ITR Guidelines: ಐಟಿಆರ್ ಫೈಲ್ ಮಾಡುವುದು ನಿಜಕ್ಕೂ ಒಂಥರಾ ಕಿರಿಕ್. ಹಾಗಂತ ಮಾಡದೆ ಇರಲು ಸಾಧ್ಯವಿಲ್ಲ. ಮಾಡಿಸುತ್ತೇವೆ ಅಂತಾ ಯಾರಿಂದಲೋ ಅಂದರೆ ವೃತ್ತಿಪರರಲ್ಲದವರಿಂದ (Non-Professionals) ಮಾಡಿಸಿದರೆ ಆಗಲೂ ಸಮಸ್ಯೆ. ಹಾಗಾಗಿ ನೀವು ಯಾರಿಂದ ಐಟಿಆರ್ ಫೈಲ್ ಮಾಡಿಸುತ್ತಿರಿ ಎನ್ನುವುದು ತುಂಬಾ ಇಂಪಾರ್ಟೆಂಟ್. ಗೊತ್ತಿರುವವರು ಅನ್ನುವ ಕಾರಣಕ್ಕೆ ಅಥವಾ ಕಡಿಮೆ ದುಡ್ಡಿಗೆ ಮಾಡುತ್ತಾರೆ ಎನ್ನುವ ಕಾರಣಕ್ಕೆ ವೃತ್ತಿಪರರಲ್ಲದವರಿಂದ ನಿಮ್ಮ ಐಟಿಆರ್ ಫೈಲ್ ಮಾಡಿಸಬೇಡಿ. ಇದರಿಂದ ನಿಮಗೆ ಸಮಸ್ಯೆ ಆಗೋದು ಗ್ಯಾರಂಟಿ.


COMMERCIAL BREAK
SCROLL TO CONTINUE READING

ಸದ್ಯದ ಟ್ರೆಂಡ್ ನೋಡುವುದಾದರೆ ಐಟಿಆರ್ ಫೈಲ್ ಮಾಡುವ ಮುಕ್ಕಾಲು ಜನ ವೃತ್ತಿಪರರಲ್ಲದವರಿಂದ ಮಾಡಿಸ್ತುತ್ತಿದ್ದಾರೆ. ಮೊದಲನೆಯದಾಗಿ ವೃತ್ತಿಪರರಲ್ಲದವರು ನಿಮಗೆ ಕಡಿಮೆ ದುಡ್ಡಿಗೆ ಐಟಿಆರ್ ಫೈಲ್ ಮಾಡಿಕೊಡುವುದಾಗಿ ಹೇಳುತ್ತಾರೆ. ನಂತರ ನಿಮಗೆ ಹೆಚ್ಚಿನ ಹಣ ಮರುಪಾವತಿ ಆಗುವಂತೆ ಮಾಡುತ್ತೇವೆ ಎಂದು ಹೇಳುತ್ತಾರೆ. ಇಂಥವರನ್ನು ನಂಬಿದರೆ ಇವತ್ತಲ್ಲ ನಾಳೆ ಸಮಸ್ಯೆ ಆಗುವುದು ಖಚಿತ. 


ವೃತ್ತಿಪರರಲ್ಲದವರು ನಿಮಗೆ ಹೆಚ್ಚಿನ ಮೊತ್ತದ ಮರುಪಾವತಿ ಮಾಡಿಸಲು ಕೆಲವೊಂದು ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡದೆ ಮುಚ್ಚಿಡುವ ಸಾಧ್ಯತೆ ಇರುತ್ತದೆ. ಇತ್ತೀಚಿನ ವರ್ಷಗಳಲ್ಲಿ ನೌಕರರು ಐಟಿಆರ್ ಫೈಲ್ ಮಾಡುವ ವೇಳೆ ನಕಲಿ ದೇಣಿಗೆ ರಸೀದಿಗಳನ್ನು ಲಗತ್ತಿಸಿರುವುದು, ನಕಲಿ ವೆಚ್ಚಗಳನ್ನು ಉಲ್ಲೇಖಿಸಿರುವುದು ಪತ್ತೆಯಾಗಿದೆ. ನಿಮ್ಮ ಐಟಿಆರ್ ಫೈಲ್ ವಿಷಯದಲ್ಲೂ ಹೀಗೆ ಆದರೆ ಸಮಸ್ಯೆ ಆಗುವುದು ನಿಮಗೆ ಹೊರತು ಐಟಿಆರ್ ಫೈಲ್ ಮಾಡಿದ ವ್ಯಕ್ತಿಗಲ್ಲ. ಇದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. 


