SARS-CoV-2 virus ಹರಡುವುದನ್ನು ಹೇಗೆ ತಪ್ಪಿಸಬಹುದು? ವಿಂಡೋ-ಡೋರ್-ಫ್ಯಾನ್‌ಗಳು ಮುಖ್ಯವೇ, ಇಲ್ಲಿದೆ ಮಾರ್ಗಸೂಚಿ

SARS-CoV-2 ವೈರಸ್ ಹರಡುವುದನ್ನು ಹೇಗೆ ನಿಲ್ಲಿಸಬಹುದು? ಈ ಪ್ರಶ್ನೆಗೆ ಉತ್ತರಿಸಲು, ಕೇಂದ್ರ ಸರ್ಕಾರದ ವೈಜ್ಞಾನಿಕ ಸಲಹೆಗಾರರು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಇದರಲ್ಲಿ ಕಿಟಕಿ-ಬಾಗಿಲು-ಫ್ಯಾನ್‌ನೊಂದಿಗೆ ಸರಿಯಾದ ವಾತಾಯನಕ್ಕೆ ಒತ್ತು ನೀಡಲಾಗಿದೆ. 

Written by - Yashaswini V | Last Updated : May 20, 2021, 02:25 PM IST
  • ಕರೋನಾ ಹರಡುವುದನ್ನು ತಡೆಯಲು ಮಾಸ್ಕ್, ಸಾಮಾಜಿಕ ಅಂತರ ಮತ್ತು ಗಾಳಿ ಅಗತ್ಯ ಎಂಬ ಮೂರು ತತ್ವಗಳನ್ನು ನಾವು ಮರೆಯಬಾರದು
  • ಕಡಿಮೆ ವೆಂಟಿಲೇಶನ್ ಹೊಂದಿರುವ ಮನೆ ಅಥವಾ ಕಚೇರಿಯಲ್ಲಿ ಸೋಂಕಿತ ಗಾಳಿ ಅಲ್ಲಿಯೇ ಸುಳಿದಾಡುತ್ತಿರುತ್ತದೆ
  • ಇದರಿಂದಾಗಿ ವೈರಸ್ ಸುಲಭವಾಗಿ ಹರಡಬಹುದು
SARS-CoV-2 virus ಹರಡುವುದನ್ನು ಹೇಗೆ ತಪ್ಪಿಸಬಹುದು? ವಿಂಡೋ-ಡೋರ್-ಫ್ಯಾನ್‌ಗಳು ಮುಖ್ಯವೇ, ಇಲ್ಲಿದೆ ಮಾರ್ಗಸೂಚಿ title=
SARS-CoV-2 virus In India

SARS-CoV-2 virus In India: ಕರೋನಾವೈರಸ್ ಸೋಂಕನ್ನು ನಾವು ಹೇಗೆ ತಡೆಯಬಹುದು ಎಂಬ ಪ್ರಶ್ನೆ ಹಲವರಲ್ಲಿ ಇದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರರಿಂದ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ. ಇದರಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ವಚ್ಛತೆ ಮತ್ತು ವಾತಾಯನಕ್ಕೆ ಒತ್ತು ನೀಡಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಉತ್ತಮ ಗಾಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಇದರ ಪ್ರಕಾರ, ಕಡಿಮೆ ವೆಂಟಿಲೇಶನ್ ಹೊಂದಿರುವ ಮನೆ ಅಥವಾ ಕಚೇರಿಯಲ್ಲಿ ಸೋಂಕಿತ ಗಾಳಿ ಅಲ್ಲಿಯೇ ಸುಳಿದಾಡುತ್ತಿರುತ್ತದೆ. ಇದರಿಂದಾಗಿ ವೈರಸ್ ಸುಲಭವಾಗಿ ಹರಡಬಹುದು. ಪರಸ್ಪರ ಸೋಂಕನ್ನು ತಡೆಗಟ್ಟಲು ಉತ್ತಮ ವಾತಾಯನ ಅಗತ್ಯವಿದೆ ಎಂದು ತಿಳಿಸಲಾಗಿದೆ.

