ITR Filing Online: ಆದಾಯ ತೆರಿಗೆಯನ್ನು ಸಲ್ಲಿಸಲು 31 ಜುಲೈ 2022 ಕೊನೆಯ ದಿನಾಂಕವಾಗಿದೆ. ನೀವು ಸಮಯಕ್ಕೆ ಐಟಿಆರ್ ಅನ್ನು ಸಲ್ಲಿಸದಿದ್ದರೆ, ನಿಮಗೆ ದಂಡ ಬೀಳಲಿದೆ. ಓರ್ವ ವ್ಯಕ್ತಿ ಮೃತಪಟ್ಟಿದ್ದರೆ, ಅವರು ಕೂಡ ಐಟಿಆರ್ ಸಲ್ಲಿಸಬೇಕೇ ಅಥವಾ ಬೇಡವೇ ಎಂಬುದನ್ನು ನೀವು ಎಂದಾದರೂ ಯೋಚಿಸಿದ್ದೀರಾ? ನಿಯಮಗಳ ಪ್ರಕಾರ, ಮೃತ ವ್ಯಕ್ತಿಯ ಐಟಿಆರ್ ಅನ್ನು ಸಲ್ಲಿಸುವುದು ಅನಿವಾರ್ಯವಾಗಿದೆ. ಆದರೆ ಅವರ ಮರಣದ ನಂತರ ಅವರ ITR ಅನ್ನು ಯಾರು ಸಲ್ಲಿಸಬಹುದು? ಎಂಬುದರ ಕುರಿತಾದ ನಿಯಮ ಏನಿದೆ ತಿಳಿದುಕೊಳ್ಳೋಣ ಬನ್ನಿ,

COMMERCIAL BREAK
SCROLL TO CONTINUE READING

ಮ್ರುತವ್ಯಕ್ತಿಯ ಕಾನೂನಾತ್ಮಕ ಉತ್ತರಾಧಿಕಾರಿಯ ಗುರುತಿಸುವಿಕೆಯ ಅವಶ್ಯಕತೆ ಇದೆ
ಯಾರೊಬ್ಬರ ಮರಣದ ನಂತರ ಅವರ ITR ಅನ್ನು ಸಲ್ಲಿಸಲು, ಮೊದಲನೆಯದಾಗಿ, ಅವರ ಪತ್ನಿ ಅಥವಾ ಪತಿಯಂತಹ ಅವರ ಸಂಬಂಧಿಕರಲ್ಲಿ ಒಬ್ಬರು ಕಾನೂನು ಉತ್ತರಾಧಿಕಾರಿ ಅಥವಾ ವಾರಸುದಾರರಿಗೆ ಅನುಮೋದನೆ ನೀಡುವ ಅವಶಯಕತೆ ಇದೆ. ನೀವು ನ್ಯಾಯಾಲಯದಿಂದ ಈ ಅನುಮೋದನೆಯನ್ನು ಪಡೆಯಬಹುದು. ಪತಿ-ಪತ್ನಿ ಅಥವಾ ಮಗ-ಮಗಳು ಅಥವಾ ಬೇರೆ ಯಾವುದೇ ನಿಕಟ ಸಂಬಂಧಿಯನ್ನು ನ್ಯಾಯಾಲಯವು ಕಾನೂನುಬದ್ಧ ಉತ್ತರಾಧಿಕಾರಿಗಳನ್ನಾಗಿ ಮಾಡುತ್ತದೆ. ಕಾನೂನುಬದ್ಧ ಉತ್ತರಾಧಿಕಾರಿಯನ್ನು ಸ್ಥಳೀಯ ಮುನ್ಸಿಪಲ್ ಕಾರ್ಪೊರೇಷನ್ ಸಹ ಗುರುತಿಸುತ್ತದೆ. ಆದ್ದರಿಂದ, ಮೊದಲನೆಯದಾಗಿ, ಈ ಕಾನೂನು ಮಾನ್ಯತೆ ಪಡೆಯುವುದು ಕಡ್ಡಾಯವಾಗಿದೆ.


ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರಿಗೊಂದು ಬಿಗ್ ಗಿಫ್ಟ್, ಡಿಎ ಹೆಚ್ಚಳಕ್ಕೂ ಮುನ್ನ ಮಹತ್ವದ ಘೋಷಣೆ ಮಾಡಿದ ಕೇಂದ್ರ ಸರ್ಕಾರ


ಇದಕ್ಕೆ ಹೆಸರು ನೋಂದಣಿ ಹೇಗೆ ಮಾಡಬೇಕು?
>> ಇದಕ್ಕಾಗಿ ನೀವು ಮೊದಲು ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
>> ಇದನ್ನು ಮಾಡಲು ಮೊದಲನೆಯದಾಗಿ, ನ್ಯಾಯಾಲಯ ಅಥವಾ ಮುನ್ಸಿಪಲ್ ಕಾರ್ಪೊರೇಷನ್‌ನಿಂದ ಕಾನೂನು ಉತ್ತರಾಧಿಕಾರಿ ಪ್ರಮಾಣಪತ್ರದ (ವಾರಸುದಾರರ ಪ್ರಮಾಣ ಪತ್ರ) ಪ್ರತಿಯನ್ನು ತೆಗೆದುಕೊಳ್ಳಬೇಕು.
>> ಈಗ ನೀವು ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ https://www.incometax.gov.in/ ಗೆ ಭೇಟಿ ನೀಡಿ.
>> ಅಲ್ಲಿರುವ 'ನನ್ನ ಖಾತೆ' ಆಯ್ಕೆಯನ್ನು ಆಯ್ದುಕೊಳ್ಳುವ ಮೂಲಕ 'ಕಾನೂನುಬದ್ಧ ಉತ್ತರಾಧಿಕಾರಿಯಾಗಿ ನೋಂದಾಯಿಸಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
>> ಬಳಿಕ ನಿಮ್ಮನ್ನು ನೀವು ಕಾನೂನು ಉತ್ತರಾಧಿಕಾರಿಯಾಗಿ ನೋಂದಾಯಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
>> ಕೆಲವೇ ದಿನಗಳ ಬಳಿಕ ನೀವು ಆದಾಯ ತೆರಿಗೆ ಇಲಾಖೆಯಿಂದ ನಿಮ್ಮ ನೋಂದಣಿಯ ಬಗ್ಗೆ ಮಾಹಿತಿಯನ್ನು ಪಡೆಯುವಿರಿ.


ಇದನ್ನೂ ಓದಿ-GST Update : ಜು.18ರಿಂದ ದುಬಾರಿಯಾಗಲಿವೆ ಗೋಧಿ ಹಿಟ್ಟು ಮೊಸರು ಸೇರಿ ದೈನಂದಿನ ವಸ್ತುಗಳ ಬೆಲೆ !


ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ?
>> ಸಾಮಾನ್ಯ ಜನರಂತೆಯೇ ಮೃತ ವ್ಯಕ್ತಿಯ ಐಟಿಆರ್ ಕೂಡ ಸಲ್ಲಿಸಲಾಗುತ್ತದೆ.
>> ಏಕೆಂದರೆ, ಒಂದೊಮ್ಮೆ ನೀವು ಕಾನೂನುಬದ್ಧ ಉತ್ತರಾಧಿಕಾರಿಯಾದ ನಂತರ, ನೀವು ಮೃತ ವ್ಯಕ್ತಿಯ ಖಾತೆಗೆ ಅಧಿಕೃತವಾಗಿ ಲಾಗಿನ್ ಆಗಲು ಸಾಧ್ಯವಾಗಲಿದೆ.
>> ಐಟಿಆರ್ ಅನ್ನು ಭರ್ತಿ ಮಾಡಿದ ನಂತರ, ತೆರಿಗೆ ಇಲಾಖೆಯು ಆ ಖಾತೆಯನ್ನು ಶಾಶ್ವತವಾಗಿ ಮುಚ್ಚುತ್ತದೆ.
>> ಈ ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನೀವು ಮೃತ ವ್ಯಕ್ತಿಯ ಮರಣ ಪ್ರಮಾಣಪತ್ರ, ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್, ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಜೊತೆಗೆ ನಿಮ್ಮನ್ನು ಕಾನೂನುಬದ್ಧ ಉತ್ತರಾಧಿಕಾರಿ ಮಾಡುವ ಪ್ರಮಾಣಪತ್ರವನ್ನು ಹೊಂದಿರಬೇಕು.
>> ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ ನಂತರ, ಮರುಪಾವತಿಯು ಮೃತ ವ್ಯಕ್ತಿಯ ಖಾತೆಗೆ ಬರುತ್ತದೆ.
>> ಬಳಿಕ ಆ ಬ್ಯಾಂಕ್ ಖಾತೆಯಿಂದ ಹಣವನ್ನು ಹಿಂಪಡೆಯಲು ಮತ್ತು ಅದನ್ನು ಸ್ಥಗಿತಗೊಳಿಸಲು ನೀವು ಅವರ ಬ್ಯಾಂಕ್ ಅನ್ನು ಸಂಪರ್ಕಿಸಬೇಕಾಗುತ್ತದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