7th Pay Commission: ಸರ್ಕಾರಿ ನೌಕರರಿಗೊಂದು ಬಿಗ್ ಗಿಫ್ಟ್, ಡಿಎ ಹೆಚ್ಚಳಕ್ಕೂ ಮುನ್ನ ಮಹತ್ವದ ಘೋಷಣೆ ಮಾಡಿದ ಕೇಂದ್ರ ಸರ್ಕಾರ

7th Pay Commission Latest News: ಕೇಂದ್ರ ಸರ್ಕಾರಿ ನೌಕರರ ಪಾಲಿಗೆ ಗುಡ್ ನ್ಯೂಸ್ ಪ್ರಕಟವಾಗಿದೆ. ಕೇಂದ್ರ ಸರ್ಕಾರಿ ನೌಕರರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಈ ನಿರ್ಧಾರದಿಂದ ಸರ್ಕಾರಿ ನೌಕರರಿಗೆ ನೇರ ಲಾಭ ಸಿಗಲಿದೆ. ಈ ಕುರಿತಾದ ಲೇಟೆಸ್ಟ್ ಅಪ್ಡೇಟ್ ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Jul 11, 2022, 06:31 PM IST
  • ಡಿಎ ಹೆಚ್ಚಳಕ್ಕೂ ಮುನ್ನ ಕೇಂದ್ರ ನೌಕರರಿಗೆ ಭರ್ಜರಿ ಸುದ್ದಿ ಪ್ರಕಟವಾಗಿದೆ.
  • ಕೇಂದ್ರ ಸರ್ಕಾರಿ ನೌಕರರ ಹಿತದೃಷ್ಟಿಯಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
  • ನೌಕರರಿಗೆ ಮನೆ ನಿರ್ಮಿಸಲು ನೀಡುವ ಕಟ್ಟಡದ ಮುಂಗಡ ಹಣದ ಬಡ್ಡಿ ದರ ಇಳಿಕೆ
7th Pay Commission: ಸರ್ಕಾರಿ ನೌಕರರಿಗೊಂದು ಬಿಗ್ ಗಿಫ್ಟ್, ಡಿಎ ಹೆಚ್ಚಳಕ್ಕೂ ಮುನ್ನ ಮಹತ್ವದ ಘೋಷಣೆ ಮಾಡಿದ ಕೇಂದ್ರ ಸರ್ಕಾರ title=
7th Pay Commission/HBA Interest Rates

7th Pay Commission/HBA Interest Rates: ಡಿಎ ಹೆಚ್ಚಳಕ್ಕೂ ಮುನ್ನ ಕೇಂದ್ರ ನೌಕರರಿಗೆ ಭರ್ಜರಿ ಸುದ್ದಿ ಪ್ರಕಟವಾಗಿದೆ. ಕೇಂದ್ರ ಸರ್ಕಾರಿ ನೌಕರರ ಹಿತದೃಷ್ಟಿಯಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ನೌಕರರಿಗೆ ಮನೆ ನಿರ್ಮಿಸಲು ನೀಡುವ ಕಟ್ಟಡದ ಮುಂಗಡದ (ಎಚ್‌ಬಿಎ) ಬಡ್ಡಿ ದರವನ್ನು ಅಂದರೆ ಬ್ಯಾಂಕ್‌ನಿಂದ ಪಡೆದ ಗೃಹ ಸಾಲವನ್ನು ಶೇಕಡಾ 7.9 ರಿಂದ ಶೇಕಡಾ 7.1 ಕ್ಕೆ ಇಳಿಕೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಆಫಿಸ್ ಮೆಮೊರೆಂಡಮ್ ಕೂಡ ಜಾರಿಗೊಳಿಸಿದೆ. ಸರ್ಕಾರದ ಈ ನಿರ್ಧಾರದಿಂದ ನೌಕರರಿಗೆ ಹೆಚ್ಚಿನ ಲಾಭವಾಗಲಿದೆ.

ನೌಕರರಿಗೆ ಬಿಗ್ ರಿಲೀಫ್!
ಈ ನಿರ್ಧಾರದ ಅಡಿಯಲ್ಲಿ, ಏಪ್ರಿಲ್ 1, 2022 ರಿಂದ ಮಾರ್ಚ್ 31, 2023 ರವರೆಗೆ ಸರ್ಕಾರವು ನೌಕರರಿಗೆ ಮನೆ ನಿರ್ಮಿಸಲು ಅಥವಾ ಖರೀದಿಸಲು ಬ್ಯಾಂಕ್‌ನಿಂದ ಪಡೆದ ಗೃಹ ಸಾಲವನ್ನು ತೀರಿಸಲು ನೀಡುವ ಮುಂಗಡ ಹಣದ ಬಡ್ಡಿಯನ್ನು  80 ಬೇಸಿಸ್ ಪಾಯಿಂಟ್ ಅಥವಾ ಶೇ.0.8ರಷ್ಟು ಕಡಿತಗೊಳಿಸಿದೆ. ಅಂದರೆ, ಇದೀಗ ಸ್ವಂತ ಮನೆ ಹೊಂದುವ ಸರ್ಕಾರಿ ನೌಕರರ ಕನಸು ಈಡೇರುವುದು ಮತ್ತಷ್ಟು ಸುಲಭವಾಗಲಿದೆ. ನೌಕರರು ಇದೀಗ ಈ ಹೊಸ ಬಡ್ಡಿದರವನ್ನು ಮಾರ್ಚ್ 31, 2023 ರವರೆಗೆ ಅನ್ವಯಿಸಲಿದೆ.

