Work from home ನಿಂದ ಬೇಸತ್ತಿದ್ದರೆ IRCTC ನೀಡುತ್ತಿದೆ ವರ್ಕ್ ಫ್ರಮ್ ಹೊಟೇಲ್ ಆಫರ್
ಐಆರ್‌ಸಿಟಿಸಿ ವರ್ಕ್ ಫ್ರಮ್ ಹೊಟೇಲ್ ಪ್ಯಾಕೇಜ್ ಅನ್ನು ಕೇರಳದಿಂದ ಆರಂಭಿಸಿದೆ. ಈ ಪ್ಲಾನ್ ಅಡಿಯಲ್ಲಿ ನಿಮಗಿಷ್ಟಿವಿರುವ ಹೊಟೇಲನ್ನು ಆಯ್ಕೆ ಮಾಡಿಕೊಳ್ಳಬಹುದು.
ನವದೆಹಲಿ : ಕರೋನಾ ಸಾಂಕ್ರಾಮಿಕ (Coronavirus) ರೋಗದ ಹಿನ್ನೆಲೆಯಲ್ಲಿ ಬಹುತೇಕ ಲಕ್ಷಾಂತರ ಮಂದಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. 2020 ರಿಂದಲೇ ಈ ವರ್ಕ್ ಪ್ರಮ್ ಹೋಂ (work from home) ಪದ್ದತಿ ನಡೆಯುತ್ತಿದೆ. ಇದೀಗ ಲಾಕ್ ಡೌನ್ ಕೂಡಾ ಜಾರಿಯಲ್ಲಿದೆ. ಮನೆಬಿಟ್ಟು ಎಲ್ಲಿಗೂ ಹೋಗುವಂತಿಲ್ಲ. ಮನೆಯಲ್ಲೇ ಇದ್ದು ಬೇಸರಗೊಂಡಿರುವವರಿಗಾಗಿ IRCTC ವರ್ಕ್ ಫ್ರಮ್ ಹೊಟೇಲ್ (work from hotel) ಆಫರ್ ನೀಡುತ್ತಿದೆ.
ಐಆರ್‌ಸಿಟಿಸಿ ನೀಡುತ್ತಿದೆ ವರ್ಕ್ ಫ್ರಮ್ ಹೊಟೇಲ್ ಆಫರ್ :
ಐಆರ್‌ಸಿಟಿಸಿ (IRCTC) ವರ್ಕ್ ಫ್ರಮ್ ಹೊಟೇಲ್ ಪ್ಯಾಕೇಜ್ ಅನ್ನು ಕೇರಳದಿಂದ ಆರಂಭಿಸಿದೆ. ಈ ಪ್ಲಾನ್ ಅಡಿಯಲ್ಲಿ ನಿಮಗಿಷ್ಟಿವಿರುವ ಹೊಟೇಲನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಪ್ಯಾಕೇಜ್ ನ ಸಂಪೂರ್ಣ ಮಾಹಿತಿ ಐಆರ್‌ಸಿಟಿಸಿ ವೆಬ್ ಸೈಟ್ ನಲ್ಲಿ ಲಭ್ಯವಿದೆ.
ಇದನ್ನೂ ಓದಿ : Paytm, PhonePe, Amazon Pay ಬಳಕೆದಾರರಿಗೆ ಬಿಗ್ ನ್ಯೂಸ್ : ಈಗ ನೀವು ಇವುಗಳನ್ನ ಬಳಸಿ ATM ನಿಂದ ಹಣ ಪಡೆಯಬಹದು!
ವರ್ಕ್ ಫ್ರಮ್ ಹೋಂಗಿಂತ ಉತ್ತಮ ಆಯ್ಕೆ :
ಕರೋನಾ ಸಾಂಕ್ರಾಮಿಕ (Coronavirus) ಕಾರಣದಿಂದ ಮನೆಯಿಂದಲೇ ಕೆಲಸ ಮಾಡುವವರಿಗೆ ಇದೊಂದು ಉತ್ತಮ ಅವಕಾಶ. ಈ ಪ್ಯಾಕೇಜ್ 10,126 ರೂಗಳಿಂದ ಪ್ರಾರಂಭವಾಗುತ್ತದೆ. ಇದರಲ್ಲಿ ಮೂರು ಜನರು 5 ರಾತ್ರಿಗಳವರೆಗೆ ಹೊಟೇಲ್ ನಲ್ಲಿ (hotel) ಉಳಿಯಬಹುದು. ಡಿಸ್ ಇನ್ಫೆಕ್ಟೆಡ್ ಕೊಠಡಿ, ಮೂರು ಬಾರಿ ಭೋಜನ, ಎರಡು ಬಾರಿ ಟೀ-ಕಾಫಿ, WiFi ಸುರಕ್ಷಿತ ಕಾರ್ ಪಾರ್ಕಿಂಗ್ ಮತ್ತು ಪ್ರಯಾಣ ವಿಮೆಯನ್ನು ಈ ಪ್ಯಾಕೇಜ್ ಒಳಗೊಂಡಿದೆ. ಇದರ ಹೊರತಾಗಿ ಬೇರೆ ಯಾವ ಶುಲ್ಕವನ್ನೂ ವಿಧಿಸಲಾಗುವುದಿಲ್ಲ.
ಕೇರಳದ ಈ ನಗರಗಳಲ್ಲಿ ಆಯ್ಕೆಗಳು ಲಭ್ಯವಿದೆ :
ಐಆರ್‌ಸಿಟಿಸಿಯ ಈ ಪ್ಯಾಕೇಜ್ ಕೇರಳದ ಐಷಾರಾಮಿ ಹೋಟೆಲ್‌ಗಳನ್ನು ಒಳಗೊಂಡಿದೆ. ಇದು ಮುನ್ನಾರ್, ಥೆಕೆಡಿ, ಕುಮಾರಕೋನ್, ಅಲೆಪ್ಪೆ, ಕೋವಲಂ, ವಯನಾಡ್ ಮತ್ತು ಕೊಚ್ಚಿಯಲ್ಲಿ ಈ ಸೇವೆ ಲಭ್ಯವಿದೆ. ಐಆರ್‌ಸಿಟಿಸಿಯ ವರ್ಕ್ ಫ್ರಮ್ ಹೋಟೆಲ್ (work from hotel) ಪ್ಯಾಕೇಜ್ ಅನ್ನು ಕನಿಷ್ಟ ಐದು ದಿನಗಳವರೆಗೆ ತೆಗೆದುಕೊಳ್ಳಬೇಕಾಗುತ್ತದೆ. ಐಆರ್‌ಸಿಟಿಸಿ ಪ್ರಕಾರ, ಈ ಆಫರ್ ನಲ್ಲಿ ಎಲ್ಲಾ ರೀತಿಯ ಸ್ವಚ್ಛತೆಯ ಬಗ್ಗೆ ಗಮನ ಹರಿಸಲಾಗುವುದು ಅಲ್ಲದೆ, ಕೋವಿಡ್ (COVID-19) ಪ್ರೋಟೋಕಾಲ್‌ಗಳನ್ನು ಚಾಚೂ ತಪ್ಪದೆ ಅನುಸರಿಸಲಾಗುವುದು.
ಇದನ್ನೂ ಓದಿ : ಈ ಬ್ಯಾಂಕಿನ ಗ್ರಾಹಕರಿಗೆ ಸಿಹಿಸುದ್ದಿ; Doorstep Banking ದರ ಇಳಿಸಿದ ಬ್ಯಾಂಕ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.