ನವದೆಹಲಿ : ಆದಾಯ ತೆರಿಗೆ ಇಲಾಖೆ ಐಟಿಆರ್ ಸಲ್ಲಿಸಲು ಹೊಸ ವೆಬ್ ಸೈಟ್ ಪ್ರಾರಂಭಿಸಲು ಸಜ್ಜಾಗಿರುವುದರಿಂದ ಆದಾಯ ತೆರಿಗೆ ಪಾವತಿದಾರರಿಗೆ ಪ್ರಸ್ತುತ ಇರುವ ಇ-ಫೈಲಿಂಗ್ ಪೋರ್ಟಲ್ ಅನ್ನು ಬಂದ್ ಮಾಡಲಾಗಿದೆ. ಹೊಸ ವೆಬ್ ಪೋರ್ಟಲ್ ನಲ್ಲಿ ಐಟಿಆರ್ ಗಳನ್ನು ಸಲ್ಲಿಸಲು ಮತ್ತು ಇತರ ತೆರಿಗೆ ಸಂಬಂಧಿತ ಕೆಲಸಗಳನ್ನು ಜೂನ್ ಆರಂಭದಲ್ಲಿ ನಿರ್ವಹಿಸಲು ಅವಕಾಶ ನೀಡಲಾಗುತ್ತದೆ.


COMMERCIAL BREAK
SCROLL TO CONTINUE READING

ಹೊಸ ಪೋರ್ಟಲ್(New ITR filing Portal) ಅನ್ನು ಹೆಚ್ಚು ಬಳಕೆದಾರ ಸ್ನೇಹಿಯನ್ನಾಗಿ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿಕೊಂಡಿದ್ದರೂ ಸಹ ಪ್ರಸ್ತುತ ಇರುವ ವೆಬ್ ಪೋರ್ಟಲ್ ಅನ್ನು ಜೂನ್ 1 ರಿಂದ ಜೂನ್ 6 ರ ನಡುವೆ ಆರು ದಿನಗಳ ಕಾಲ ಲಭ್ಯವಿರುವುದಿಲ್ಲ ಎಂದು ತಿಳಿದುಬಂದಿದೆ.


ಇದನ್ನೂ ಓದಿ : Amazon : ಭಾರತದಲ್ಲಿ ಸ್ಥಗಿತಗೊಂಡಿದೆ 'Prime Now' ಸೇವೆ; ಗ್ರಾಹಕರ ಮುಂದಿರುವ ಆಯ್ಕೆ ತಿಳಿಯಿರಿ


ಹೊಸ ವೆಬ್ ಸೈಟ್ ನ ಇ-ಫೈಲಿಂಗ್ ಮಾಹಿತಿ ಇಲ್ಲಿದೆ : ಇಲಾಖೆ(Income Tax Dept)ಯ ಸಿಸ್ಟಮ್ಸ್ ವಿಭಾಗವು ಬುಧವಾರ ಹೊರಡಿಸಿದ ಆದೇಶದಲ್ಲಿ ಹಳೆಯ ಪೋರ್ಟಲ್  www.incometaxindiaefiling.gov.in ಬದಲಾಗಿ ಹೊಸ www.incometaxgov.in ಗೆ 'ಪರಿವರ್ತನೆ' ಜೂನ್ 7 ರಿಂದ ಪೂರ್ಣಗೊಳ್ಳಲಿದೆ ಮತ್ತು ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದೆ.


ಇದನ್ನೂ ಓದಿ : ನಿವೃತ್ತಿ ನಂತ್ರ ಪ್ರತಿ ತಿಂಗಳು ದೊಡ್ಡ ಮೊತ್ತದ ಪಿಂಚಣಿಗಾಗಿ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.