ಯಾವ ದರದಲ್ಲಿ ನಿಮಗೆ ಈ ಅಡ್ವಾನ್ಸ್ ಸಿಗಲಿದೆ?
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಈ ಆಫೀಸ್ ಮೆಮೊರೆಂಡಮ್ ಜಾರಿಗೊಳಿಸಿದ್ದು, ಮುಂಗಡವಾಗಿ ಪಡೆಯುವ ಹಣದ ಬಡ್ಡಿದರಗಳಲ್ಲಿ ಕಡಿತದ ಬಗ್ಗೆ ಮಾಹಿತಿಯನ್ನು ನೀಡಿದೆ. ನೌಕರರು ಇದೀಗ ಮಾರ್ಚ್ 31, 2023 ರವರೆಗೆ ವಾರ್ಷಿಕ ಶೇಕಡಾ 7.1 ರ ದರದಲ್ಲಿ ಮುಂಗಡವನ್ನು ತೆಗೆದುಕೊಳ್ಳಬಹುದಾಗಿದೆ ಎಂದು ಅದು ಹೇಳಿದೆ, ಸರ್ಕಾರದ ಈ ಪ್ರಕಟಣೆಯ ಮೊದಲು ಮುಂಗಡ ಹಣದ ವಾರ್ಷಿಕ ಬಡ್ಡಿ ದರ ಶೇ.7.9 ರಷ್ಟಿತ್ತು. ಸರ್ಕಾರದ ನಿರ್ಧಾರದ ಅಡಿಯಲ್ಲಿ, ನೌಕರರು ಇದೀಗ ಮತ್ತಷ್ಟು ಅಗ್ಗದ ದರದಲ್ಲಿ ತಮ್ಮ ಮನೆಗಳನ್ನು ನಿರ್ಮಿಸಬಹುದು.

ಇದನ್ನೂ ಓದಿ-GST Update : ಜು.18ರಿಂದ ದುಬಾರಿಯಾಗಲಿವೆ ಗೋಧಿ ಹಿಟ್ಟು ಮೊಸರು ಸೇರಿ ದೈನಂದಿನ ವಸ್ತುಗಳ ಬೆಲೆ !

ಎಷ್ಟು ಹಣವನ್ನು ಅಡ್ವಾನ್ಸ್ ಪಡೆಯಬಹುದು?
ಈ ಸರ್ಕಾರಿ ಸೌಲಭ್ಯದ ಅಡಿ ಎಷ್ಟು ಅಡ್ವಾನ್ಸ್ ಹಣ ಸಿಗಲಿದೆ? ಎಂಬ ಪ್ರಶ್ನೆ ಇದೀಗ ನಿಮ್ಮ ಮನಸ್ಸಿನಲ್ಲಿಯೂ ಮೂಡಿರಬಹುದು. ಸರ್ಕಾರವು ನೀಡುವ ಈ ವಿಶೇಷ ಸೌಲಭ್ಯದ ಅಡಿಯಲ್ಲಿ, ಕೇಂದ್ರ ನೌಕರರು ತಮ್ಮ ಮೂಲ ವೇತನದ ಪ್ರಕಾರ 34 ತಿಂಗಳುಗಳ ವೇತನ ಅಥವಾ ಗರಿಷ್ಠ 25 ಲಕ್ಷದವರೆಗೆ ಎಂಬ ಎರಡು ರೀತಿಯಲ್ಲಿ ಅಡ್ವಾನ್ಸ್ ಪಡೆಯಬಹುದು. ಇದಲ್ಲದೆ, ಮನೆಯ ಒಟ್ಟು ವೆಚ್ಚ ಅಥವಾ ಮರುಪವತಿಸುವ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನೌಕರರು ಯಾವುದು ಕಡಿಮೆಯೋ, ಆ ಮೊತ್ತವನ್ನು ಮುಂಗಡವಾಗಿ ಪಡೆದುಕೊಳ್ಳಬಹುದು.

ಇದನ್ನೂ ಓದಿ-Vijay Mallya Case: ವಿಜಯ್ ಮಲ್ಯಗೆ ನಾಲ್ಕು ತಿಂಗಳ ಸೆರೆವಾಸ, ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಶಿಕ್ಷೆ ಪ್ರಕಟಿಸಿದ SC

HBA ಎಂದರೇನು ಗೊತ್ತಾ?
ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ ಮನೆ ನಿರ್ಮಿಸಲು ಮುಂಗಡ ಹಣವನ್ನು ನೀಡುತ್ತದೆ ಎಂಬುದು ಉಲ್ಲೇಖನೀಯ. ಇದರಲ್ಲಿ ಉದ್ಯೋಗಿಯು ತನ್ನ ಅಥವಾ ತನ್ನ ಹೆಂಡತಿಯ ಹೆಸರಿನಲ್ಲಿ ತೆಗೆದಿರುವ ನಿವೇಶನದಲ್ಲಿ ಮನೆ ಕಟ್ಟಲು ಮುಂಗಡ ಪಡೆದುಕೊಳ್ಳಬಹುದು. ಈ ಯೋಜನೆಯನ್ನು 1 ಅಕ್ಟೋಬರ್ 2020 ರಿಂದ ಆರಂಭಿಸಲಾಗಿದೆ ಮತ್ತು ಇದರ ಅಡಿಯಲ್ಲಿ, 31 ಮಾರ್ಚ್ 2023 ರವರೆಗೆ, ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ 7.1% ಬಡ್ಡಿ ದರದಲ್ಲಿ ಮನೆ ನಿರ್ಮಾಣಕ್ಕಾಗಿ ಮುಂಗಡವನ್ನು ನೀಡುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
 

Trending News