ಕರೋನಾ ತಡೆಗಟ್ಟಲು ವಾತಾಯನ ಅಗತ್ಯ (Ventilation is necessary to prevent corona):
>> ನಾವು ಮನೆಗಳಲ್ಲಿ ಕೆಟ್ಟ ವಾಸನೆ ಅಥವಾ ದುರ್ಗಂಧವನ್ನು ನಿವಾರಿಸಲು ಕಿಟಕಿಗಳನ್ನು ತೆರೆಯುವ ರೀತಿಯಲ್ಲಿಯೇ ಸೋಂಕಿತ ಗಾಳಿಯನ್ನು ಶುದ್ಧೀಕರಿಸಲು ವಾತಾಯನವು ಅತ್ಯುತ್ತಮ ಪರಿಹಾರವಾಗಿದೆ ಎಂದು ವಿವರಿಸಲಾಗಿದೆ. 
>> ಯಾವುದೇ ರೀತಿಯ ವಾಸನೆಯನ್ನು ತೆಗೆದುಹಾಕಲು ನಿಷ್ಕಾಸ ವ್ಯವಸ್ಥೆಯನ್ನು ಬಳಸಬಹುದು.
>> ಉತ್ತಮ ವಾತಾಯನವು  ಮನೆಗಳು ಮತ್ತು ಕಚೇರಿಗಳಲ್ಲಿ ಕರೋನಾ ಸೋಂಕಿನ (Coronavirus) ಅಪಾಯದಿಂದ ನಮ್ಮನ್ನು ರಕ್ಷಿಸುತ್ತದೆ ಎಂದು ಸಲಹೆಗಾರರು ತಿಳಿಸಿದ್ದಾರೆ. 
>> ಇದರೊಂದಿಗೆ, ಅಡ್ಡ ವಾತಾಯನ ಪಾತ್ರ ಅಂದರೆ ನಿಷ್ಕಾಸ ಗಾಳಿಯ ವಾತಾಯನ ಮತ್ತು ಎಕ್ಸಿಸ್ಟೆನ್ಸ್ ಫ್ಯಾನ್ ಸೋಂಕನ್ನು ತಡೆಗಟ್ಟಲು ಮುಖ್ಯವೆಂದು ಇದರಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ - Corona Test At Home: ಈಗ ಮನೆಯಲ್ಲಿಯೇ ಮಾಡಿ ಕರೋನಾ ಟೆಸ್ಟ್

ಈ ಮಾರ್ಗಸೂಚಿಯಲ್ಲಿ  ಬಾಗಿಲುಗಳನ್ನು ತೆರೆದಿಡುವುದು ಉತ್ತಮ ವಾತಾಯಾನದ ದೃಷ್ಟಿಯಿಂದ ಒಳ್ಳೆಯದು. ಆದರೆ ಆದರ್ಶವಲ್ಲ ಎನ್ನಲಾಗಿದೆ. ಇದಲ್ಲದೆ ಫ್ಯಾನ್ ಗಾಳಿಯು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ವೈರಸ್ ಅನ್ನು ಹರಡುತ್ತದೆ. ಇದಕ್ಕೆ ಆದರ್ಶ ವಾತಾಯನ ಅಗತ್ಯವಿರುತ್ತದೆ, ಅದು ಕಿಟಕಿಯ ಬಳಿ ಒಂದು ಎಕ್ಸಿಸ್ಟೆನ್ಸ್ ಫ್ಯಾನ್ ಹೊಂದಿರಬೇಕು ಎಂದು ಸೂಚಿಸುತ್ತದೆ ಎಂದು ತಿಳಿಸಿದೆ.

ಅಲ್ಲದೆ, ಕರೋನಾ ಹರಡುವುದನ್ನು ತಡೆಯಲು ಮಾಸ್ಕ್, ಸಾಮಾಜಿಕ ಅಂತರ (Social Distance) ಮತ್ತು ಗಾಳಿ ಅಗತ್ಯ ಎಂಬ ಮೂರು ತತ್ವಗಳನ್ನು ನಾವು ಮರೆಯಬಾರದು. ನಾವು ಹೇಗೆ ಅಶುದ್ಧ ಗಾಳಿಯನ್ನು ಅಥವಾ ದುರ್ಗಂಧವನ್ನು ಮನೆಯಿಂದ ತೆಗೆಯುತ್ತೇವೆಯೋ ಅದೇ ರೀತಿಯಲ್ಲಿ ಮನೆಯ ಕಲುಷಿತ ಗಾಳಿಯನ್ನು ಸಹ ಹೊರಹಾಕಬಹುದು ಮತ್ತು ಅದರಲ್ಲಿ ಒಳಗೊಂಡಿರುವ ವೈರಸ್ ಅನ್ನು ಹೊರಹಾಕಬಹುದು ಎಂದು ಇದರಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ - White Fungus: ಬ್ಲಾಕ್ ಫಂಗಸ್ ಬಳಿಕ ವೈಟ್ ಫಂಗಸ್, ಅದು ದೇಹದ ಮೇಲೆ ಹೇಗೆ ದಾಳಿ ಮಾಡುತ್ತೆ ಗೊತ್ತಾ

ಫ್ಯಾನ್ ಇರುವ ಸ್ಥಳವೂ ಮುಖ್ಯವಾಗಿದೆ ಎಂದು ಮಾರ್ಗಸೂಚಿ ಹೇಳುತ್ತದೆ. ಏಕೆಂದರೆ ಫ್ಯಾನ್ ಕಲುಷಿತ ಗಾಳಿಯನ್ನು ನೇರವಾಗಿ ಬೇರೊಬ್ಬರಿಗೆ ಪಸರಿಸುವ ಸ್ಥಳದಲ್ಲಿ ಇರಬಾರದು. ಕೋಣೆಯ ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಿದ್ದರೆ, ಎಕ್ಸಿಸ್ಟೆನ್ಸ್ ಫ್ಯಾನ್ ಆನ್ ಇರಬೇಕು ಎಂದು ಅದರಲ್ಲಿ ಸಲಹೆ ನೀಡಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News