IRCTC Cashback Offer: ಈ ವಾರ ಸಹೋದರ ಮತ್ತು ಸಹೋದರಿಯರ ಅತ್ಯಂತ ಪವಿತ್ರ ಹಬ್ಬ ಅಂದರೆ ರಕ್ಷಾ ಬಂಧನ (Rakshabandhan) ಬರಲಿದೆ ಮತ್ತು ಈ ಸಂದರ್ಭದಲ್ಲಿ ಐಆರ್‌ಸಿಟಿಸಿ ಮಹಿಳಾ ಪ್ರಯಾಣಿಕರಿಗೆ ಉತ್ತಮ ಕೊಡುಗೆಯನ್ನು ನೀಡಿದೆ. ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು (IRCTC) ರಕ್ಷಾಬಂಧನ ಹಬ್ಬದ ಸಮಯದಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ವಿಶೇಷ ಕೊಡುಗೆಯನ್ನು ನೀಡಿದೆ. ಅದರ ಅಡಿಯಲ್ಲಿ ಮಹಿಳಾ ಪ್ರಯಾಣಿಕರು ನಿರ್ದಿಷ್ಟ ರೈಲಿನಲ್ಲಿ ಪ್ರಯಾಣಿಸಲು 5 % ಕ್ಯಾಶ್‌ಬ್ಯಾಕ್ ಪಡೆಯಬಹುದು.


COMMERCIAL BREAK
SCROLL TO CONTINUE READING

ಐಆರ್‌ಸಿಟಿಸಿ ಪ್ರಕಾರ, ಮಹಿಳೆಯರು ತೇಜಸ್ ಎಕ್ಸ್‌ಪ್ರೆಸ್‌ನಲ್ಲಿ (Tejas Express) ಆಗಸ್ಟ್ 24 ರವರೆಗೆ ಪ್ರಯಾಣಿಸಿದರೆ, ಅವರಿಗೆ 5 ಪ್ರತಿಶತ ಕ್ಯಾಶ್‌ಬ್ಯಾಕ್ ನೀಡಲಾಗುತ್ತದೆ. ಆದಾಗ್ಯೂ, ಇದು ಎರಡು ಮಾರ್ಗಗಳಲ್ಲಿ ಚಲಿಸುವ ತೇಜಸ್ ಎಕ್ಸ್‌ಪ್ರೆಸ್‌ನಲ್ಲಿ ಮಾತ್ರ ಮಾನ್ಯವಾಗಿರುತ್ತದೆ. ಇದು ದೆಹಲಿಯಿಂದ ಲಕ್ನೋಗೆ (Delhi-Lucknow) ಮತ್ತು ಮುಂಬೈನಿಂದ ಅಹಮದಾಬಾದಿಗೆ  (Mumbai to Ahmedabad) ಸಂಚರಿಸುವ ತೇಜಸ್ ಎಕ್ಸ್‌ಪ್ರೆಸ್ ಮಾತ್ರ. ಈ ಮಾರ್ಗಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ಐಆರ್‌ಸಿಟಿಸಿಯಿಂದ 5 ಪ್ರತಿಶತ ತ್ವರಿತ ಕ್ಯಾಶ್‌ಬ್ಯಾಕ್ ನೀಡಲಾಗುತ್ತದೆ. ಆದಾಗ್ಯೂ, ಈ ಕೊಡುಗೆ ಆಗಸ್ಟ್ 15 ರಿಂದ ಆರಂಭವಾಗಿದೆ ಮತ್ತು ಆಗಸ್ಟ್ 24 ರವರೆಗೆ ಮುಂದುವರಿಯುತ್ತದೆ.


ಇದನ್ನೂ ಓದಿ- Train Ticket Insurance Benefits: ರೈಲ್ವೆ ಟಿಕೆಟ್ ಬುಕಿಂಗ್ ವೇಳೆ ವಿಮೆ ಮಾಡಿಸುವುದರಿಂದ ಸಿಗುತ್ತೆ ಈ ಎಲ್ಲಾ ಪ್ರಯೋಜನ


ಇವರೂ ಕೂಡ ಆಫರ್‌ಗಳನ್ನು ಪಡೆಯುತ್ತಾರೆ:-
ಐಆರ್‌ಸಿಟಿಸಿ (IRCTC) ಪ್ರಕಾರ, ಈ ಕೊಡುಗೆಯನ್ನು ಘೋಷಿಸುವ ಮೊದಲು ಆಗಸ್ಟ್ 15 ಮತ್ತು ಆಗಸ್ಟ್ 24 ರ ನಡುವೆ ಈಗಾಗಲೇ ತೇಜಸ್ ಎಕ್ಸ್‌ಪ್ರೆಸ್ ಟಿಕೆಟ್‌ಗಳನ್ನು ಕಾಯ್ದಿರಿಸಿದ ಮಹಿಳೆಯರಿಗೂ ಕೂಡ ಈ ಕೊಡುಗೆ ಲಭ್ಯವಿರುತ್ತದೆ. 


ನಿಮ್ಮ ಪ್ರಯಾಣ ಮುಗಿದ ನಂತರ, ನೀವು ಟಿಕೆಟ್ ಕಡಿತಗೊಳಿಸಿದ ಖಾತೆಗೆ ಕ್ಯಾಶ್‌ಬ್ಯಾಕ್ ಮೊತ್ತವನ್ನು ಜಮಾ ಮಾಡಲಾಗುತ್ತದೆ. ನಿಗದಿತ ಅವಧಿಯಲ್ಲಿ ಮಾಡಿದ ಪ್ರಯಾಣಕ್ಕೆ ಮಾತ್ರ ಕ್ಯಾಶ್‌ಬ್ಯಾಕ್ ಕೊಡುಗೆ ಅನ್ವಯವಾಗುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ಸಮಯದಲ್ಲಿ, ಮಹಿಳೆಯರು ಅನೇಕ ಬಾರಿ ಪ್ರಯಾಣಿಸಬಹುದು.


ಇದನ್ನೂ ಓದಿ- Indian Railways: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್! ಪ್ರಯಾಣದ ವೇಳೆ ಸಿಗಲಿದೆ ಈ ಸೌಲಭ್ಯ


ತೇಜಸ್ ಆಗಸ್ಟ್ 7 ರಿಂದ ಮತ್ತೆ ಓಡಲು ಆರಂಭಿಸಿತು:
ಕೊರೊನಾವೈರಸ್ ಎರಡನೇ ತರಂಗದ ಸಮಯದಲ್ಲಿ ತೇಜಸ್ ಎಕ್ಸ್‌ಪ್ರೆಸ್ ರೈಲುಗಳ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು, ಆದರೂ ಐಆರ್‌ಸಿಟಿಸಿ ಆಗಸ್ಟ್ 7 ರಿಂದ ಅದನ್ನು ಪುನರಾರಂಭಿಸಿದೆ. ಈ ಎರಡೂ ರೈಲುಗಳು ವಾರದಲ್ಲಿ ನಾಲ್ಕು ದಿನ ಓಡಲಿವೆ. ಈ ರೈಲುಗಳು ಶುಕ್ರವಾರ, ಶನಿವಾರ, ಭಾನುವಾರ ಮತ್ತು ಸೋಮವಾರ ಕಾರ್ಯನಿರ್ವಹಿಸುತ್ತವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