ಇದನ್ನೂ ಓದಿ- RBIನಿಂದ 500 ರೂಪಾಯಿ ನೋಟುಗಳ ಬಗ್ಗೆ ಹೊಸ ಗೈಡ್ ಲೈನ್: ಇಲ್ಲಿದೆ ಮಹತ್ವದ ಮಾಹಿತಿ


ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಆದಾಯ ತೆರಿಗೆ ಇಲಾಖೆ ಇದೀಗ ಇಂತಹ ಬ್ಯಾಡ್ ಪ್ರಾಕ್ಟೀಸ್ ಗೆ ಕಡಿವಾಣ ಹಾಕಲು ಮುಂದಾಗಿದೆ. ಮರುಪಾವತಿ ವಿಷಯದಲ್ಲಿ ಕಟ್ಟುನಿಟ್ಟಿನ ತನಿಖೆ ನಡೆಸಲು ತೀರ್ಮಾನಿಸಿದೆ. ಒಂದೇ ಏಜೆನ್ಸಿ ಮೂಲಕ ಸಾಮೂಹಿಕವಾಗಿ ಐಟಿಆರ್ ಸಲ್ಲಿಸುವ ಉದ್ಯೋಗಿಗಳ ವ್ಯವಹಾರದ ಬಗ್ಗೆಯೂ ನಿಗಾ ಇಡಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. 


ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಸೂಚನೆಗಳ ಪ್ರಕಾರ ಕೃತಕ ಬುದ್ದಿಮತ್ತೆ (AI) ಬಳಸಿಕೊಂಡು ಅನುಮಾನಾಸ್ಪದ ಆದಾಯ ಮತ್ತು ಮರುಪಾವತಿಯನ್ನು ಪತ್ತೆ ಮಾಡಲಾಗುತ್ತದೆ. ಸದ್ಯಕ್ಕೆ ಕಳೆದ 9 ವರ್ಷಗಳಿಂದ ಆಗಿರುವ ಐಟಿಆರ್ ಫೈಲ್ ಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಒಂದು ವೇಳೆ ಈ ತನಿಖೆಯಲ್ಲಿ ನಿಮ್ಮ ಐಟಿಆರ್ ಫೈಲ್ ಸುಳ್ಳು ಮಾಹಿತಿಯಿಂದ ಕೂಡಿದೆ ಎಂದು ಗೊತ್ತಾದರೆ ಈ ವರ್ಷವೇ ಮರುಪಾವತಿಯನ್ನು ವಾಪಸ್ ಪಡೆಯುವ ಸಾಧ್ಯತೆಯೂ ಇದೆ. 


ಇದನ್ನೂ ಓದಿ- ಆದಾಯ ತೆರಿಗೆ ಇಲಾಖೆ ನಿಮ್ಮ ಹೆಂಡತಿ/ಗಂಡನಿಗೂ ನೋಟಿಸ್ ಕಳುಹಿಸಬಹುದು ಎಚ್ಚರ!


ತೆರಿಗೆದಾರರು ಮಾಡಿರುವ ರಿಟರ್ನ್ ಕ್ಲೈಮ್ ಸರಿಯಾಗಿಲ್ಲ ಎನ್ನುವುದು ಗೊತ್ತಾದರೆ ಒಂದಲ್ಲ, ನಾಲ್ಕು ವರ್ಷಗಳ ಮರುಪಾವತಿಯನ್ನು ವಾಪಸ್ ಪಡೆಯಬಹುದು ಎಂದು ತೆರಿಗೆ ತಜ್ಞರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನೀವು ಆದಾಯ ತೆರಿಗೆ ಇಲಾಖೆ ಪೋರ್ಟಲ್ (www.incometax.gov.in)ಗೆ ಹೋಗಿ ನಿಮ್ಮ ID (PAN Number) ಹಾಕಿ, ಪಾಸ್‌ವರ್ಡ್ ಕೊಟ್ಟು ಲಾಗ್ ಇನ್ ಮಾಡಿ.  ನಿಮ್ಮ ಖಾತೆಯ ಮೇಲೆ ಕ್ಲಿಕ್ ಮಾಡಿ ಮರುಪಾವತಿ/ಬೇಡಿಕೆ ಸ್ಥಿತಿಯನ್ನು ತೆರೆಯಿರಿ. ಅಲ್ಲಿ ಆದಾಯ ತೆರಿಗೆ ಮರುಪಾವತಿ ಆಯ್ಕೆ ಮಾಡಿ. ನಂತರ ರಶೀದಿ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ. ಆಗ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಐಟಿಆರ್ ಬಗ್ಗೆ ಎಲ್ಲಾ ಮಾಹಿತಿಗಳು ಸಿಗುತ್ತವೆ. 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.