Indian Railways: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್! ಪ್ರಯಾಣದ ವೇಳೆ ಸಿಗಲಿದೆ ಈ ಸೌಲಭ್ಯ

Indian Railways Pantry Car in Train: ರೈಲುಗಳಲ್ಲಿ ಪ್ಯಾಂಟ್ರಿಕಾರ್ ಸೇವೆ ಶೀಘ್ರವೇ ಆರಂಭವಾಗಲಿದೆ. ಈ ಸೇವೆ ರಾಜಧಾನಿ ಎಕ್ಸ್‌ಪ್ರೆಸ್ ಮತ್ತು ಇತರ ಪ್ರಮುಖ ರೈಲುಗಳಲ್ಲಿ ಮೊದಲ ಹಂತದಲ್ಲಿ ಆರಂಭವಾಗಲಿದೆ.

Written by - Yashaswini V | Last Updated : Aug 3, 2021, 02:15 PM IST
  • ರೈಲ್ವೆ ಪ್ರಯಾಣಿಕರಿಗೆ ಒಳ್ಳೆಯ ಸುದ್ದಿ
  • ಈಗ ನೀವು ಪ್ರಯಾಣದಲ್ಲಿ ತಾಜಾ ಆಹಾರವನ್ನು ಪಡೆಯುತ್ತೀರಿ
  • ಪ್ರಸ್ತುತ, ರೈಲುಗಳಲ್ಲಿ ಪ್ರಯಾಣಿಕರು 'ರೆಡಿ ಟು ಇಟ್' ಆಹಾರ ಸೇವೆಯನ್ನು ಪಡೆಯುತ್ತಿದ್ದಾರೆ
Indian Railways: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್! ಪ್ರಯಾಣದ ವೇಳೆ ಸಿಗಲಿದೆ ಈ ಸೌಲಭ್ಯ title=
Indian Railways Food Service

ನವದೆಹಲಿ: Indian Railways- ರೈಲ್ವೆ ಪ್ರಯಾಣಿಕರಿಗೆ ಒಳ್ಳೆಯ ಸುದ್ದಿ ಇದೆ. ಕೊರೊನಾವೈರಸ್ (Coronavirus) ಸೋಂಕಿನಿಂದಾಗಿ ರೈಲುಗಳಲ್ಲಿ ದೀರ್ಘಕಾಲ ನಿಲ್ಲಿಸಲಾಗಿದ್ದ ತಾಜಾ ಆಹಾರ ಸೇವೆ ಇನ್ನೂ ಆರಂಭಗೊಂಡಿಲ್ಲ.  ಆದರೆ ಈ ಮಧ್ಯೆ, ರೈಲ್ವೆಯಲ್ಲಿ ಇ-ಕ್ಯಾಟರಿಂಗ್ ಸೇವೆಯನ್ನು ಪರಿಚಯಿಸಿದ ನಂತರ, ರೈಲುಗಳಲ್ಲಿ ಸಾಮಾನ್ಯ ಕ್ಯಾಟರಿಂಗ್ ಪ್ಯಾಂಟ್ರಿ ಕಾರಿನ ಸೇವೆಯನ್ನು ಶೀಘ್ರದಲ್ಲೇ ಮರುಸ್ಥಾಪಿಸಲಾಗುವುದು ಎಂದು ಹೇಳಲಾಗುತ್ತಿದೆ.

ಇ-ಕ್ಯಾಟರಿಂಗ್ ಸೇವೆ ಆರಂಭ: 
ಕರೋನಾ ಎರಡನೇ ಅಲೆ (Corona Second Wave) ಪ್ರಕರಣಗಳ ಸಂಖ್ಯೆ ಇಳಿಮುಖವಾಗತೊಡಗಿದೆ. ಆದರೆ ಕರೋನಾದ ಮೂರನೇ ತರಂಗದ (Corona Third Wave) ಭೀತಿ ಇದ್ದೇ ಇದೆ. ಆದರೆ ಎಲ್ಲವೂ ಸಾಮಾನ್ಯವಾಗಿದ್ದರೆ, ಈ ತಿಂಗಳಿನಿಂದ ರೈಲ್ವೆ ಪ್ರಯಾಣಿಕರು ರೈಲುಗಳಲ್ಲಿ ತಾಜಾ ಆಹಾರವನ್ನು ಪಡೆಯಲು ಸಾಧ್ಯವಾಗುತ್ತದೆ. ಪ್ರಸ್ತುತ, ರೈಲುಗಳಲ್ಲಿ ಪ್ರಯಾಣಿಕರು 'ರೆಡಿ ಟು ಇಟ್' ಆಹಾರ ಸೇವೆಯನ್ನು ಪಡೆಯುತ್ತಿದ್ದಾರೆ. ರೈಲುಗಳ ಕ್ಯಾಟರಿಂಗ್ ಸೇವೆಯನ್ನು ಆರಂಭಿಸುವುದರೊಂದಿಗೆ ಲಕ್ಷಾಂತರ ರೈಲ್ವೆ ಪ್ರಯಾಣಿಕರಿಗೆ ಊಟದ ಸಮಸ್ಯೆಯಿಂದ ಪರಿಹಾರ ಸಿಗಲಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಬಾರಿ ಪ್ಯಾಂಟ್ರಿ ಕಾರಿನಲ್ಲಿ ಒಲೆ ಉರಿಯುವುದಿಲ್ಲ. ಗುತ್ತಿಗೆದಾರರು ತಮ್ಮ ಮೂಲ ಅಡುಗೆಮನೆಯಲ್ಲಿ ತಯಾರಿಸಿದ ಆಹಾರವನ್ನು ಪ್ರಯಾಣಿಕರಿಗೆ ಪೂರೈಸುತ್ತಾರೆ ಎನ್ನಲಾಗಿದೆ.

