ಬೆಂಗಳೂರು : PM Jan dhan Account : ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದಿದ್ದರೂ 10 ಸಾವಿರ ರೂ. ನಗದು ಪಡೆಯುವುದು ಸಾಧ್ಯವಾಗುತ್ತದೆ. ಪ್ರಧಾನಮಂತ್ರಿ ಜನ್ ಧನ್ ಯೋಜನೆ ಅಡಿಯಲ್ಲಿ, ಖಾತೆಯಲ್ಲಿ ನಗದು ಇಲ್ಲದಿದ್ದರೂ 10 ಸಾವಿರದವರೆಗೆ ಪಡೆಯಬಹುದು. ಇಷ್ಟು ಮಾತ್ರವಲ್ಲದೆ ಖಾತೆದಾರರು ಇನ್ನೂ ಹಲವು ಸೌಲಭ್ಯಗಳನ್ನು ಪಡೆಯುತ್ತಾರೆ.  


COMMERCIAL BREAK
SCROLL TO CONTINUE READING

ಯಾವಾಗ ಪ್ರಾರಂಭವಾಯಿತು ಈ ಯೋಜನೆ : 
2014 ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜನ್ ಧನ್ ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು. ಇದರ ನಂತರ, ಈ ಯೋಜನೆಯನ್ನು ಆಗಸ್ಟ್ 28 ರಂದು ಪ್ರಾರಂಭಿಸಲಾಯಿತು. ಇಲ್ಲಿಯವರೆಗೆ  42 ಕೋಟಿಗೂ ಅಧಿಕ ಮಂದಿ ಜನ್ ಧನ್ ಖಾತೆಯನ್ನು ಹೊಂದಿದ್ದಾರೆ. ಈ ಯೋಜನೆಯ ಯಶಸ್ಸನ್ನು ನೋಡಿದ ಸರ್ಕಾರವು ತನ್ನ ಎರಡನೇ ಆವೃತ್ತಿಯನ್ನು 2018 ರಲ್ಲಿ ಆರಂಭಿಸಿ ಹೆಚ್ಚಿನ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳನ್ನು  ಪ್ರಾರಂಭಿಸಿತು.


ಇದನ್ನೂ ಓದಿ  :  LIC IPO Listing: LIC ಷೇರು ಹೂಡಿಕೆದಾರರಿಗೆ ಬಿಗ್ ಶಾಕ್, ಮಾರುಕಟ್ಟೆಯಲ್ಲಿ ಶೇ.9 ರಷ್ಟು ಡಿಸ್ಕೌಂಟ್ ನಲ್ಲಿ ಲಿಸ್ಟ್


 ಯಾವ ಸೌಲಭ್ಯಗಳು ಲಭ್ಯ :
1. ಇದರಲ್ಲಿ 10 ವರ್ಷದೊಳಗಿನ ಮಕ್ಕಳ ಖಾತೆಯನ್ನೂ ತೆರೆಯಬಹುದು. 
2. ಇದರ ಅಡಿಯಲ್ಲಿ,  ರುಪೇ ಎಟಿಎಂ ಕಾರ್ಡ್,  2 ಲಕ್ಷ ರೂ ಅಪಘಾತ ವಿಮೆ ರಕ್ಷಣೆ, 30 ಸಾವಿರ ರೂ  ಜೀವ ರಕ್ಷಣೆ ಮತ್ತು ಠೇವಣಿ ಮೊತ್ತದ ಮೇಲಿನ ಬಡ್ಡಿಯನ್ನು ಪಡೆಯುತ್ತೀರಿ. 
3. ಇದರ ಮೇಲೆ 10 ಸಾವಿರ ಓವರ್‌ಡ್ರಾಫ್ಟ್ ಸೌಲಭ್ಯವೂ ಸಿಗಲಿದೆ.
4. ಈ ಖಾತೆಯನ್ನು ಯಾವುದೇ ಬ್ಯಾಂಕಿನಲ್ಲಿ ತೆರೆಯಬಹುದು.
5. ಇದರಲ್ಲಿ ಗ್ರಾಹಕರು ಕನಿಷ್ಟ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕಾಗಿಲ್ಲ


ಜನ್ ಧನ್ ಖಾತೆಗೆ ಅಗತ್ಯವಿರುವ ದಾಖಲೆಗಳು  :
1. ಜನ್ ಧನ್ ಖಾತೆ ತೆರೆಯಬೇಕಾದರೆ ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಕೆವೈಸಿ ಕಡ್ಡಾಯವಾಗಿದೆ.
2. ನೀವು ದಾಖಲೆಗಳನ್ನು ಹೊಂದಿಲ್ಲದಿದ್ದರೆ, ಸಣ್ಣ ಖಾತೆಯನ್ನು ತೆರೆಯಬಹುದು.
ಇದರಲ್ಲಿ, ಸೆಲ್ಫ್ ಅಟೆಸ್ಟೆಡ್  ಫೋಟೋಗ್ರಾಫ್ ಮತ್ತು ಬ್ಯಾಂಕ್ ಅಧಿಕಾರಿಯ ಮುಂದೆ ಸಹಿ ಹಾಕುವುದು ಅಗತ್ಯ. 
3. ಜನ್ ಧನ್ ಖಾತೆಯನ್ನು ತೆರೆಯಲು ನೀವು ಯಾವುದೇ ರೀತಿಯ ಶುಲ್ಕವನ್ನು ಪಾವತಿಸಬೇಕಾಗಿಲ್ಲ.


ಇದನ್ನೂ ಓದಿ  :  Gold Price Today: ಇಂದು ನಿಮ್ಮ ನಗರದಲ್ಲಿನ ಚಿನ್ನ ಬೆಳ್ಳಿ ದರ ಹೀಗಿದೆ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.