ಮ ಬಳಿ ಸಾಕಷ್ಟು ಆಯ್ಕೆಗಳಿದ್ದು, ಅವುಗಳಲ್ಲಿ ಹೂಡಿಕೆ ಮಾಡಿದರೆ, ನೀವು ಎಫ್‌ಡಿಗಿಂತ ಉತ್ತಮ ಆದಾಯವನ್ನು ಪಡೆಯಬಹುದು. ಆರ್ಥಿಕ ವ್ಯವಹಾರಗಳ ಸಲಹೆಗಾರ್ತಿ ಶಿಖಾ ಚತುರ್ವೇದಿ ಅವರು ಹೂಡಿಕೆಯ ಉತ್ತಮ ಮಾರ್ಗಗಳ ಕುರಿತು ಮಾತನಾಡಿದ್ದಾರೆ, ಇದು ಭವಿಷ್ಯದಲ್ಲಿ ನಿಮಗೆ ಉತ್ತಮ ಲಾಭವನ್ನು ನೀಡುತ್ತದೆ.


COMMERCIAL BREAK
SCROLL TO CONTINUE READING

ರಿಯಲ್ ಎಸ್ಟೇಟ್ ಇನ್ವೆಸ್ಟ್ಮೆಂಟ್ ಟ್ರಸ್ಟ್
ನೀವು 2 ಲಕ್ಷ, 5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಹೊಂದಿದ್ದರೆ ಮತ್ತು ಅದಕ್ಕಾಗಿ ಉತ್ತಮ ಹೂಡಿಕೆ ಯೋಜನೆಯನ್ನು ಹುಡುಕುತ್ತಿದ್ದರೆ ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ನಲ್ಲಿ (REIT) ಹೂಡಿಕೆ ಮಾಡಿ. ಇದು ಒಂದು ರೀತಿಯಲ್ಲಿ ಮ್ಯೂಚುಯಲ್ ಫಂಡ್ ಗೆ ಹೋಲುತ್ತದೆ, ಆದರೆ ಇದರಲ್ಲಿ ನೀವು ಷೇರುಗಳಲ್ಲಿ ಹೂಡಿಕೆ ಮಾಡುವ ಬದಲು ಆಸ್ತಿಗಳ ಮೇಲೆ ಹಣವನ್ನು ಹೂಡಿಕೆ ಮಾಡುತ್ತೀರಿ. ವಾಣಿಜ್ಯ ಆಸ್ತಿ ಹೊಂದಿರುವ ಕಂಪನಿಗಳಿಂದ ಇದನ್ನು ಪ್ರಾರಂಭಿಸಲಾಗುತ್ತದೆ. ಇದರಲ್ಲಿ ಮಾಲ್‌ಗಳು, ಪಾರ್ಕ್‌ಗಳು ಮುಂತಾದ ದೊಡ್ಡ ಆಸ್ತಿಗಳನ್ನು ಸಾಮಾನ್ಯ ಜನರಿಂದ ಹಣ ಸಂಗ್ರಹಿಸಿ ಖರೀದಿಸಲಾಗುತ್ತದೆ. REIT ನಲ್ಲಿ ಹೂಡಿಕೆ ಮಾಡಲು, ನೀವು ಕೇವಲ ಡಿಮ್ಯಾಟ್ ಖಾತೆ ಮತ್ತು ಬಿಸಿನೆಸ್ ಖಾತೆಯನ್ನು ಹೊಂದಿರಬೇಕು. ಯೂನಿಟ್ ಹೋಲ್ಡರ್ ಆಗಿ, ನೀವು ಡಿವಿಡೆಂಡ್‌ಗಳ ರೂಪದಲ್ಲಿ ಮತ್ತು REIT ನ ಹೆಚ್ಚಿದ ಮೌಲ್ಯವನ್ನು ಗಳಿಸುವಿರಿ. ಆದರೆ ಅದನ್ನು ಖರೀದಿಸುವಾಗ, ಆಧಾರವಾಗಿರುವ ಸ್ವತ್ತುಗಳು ಉತ್ತಮವಾಗಿರಬೇಕು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ, ಆಗ ಮಾತ್ರ ನಿಮಗೆ ಲಾಭ ಸಿಗುತ್ತದೆ.


