LIC IPO Listing: LIC ಷೇರು ಹೂಡಿಕೆದಾರರಿಗೆ ಬಿಗ್ ಶಾಕ್, ಮಾರುಕಟ್ಟೆಯಲ್ಲಿ ಶೇ.9 ರಷ್ಟು ಡಿಸ್ಕೌಂಟ್ ನಲ್ಲಿ ಲಿಸ್ಟ್

LIC IPO Listing: ದೇಶದ ಅತಿದೊಡ್ಡ ವಿಮಾ ಕಂಪನಿಯಾಗಿರುವ ಭಾರತೀಯ ಜೀವನ ವಿಮಾ ನಿಗಮನ ಷೇರುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ದೇಶದ ಅತಿ ದೊಡ್ಡ ಐಪಿಓ BSE ಹಾಗೂ NSE ನಲ್ಲಿ ಶೇ.8 ರಿಂದ ಶೇ.9 ರಷ್ಟು ಡಿಸ್ಕೌಂಟ್ ನಲ್ಲಿ ಲಿಸ್ಟ್ ಆಗಿದೆ. 

Written by - Nitin Tabib | Last Updated : May 17, 2022, 11:41 AM IST
  • ಎಲ್ಐಸಿ ಐಪಿಓ ಹೂಡಿಕೆದಾರರಿಗೆ ಬಿಗ್ ಶಾಕ್
  • ಮಾರುಕಟ್ಟೆಯ ಮೊದಲ ದಿನವೇ ಶೇ.8 ರಿಂದ ಶೇ.9 ರಷ್ಟು ಡಿಸ್ಕೌಂಟ್ ನಲ್ಲಿ ಪಟ್ಟಿಯಾದ ಷೇರುಗಳು
  • ಬಳಿಕ ಚೇತರಿಕೆಯ ನಂತರ ಮತ್ತೆ ಕುಸಿತ
LIC IPO Listing: LIC ಷೇರು ಹೂಡಿಕೆದಾರರಿಗೆ ಬಿಗ್ ಶಾಕ್, ಮಾರುಕಟ್ಟೆಯಲ್ಲಿ ಶೇ.9 ರಷ್ಟು ಡಿಸ್ಕೌಂಟ್ ನಲ್ಲಿ ಲಿಸ್ಟ್  title=
LIC IPO stock listing

LIC IPO Listing: ದೇಶದ ಅತಿದೊಡ್ಡ ವಿಮಾ ಕಂಪನಿಯಾಗಿರುವ ಭಾರತೀಯ ಜೀವನ ವಿಮಾ ನಿಗಮನ ಷೇರುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ದೇಶದ ಅತಿ ದೊಡ್ಡ ಐಪಿಓ BSE ಹಾಗೂ NSE ನಲ್ಲಿ ಶೇ.8 ರಿಂದ ಶೇ.9 ರಷ್ಟು ಡಿಸ್ಕೌಂಟ್ ನಲ್ಲಿ ಲಿಸ್ಟ್ ಆಗಿದೆ.  ಇದಕ್ಕೂ ಮುನ್ನ ಮಾರುಕಟ್ಟೆಯ ತಜ್ಞರು  ಕೂಡ ಎಲ್ಐಸಿ ಷೇರುಗಳು ಮಾರುಕಟ್ಟೆಯಲ್ಲಿ ಡಿಸ್ಕೌಂಟ್ ನಲ್ಲಿ ಲಿಸ್ಟ್ ಆಗಲಿವೆ ಎಂಬ ಅಂದಾಜು ವ್ಯಕ್ತಪಡಿಸಿದ್ದರು. 