ಇದನ್ನೂ ಓದಿ- Indian Railways: ಆನ್‌ಲೈನ್ ಟಿಕೆಟ್‌ಗಳಿಗಾಗಿ IRCTC ಹೊಸ ನಿಯಮ ನಿಮಗೂ ತಿಳಿದಿರಲಿ

ಕರೋನಾದ ಕಾರಣ, ವಿಐಪಿ ಸೇರಿದಂತೆ ಎಲ್ಲಾ ರೈಲುಗಳಲ್ಲಿ ಕ್ಯಾಟರಿಂಗ್ ಸೇವೆಯನ್ನು ಪ್ರಸ್ತುತ ಮುಚ್ಚಲಾಗಿದೆ. ಈ ಹಿನ್ನಲೆಯಲ್ಲಿ ಪ್ರಯಾಣಿಕರಿಗೆ ತಾಜಾ ಆಹಾರದ ಬದಲಿಗೆ ರೆಡಿ ಟು ಈಟ್ ಆಹಾರವನ್ನು ನೀಡಲಾಗುತ್ತಿದೆ. ಈ ಮೊದಲ ಹಂತದಲ್ಲಿ, ದೇಶದ ಹೈ-ಸ್ಪೀಡ್ ವಿಐಪಿ ಮತ್ತು ರಾಜಧಾನಿ ಎಕ್ಸ್‌ಪ್ರೆಸ್ (Rajdhani Express) ರೈಲುಗಳಲ್ಲಿ ಈ ಸೇವೆಯನ್ನು ಮರುಸ್ಥಾಪಿಸಲಾಗುವುದು. ಇದರ ನಂತರ ಪ್ಯಾಂಟ್ರಿ ಕಾರನ್ನು ಇತರ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಆರಂಭಿಸಲಾಗುವುದು. 

ಇದನ್ನೂ ಓದಿ- IRCTC: ರೈಲಿನಲ್ಲಿ ಯಾವುದೇ ಬೆರ್ತ್ ಖಾಲಿ ಇದ್ದರೆ ತಕ್ಷಣವೇ ಬರುತ್ತೆ ಅಲರ್ಟ್, ಸಿಗುತ್ತೆ ಕನ್ಫರ್ಮ್ ಟಿಕೆಟ್

ರೈಲ್ವೆ ಮೂಲಗಳ ಪ್ರಕಾರ, ರೈಲುಗಳಲ್ಲಿ ಪ್ಯಾಂಟ್ರಿಕಾರ್ ಸೇವೆಯನ್ನು ಪುನಃಸ್ಥಾಪಿಸಲು ರೈಲ್ವೇ ಮಂಡಳಿ ಕಾಗದದ ಕೆಲಸಗಳನ್ನು ಪೂರ್ಣಗೊಳಿಸಲಾಗಿದೆ. ಇಲ್ಲಿನ ಸೌಲಭ್ಯಗಳನ್ನು ಪರಿಗಣಿಸಿ, ಇ-ಕ್ಯಾಟರಿಂಗ್ ನಂತರ ರೈಲುಗಳ ಕ್ಯಾಟರಿಂಗ್ ಆರಂಭಿಸಲು ಗ್ರೀನ್ ಸಿಗ್ನಲ್ ನೀಡಲು ಪರಿಗಣಿಸಲಾಗುತ್ತಿದೆ. ಮೂಲಗಳ ಪ್ರಕಾರ, ಎಲ್ಲಾ ವಿಭಾಗಗಳ ಹಿರಿಯ ಅಧಿಕಾರಿಗಳು ಮತ್ತು ಐಆರ್‌ಸಿಟಿಸಿ ಈಗಾಗಲೇ ರೈಲುಗಳ ಕ್ಯಾಟರಿಂಗ್ ಸೇವೆಯನ್ನು ಆರಂಭಿಸಲು ರೈಲ್ವೆ ಮಂಡಳಿಗೆ ಪತ್ರ ಬರೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News