ಇಂಡೆಕ್ಸ್ ಫಂಡ್ಸ್ 
ಇಂಡೆಕ್ಸ್ ಫಂಡ್ ಮಾರುಕಟ್ಟೆ ಸೂಚ್ಯಂಕವನ್ನು ಟ್ರ್ಯಾಕ್ ಮಾಡುತ್ತದೆ, ಇದರಲ್ಲಿ ಆದಾಯ ಕೂಡ ಇಂಡೆಕ್ಸ್ ನೀಡುವಂತೆಯೇ ಇರುತ್ತದೆ. ಇದರಲ್ಲಿ, ಕಡಿಮೆ ಅಪಾಯದೊಂದಿಗೆ ಹೆಚ್ಚಿನ ಲಾಭವನ್ನು ಪಡೆಯಬಹುದು. ಇಂಡೆಕ್ಸ್ ಫಂಡ್ ಗಳು ಕೂಡ ಕಡಿಮೆ-ವೆಚ್ಚದ ಹೂಡಿಕೆಗಳು ಎಂದು ಪರಿಗಣಿಸಲಾಗುತ್ತದೆ, ನೀವು ಷೇರುಗಳಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿದ್ದರೆ ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಆಯ್ಕೆ ಮಾಡಲು ಸಾಧ್ಯವಾಗದಿದ್ದರೆ, ಇಂಡೆಕ್ಸ್ ಫಂಡ್ ಗಳು ನಿಮಗೆ ಉತ್ತಮ ಆಯ್ಕೆಯಾಗಿರಬಹುದು. ಇದಲ್ಲದೆ, ನೀವು SIP ಮೂಲಕ ಹೂಡಿಕೆ ಮಾಡಲು ಬಯಸುತ್ತಿದ್ದರೆ, ನಂತರ ನೀಫು ಇಂಡೆಕ್ಸ್ ಫಂಡ್ ಗಳಲ್ಲಿ ನೀವು SIP ಮೂಲಕ ಕೂಡ ಹೂಡಿಕೆ ಮಾಡಬಹುದು. ಇಂಡೆಕ್ಸ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ನೀವು ಹೌಸ್ ಆಫ್ ಫಂಡ್‌ಗಳ ಅಧಿಕೃತ ವೆಬ್‌ಸೈಟ್ ಅಥವಾ ಯಾವುದೇ ಅಪ್ಲಿಕೇಶನ್ ಅನ್ನು ಬಳಸಬಹುದು.


ಇದನ್ನೂ ಓದಿ-Free Electric Scooter: ಉಚಿತವಾಗಿ ಸಿಗುತ್ತಿದೆ ಇಲೆಕ್ಟ್ರಿಕ್ ಸ್ಕೂಟರ್, ಚಿಕ್ಕದೊಂದು ಷರತ್ತಿನ ಮೇಲೆ ಕಂಪನಿಯ ವಿಶೇಷ ಕೊಡುಗೆ
 
ಸಾವೆರಿನ್ ಗೋಲ್ಡ್ ಬಾಂಡ್
ಒಂದು ಗ್ರಾಂ ಚಿನ್ನವನ್ನು ಖರೀದಿಸುವ ಮೂಲಕ ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆಯನ್ನು ನೀವು ಪ್ರಾರಂಭಿಸಬಹುದು. ಇದು ಒಂದು ರೀತಿಯಲ್ಲಿ 999 ಶುದ್ಧತೆಯ ಚಿನ್ನವನ್ನು ಡಿಜಿಟಲ್ ಮೂಲಕ ಖರೀದಿಸಿದಂತೆ. ಇದರ ಲಾಕ್ ಇನ್ ಅವಧಿ 8 ವರ್ಷಗಳು. 8 ವರ್ಷಗಳ ನಂತರ ಹಿಂಪಡೆಯುವಿಕೆಗೆ ಯಾವುದೇ ಬಂಡವಾಳ ಲಾಭ ತೆರಿಗೆ ಇಲ್ಲ. ಆದರೆ ಇದಕ್ಕೂ ಮುನ್ನ ನೀವು ಹಿಂಪಡೆದರೆ, ನೀವು ಬಂಡವಾಳ ಲಾಭ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಇದರಲ್ಲಿ, ಹೂಡಿಕೆದಾರರು ವಾರ್ಷಿಕವಾಗಿ 2.5% ಬಡ್ಡಿಯನ್ನು ಪಡೆಯುತ್ತಾರೆ, ಇದನ್ನು ಅರ್ಧ ವಾರ್ಷಿಕ ಆಧಾರದ ಮೇಲೆ ಪಾವತಿಸಲಾಗುತ್ತದೆ. ಇದು ಜಿಎಸ್‌ಟಿಯ ವ್ಯಾಪ್ತಿಯಿಂದಲೂ ಹೊರಗಿದೆ. ಇದರಲ್ಲಿ ಎಂಟು ವರ್ಷಗಳಲ್ಲಿ ಹೂಡಿಕೆ ಮಾಡಿದ ಮೊತ್ತಕ್ಕೆ ಶೇ.20ರಷ್ಟು ಬಡ್ಡಿಯನ್ನು ಪಡೆಯಬಹುದು. ಹಿಂತೆಗೆದುಕೊಳ್ಳುವಾಗ, ಚಿನ್ನದ ಮಾರುಕಟ್ಟೆ ಬೆಲೆಯ ಆಧಾರದ ಮೇಲೆ ಪಾವತಿ ಮಾಡಲಾಗುತ್ತದೆ ಮತ್ತು ಇದರಲ್ಲಿ ನೀವು ಚಿನ್ನದ ಬೆಲೆಯ ಏರಿಕೆಯ ಲಾಭವನ್ನು ಸಹ ಪಡೆಯುತ್ತೀರಿ.


ಇದನ್ನೂ ಓದಿ-Food Delivery By Plane: ಇನ್ಮುಂದೆ ನೀವು ದೇಶದ ಯಾವುದೇ ನಗರದಿಂದ ಅಲ್ಲಿನ ವಿಶೇಷ ಆಹಾರ ತರಿಸಿಕೊಳ್ಳಬಹುದು, ಇಲ್ಲಿದೆ ವಿವರ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಯಾವುದೇ ರೀತಿಯ ಹೂಡಿಕೆಗೆ ಸಲಹೆಗಳನ್ನು ನೀಡುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ನಿಮಗೆ ಮಾಹಿತಿ ತಲುಪಿಸುವುದು ಮಾತ್ರ ನಮ್ಮ ಈ  ಉದ್ದೇಶ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.