ಮೊದಲ ದಿನವೇ ಹೂಡಿಕೆದಾರರಿಗೆ ನಿರಾಶೆ 
ವಹಿವಾಟಿನ ಮೊದಲ ದಿನವೇ ವಿಮಾ ಕಂಪನಿಯ ಷೇರುಗಳ ಪ್ರದರ್ಶನ ಹೂಡಿಕೆದಾರರನ್ನು ನಿರಾಸೆಗೊಳಿಸಿದೆ. ಎಲ್‌ಐಸಿಯ ಷೇರುಗಳು ಬಿಎಸ್‌ಇಯಲ್ಲಿ 867.20 ರೂ.ಗಳಲ್ಲಿ 81.80 ರೂ.ಗಳ ರಿಯಾಯಿತಿಯೊಂದಿಗೆ (8.62% ಕುಸಿತ) ಪಟ್ಟಿಮಾಡಲಾಗಿದೆ. ಇದೇ ವೇಳೆ, ಈ ಷೇರನ್ನು ಎನ್‌ಎಸ್‌ಇಯಲ್ಲಿ ರೂ 872 ಕ್ಕೆ ರೂ 77 ರ ರಿಯಾಯಿತಿಯೊಂದಿಗೆ ಪಟ್ಟಿ ಮಾಡಲಾಗಿದೆ.

ಇದನ್ನೂ ಓದಿ-Gold Price Today: ಇಂದು ನಿಮ್ಮ ನಗರದಲ್ಲಿನ ಚಿನ್ನ ಬೆಳ್ಳಿ ದರ ಹೀಗಿದೆ

ಸ್ವಲ್ಪ ಸಮಯದ ನಂತರ ಲಘು ಚೇತರಿಕೆ
ಆದಾಗ್ಯೂ. ಸ್ವಲ್ಪ ಸಮಯದ ನಂತರ ಲಿಸ್ಟಿಂಗ್ ನಲ್ಲಿ ಷೇರುಗಳ ಬೆಲೆ ಚೇತರಿಸಿಕೊಡಿದ್ದು, ರೂ.918 ಕ್ಕೆ ಏರಿಕೆಯಾಗಿದೆ. ಮೇ 9ರವರೆಗೆ ಎಲ್ಐಸಿಯ ಷೇರುಗಳಲ್ಲಿ ಹಣ ಹೂಡಿಕೆ ಮಾಡಲು ಅವಕಾಶ ನೀಡಲಾಗಿತ್ತು. ಇದಾದ ಬಳಿಕ ಮೇ 12ರಂದು ಹೂಡಿಕೆದಾರರಿಗೆ ಷೇರು ಹಂಚಿಕೆ ಮಾಡಲಾಗಿತ್ತು. ಇದಕ್ಕಾಗಿ ಪ್ರತಿ ಷೇರಿನ ಬೆಲೆ ರೂ. 902- ರೂ.949ರ ಮಧ್ಯೆ ಇರಿಸಲಾಗಿತ್ತು. 

ಇದನ್ನೂ ಓದಿ-Petrol Diesel Price may 17th: ಇಂದು ನಿಮ್ಮ ನಗರದಲ್ಲಿ ಎಷ್ಟಿದೆ ಪೆಟ್ರೋಲ್ ಡಿಸೇಲ್ ಬೆಲೆ ?

20,557 ಕೋಟಿ ರೂಪಾಯಿಗಳ ಈ ಐಪಿಒಗೆ ದೇಶೀಯ ಹೂಡಿಕೆದಾರರಿಂದ ಸರ್ಕಾರಕ್ಕೆ ಬಂಪರ್ ಪ್ರತಿಕ್ರಿಯೆ ಸಿಕ್ಕಿದೆ. ಸರ್ಕಾರ ಎಲ್ಐಸಿ ಪಾಲಿಸಿದಾರರಿಗೆ ಮತ್ತು ಚಿಲ್ಲರೆ ಹೂಡಿಕೆದಾರರಿಗೆ ಕ್ರಮವಾಗಿ ಪ್ರತಿ ಷೇರಿಗೆ ರೂ. 889 ಮತ್ತು 904 ರೂ. ನಿಗದಿಪಡಿಸಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News